ಬೆಂಗಳೂರು :ಕೋವಿಡ್ ಮೂರನೇ ಅಲೆ ಅಪ್ಪಳಿಸುವ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ. ಈಗಾಗಲೇ ಮೊದಲ ಹಾಗೂ ಎರಡನೇ ಅಲೆಯ ತೀವ್ರತೆ ಕಂಡಿರುವ ಜನರು ಮೂರನೇ ಅಲೆಯನ್ನ ಎದುರಿಸಬೇಕಿದೆ. ರಾಜ್ಯದಲ್ಲಿ ಈಗಾಗಲೇ ಎಲ್ಲ ಚಟುವಟಿಕೆಗಳಿಗೂ ರಿಲೀಫ್ ನೀಡಲಾಗಿದೆ. ಕೊರೊನಾ ಸೋಂಕಿನ ಪ್ರಮಾಣ ಎರಡು ಸಾವಿರದೊಳಗೆ ಇದ್ದರು ಕೂಡ, ನೆರೆ ರಾಜ್ಯದಲ್ಲಿ ಸೋಂಕು ಉಲ್ಬಣಿಸಿದೆ.
ಕೋವಿಡ್ 3ನೇ ಅಲೆ ಭೀತಿ.. ಭವಿಷ್ಯದ ಮಕ್ಕಳನ್ನ ಕಾಪಾಡಿಕೊಳ್ಳಿ.. ಹಿರಿಯ ನಟಿ ಬಿ.ಜಯಶ್ರೀ
ಕೊರೊನಾ ವಿಷಯದಲ್ಲಿ ನಿರ್ಲಕ್ಷ್ಯ ಬೇಡ. ಸಾಕಷ್ಟು ಜನರನ್ನ, ಸ್ನೇಹಿತರನ್ನ ಕಳೆದುಕೊಂಡಿದ್ದೇವೆ. ಇದೀಗ ಮೂರನೇ ಅಲೆಯಲ್ಲಿ ಮಕ್ಕಳೇ ಟಾರ್ಗೆಟ್ ಆಗುವ ಲಕ್ಷಣ ಇರುವುದರಿಂದ ಆ ಮಕ್ಕಳನ್ನ ಕಳೆದುಕೊಳ್ಳುವುದು ಬೇಡ. ಮಕ್ಕಳೇ ನಮ್ಮ ಭವಿಷ್ಯ. ಹೀಗಾಗಿ, ಕೊರೊನಾ ಕುರಿತು ಎಚ್ಚರದಿಂದ ಇರಿ..
ಈ ಬಗ್ಗೆ ಮಾತನಾಡಿದ ಹಿರಿಯ ನಟಿ ನಟಿ ಜಯಶ್ರೀ, ಜನರು ಫೇಸ್ ಮಾಸ್ಕ್, ಸಾಮಾಜಿಕ ಅಂತರ, ಸ್ವಚ್ಛತೆ ಕಡೆ ಗಮನ ಹರಿಸುವುದು ಬಹಳ ಮುಖ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಜನರು ಬಹಳ ಹುಷಾರಾಗಿ ಇರಬೇಕು. ಆರೋಗ್ಯ ಇಲಾಖೆ ಹೇಳುವ ಮಾತನ್ನ ಕೇಳಿ, ಮಾಸ್ಕ್ ಹಾಕಿ, ಸೋಷಿಯಲ್ ಡಿಸ್ಟೆನ್ಸ್, ಆಗಾಗ ಕೈಗಳನ್ನ ತೊಳೆದುಕೊಳ್ಳಿ ಎಂದು ಸಲಹೆ ನೀಡಿದರು.
ಕೊರೊನಾ ವಿಷಯದಲ್ಲಿ ನಿರ್ಲಕ್ಷ್ಯ ಬೇಡ. ಸಾಕಷ್ಟು ಜನರನ್ನ, ಸ್ನೇಹಿತರನ್ನ ಕಳೆದುಕೊಂಡಿದ್ದೇವೆ. ಇದೀಗ ಮೂರನೇ ಅಲೆಯಲ್ಲಿ ಮಕ್ಕಳೇ ಟಾರ್ಗೆಟ್ ಆಗುವ ಲಕ್ಷಣ ಇರುವುದರಿಂದ ಆ ಮಕ್ಕಳನ್ನ ಕಳೆದುಕೊಳ್ಳುವುದು ಬೇಡ. ಮಕ್ಕಳೇ ನಮ್ಮ ಭವಿಷ್ಯ. ಹೀಗಾಗಿ, ಕೊರೊನಾ ಕುರಿತು ಎಚ್ಚರದಿಂದ ಇರಿ ಅಂತಾ ಕಿವಿ ಮಾತು ಹೇಳಿದರು.