ಮುಂಬೈ:ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಇಬ್ಬರು ಸಹೋದರಿಯರು ಇದೀಗ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಖಚಿತಗೊಂಡಿದೆ. ಆದರೆ, ಈ ಸಮಾರಂಭದಲ್ಲಿ ನಟ ಸಲ್ಲು ಭಾಗಿಯಾಗುವುದು ಮಾತ್ರ ಬಹುತೇಕ ಡೌಟ್ ಎನ್ನಲಾಗ್ತಿದೆ.
ಕತ್ರಿನಾ ಕೈಫ್ ಜೊತೆ ಸಲ್ಮಾನ್ ಸಹೋದರಿಯರು ಡಿಸೆಂಬರ್ 9ರಂದು ಬಾಲಿವುಡ್ನ ಕ್ಯೂಟ್ ಜೋಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಈ ವೇಳೆ ಅನೇಕರು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಲಿದ್ದಾರೆ. ಆದರೆ, ಈ ಕಾರ್ಯಕ್ರಮಕ್ಕೆ ಮಾಜಿ ಪ್ರಿಯಕರ ಸಲ್ಮಾನ್ ಖಾನ್ ಭಾಗಿಯಾಗುವುದು ಬಹುತೇಕ ಡೌಟ್ ಆಗಿದೆ.
ಸಲ್ಮಾನ್ ಖಾನ್ ಕುಟುಂಬಕ್ಕೆ ಈಗಾಗಲೇ ಮದುವೆ ಆಮಂತ್ರಣ ನೀಡಲಾಗಿದೆ. ಹೀಗಾಗಿ ಅವರ ಸಹೋದರಿಯರಾದ ಅಲ್ವಿರಾ ಖಾನ್ ಹಾಗೂ ಅರ್ಪಿತಾ ತಮ್ಮ ಪತಿಯರೊಂದಿಗೆ ತೆರಳುತ್ತಿದ್ದಾರೆ ಎಂಬುದು ಕುಟುಂಬದ ಆಪ್ತ ಮೂಲಗಳಿಂದ ತಿಳಿದು ಬಂದಿದೆ. ವಿಕ್ಕಿ- ಕತ್ರಿನಾ ಕೈಫ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ದಿನವೇ ಸಲ್ಮಾನ್ ಖಾನ್ ಬೇರೊಂದು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವ ಕಾರಣ ಮದುವೆ ಸಮಾರಂಭದಿಂದ ಹೊರಗುಳಿಯಲಿದ್ದಾರೆ ಎಂದು ತಿಳಿದು ಬಂದಿದೆ.
ಕತ್ರಿನಾ ಮದುವೆಗೆ ಮಾಜಿ ಪ್ರಿಯಕರ ಸಲ್ಮಾನ್ ಸಹೋದರಿಯರು ಇದನ್ನೂ ಓದಿರಿ:'ನನ್ನ ತಂದೆಗೆ ಹೊಡಿಬೇಡಿ'... ನಡುರಸ್ತೆಯಲ್ಲೇ ಕಣ್ಣೀರು ಹಾಕಿದ ಮಗಳು!
ಇನ್ನು ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಒಂದು ಕಾಲದಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು. ಅನೇಕ ಕಡೆ ಈ ಜೋಡಿ ಸುತ್ತಾಟ ನಡೆಸಿತ್ತು. ಆದರೆ ಇದನ್ನ ಗುಟ್ಟಾಗಿ ಇಟ್ಟಿದ್ದರು. ಈ ಸಂಬಂಧ ಹೆಚ್ಚು ಕಾಲ ಉಳಿದುಕೊಳ್ಳದ ಕಾರಣ ಬ್ರೇಕ್ ಅಪ್ ಆಗಿತ್ತು. ಇದರ ಹೊರತಾಗಿ ಕೂಡ ಇಬ್ಬರ ನಡುವೆ ಒಳ್ಳೆಯ ಗೆಳೆತನವಿದೆ.