ಕರ್ನಾಟಕದ ಕ್ರಷ್ ಎಂದೇ ಗುರುತಿಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಸದ್ಯ ತೆಲುಗು ಹಾಗೂ ಬಾಲಿವುಡ್ನಲ್ಲಿ ಬಹು ಬೇಡಿಕೆ ಹೊಂದಿರುವ ರಶ್ಮಿಕಾ ಮಂದಣ್ಣ, ಇದೀಗ ಪಕ್ಕಾ ಹಳ್ಳಿ ಹುಡುಗಿ ಆಗಿ ಕಾಣಿಸಿಕೊಂಡಿದ್ದಾರೆ. ಹೌದು, ಕೆಸರು ಗದ್ದೆಯಲ್ಲಿ ಇಳಿದು ಕೈಯಲ್ಲಿ ಟ್ರಿಲ್ಲರ್ ಹಿಡಿದು, ಕೃಷಿ ಕೆಲಸ ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿದರೆ ಇದು ನಿಜವಾಗಿಯೂ ರಶ್ಮಿಕಾ ಮಂದಣ್ಣನಾ ಎಂದು ಅನಿಸುವುದು ಸುಳ್ಳಲ್ಲ.
ಹೌದು, ರಶ್ಮಿಕಾ ಮಂದಣ್ಣ ಕೆಸರು ಗದ್ದೆಗೆ ಇಳಿದು ಕೃಷಿ ಕೆಲಸದಲ್ಲಿ ತೊಡಗಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಅದನ್ನು ಸ್ವತಃ ರಶ್ಮಿಕಾ ಅವರೇ ಶೇರ್ ಮಾಡಿಕೊಂಡಿದ್ದಾರೆ. ಹಾಗಂತ ಅವರು ರಿಯಲ್ ಲೈಫ್ನಲ್ಲಿ ಕೃಷಿ ಮಾಡುತ್ತಿಲ್ಲ. ಈ ವೇಷ ಧರಿಸಿರುವುದು ಸಿನಿಮಾ ಸಲುವಾಗಿ. ಸದ್ಯ ಕಾಲಿವುಡ್ನಲ್ಲಿ ಮಿಂಚುತ್ತಿರುವ ರಶ್ಮಿಕಾ, ಕಾರ್ತಿ ಜೊತೆ ಸುಲ್ತಾನ್ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದ ಪಾತ್ರದ ಸಲುವಾಗಿ ರಶ್ಮಿಕಾ ಮಂದಣ್ಣ ಈ ರೀತಿ ಕಾಣಿಸಿಕೊಂಡಿದ್ದಾರೆ.