ಖ್ಯಾತ ನಿರ್ದೇಶಕ ದಿನೇಶ್ ಬಾಬು ಇತ್ತೀಚೆಗೆ ತಮ್ಮ 50ನೇ ಚಿತ್ರ 'ಕಸ್ತೂರಿ ಮಹಲ್' ಮುಹೂರ್ತ ನೆರವೇರಿಸಿದ್ದರು. ಚಿತ್ರಕ್ಕೆ ಮೊದಲು ಕಸ್ತೂರಿ ನಿವಾಸ, ನಂತರ ಕಸ್ತೂರಿ ಹಾಗೂ ಕೊನೆಗೆ ಕಸ್ತೂರಿ ಮಹಲ್ ಎಂದು ಹೆಸರಿಡಾಯ್ತು. ರಚಿತಾ ರಾಮ್ ಕೂಡಾ ಮುಹೂರ್ತದಲ್ಲಿ ಖುಷಿಯಿಂದ ಭಾಗವಹಿಸಿದ್ದರು. ಆದರೆ ಈಗ ಚಿತ್ರದಿಂದ ಡಿಂಪಲ್ ಕ್ವೀನ್ ಹೊರ ನಡೆದಿದ್ದಾರೆ.
ಆದರೆ ಚಿತ್ರದಿಂದ ಹೊರಬಂದಿದ್ದಕ್ಕೆ ರಚಿತಾ ರಾಮ್ ನೀಡಿರುವ ಕಾರಣ ಕೇಳಿ ಎಲ್ಲರಿಗೂ ಬಹಳ ಆಶ್ಚರ್ಯವಾಗಿದೆ. ನಿರ್ಮಾಪಕರಿಗೆ ಸಂದೇಶ ಕಳಿಸಿರುವ ರಚಿತಾ, "ನಾನು ಈ ಚಿತ್ರದಲ್ಲಿ ಅಭಿನಯಿಸಲು ಸಾಧ್ಯವಿಲ್ಲ, ಈ ಚಿತ್ರದಿಂದ ನಾನು ಹೊರಬಂದಿರುವುದಕ್ಕೆ ಕಾರಣ ಏನು ಎಂಬುದು ನಿಮಗೆ ತಡವಾಗಿ ತಿಳಿಯಲಿದೆ, ಇದರಿಂದ ನಿಮ್ಮ ಸಿನಿಮಾಗೆ ಕೂಡಾ ಒಳ್ಳೆಯದು"ಎಂದು ರಚಿತಾ ಸಂದೇಶ ಕಳಿಸಿದ್ದಾರೆ ಎನ್ನಲಾಗಿದೆ.