ಟಾಲಿವುಡ್ ಖ್ಯಾತ ನಟ ವಿಜಯ್ ದೇವರಕೊಂಡ ಅವರ ಇತ್ತೀಚಿನ ಮೇಕ್ ಓವರ್ ಎಲ್ಲರ ಗಮನ ಸೆಳೆದಿದ್ದು, ಅವರ ಕೇಶವಿನ್ಯಾಸ ಕಂಡು ಅಭಿಮಾನಿಗಳು ಬೆರಗಾಗಿದ್ದಾರೆ. ಅವರು ದಿಢೀರ್ ದಟ್ಟವಾದ ತಮ್ಮ ತಲೆ ಕೂದಲನ್ನು ಟ್ರಿಮ್ ಮಾಡಿಸಿಕೊಂಡು, ಹ್ಯಾಟ್ ಹಾಕಿಕೊಂಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಅನನ್ಯಾ ಪಾಂಡೆ ಜೊತೆಗಿನ 'ಲೈಗರ್' ಸಿನಿಮಾದ ಚಿತ್ರೀಕರಣ ಮುಗಿಸಿರುವ ವಿಜಯ್ ದೇವರಕೊಂಡ ತಮ್ಮ ಮುಂಬರುವ ಚಿತ್ರ ಜನ ಗಣ ಮನದಲ್ಲಿ ಮಿಲಿಟರಿ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗಷ್ಟೇ ಪ್ರೈಮ್ ವಾಲಿಬಾಲ್ ಲೀಗ್ಗಾಗಿ ತೆಲಂಗಾಣದ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡರು. ಈ ವೇಳೆ ಅವರ ಹೊಸ ಹೇರ್ ಸ್ಟೈಲ್ ಎಲ್ಲರ ಗಮನ ಸೆಳೆಯಿತು. 'ಜನ ಗಣ ಮನ' ಚಿತ್ರಕ್ಕಾಗಿಯೇ 'ಅರ್ಜುನ್ ರೆಡ್ಡಿ' ಖ್ಯಾತಿಯ ನಟ ಹೊಸ ಅವತಾರ ಎತ್ತುತ್ತಾರೆ ಎಂದು ವರದಿಯಾಗಿದೆ.