ಅಕ್ಷಯ್ ಕುಮಾರ್ ಬಾಲಿವುಡ್ನ ಪ್ರಸಿದ್ಧ ನಟ ಎಂಬುದೂ ಎಲ್ಲರಿಗೂ ತಿಳಿದಿರುವ ವಿಚಾರ. ಆದ್ರೆ, ಇವರ ವೈಯಕ್ತಿಕ ಜೀವನದಲ್ಲಿ ಕೆಲವು ಹಾಸ್ಯಮಯ, ಕುತೂಹಲಕಾರಿ ಘಟನೆಗಳು ನಡೆದಿವೆ. ಇಂತಹ ಕುತೂಹಲಕಾರಿ ವಿಚಾರವೊಂದನ್ನು ಅಕ್ಷಯ್ ಪತ್ನಿ ಟ್ವಿಂಕಲ್ ಖನ್ನಾ ಇತ್ತೀಚೆಗೆ ಬಾಯ್ಬಿಟ್ಟಿದ್ದಾರೆ.
ಟ್ವಿಂಕಲ್ ಖನ್ನಾರನ್ನು ಅಕ್ಷಯ್ ಮದುವೆಯಾಗಲು ಕೇಳಲು ಹೋದಾಗ ತನ್ನ ಸ್ನೇಹಿತರೊಂದಿಗೆ ಕೂತಿದ್ದ ಟ್ವಿಂಕಲ್ ತಾಯಿ ಡಿಂಪಲ್ ಕಪಾಡಿಯಾ, ಅಕ್ಷಯ್ ಕುಮಾರ್ ಅವರನ್ನು ಸಲಿಂಗ ಕಾಮಿ ಎಂದು ಭಾವಿಸಿದ್ದರಂತೆ. ಈ ವಿಚಾರವನ್ನು ಇತ್ತೀಚೆಗೆ ನಡೆದ ಚಾಟ್ ಶೋ ಒಂದರಲ್ಲಿ ಅವರು ವಿವರಿಸಿದರು.