ಹೈದರಾಬಾದ್: ದಕ್ಷಿಣ ಭಾರತದ ಪ್ರಮುಖ ರಾಜ್ಯ ತಮಿಳುನಾಡು ಸದ್ಯ ತೀವ್ರ ನೀರಿನ ಸಮಸ್ಯೆಯಿಂದ ಬಳಲುತ್ತಿದೆ. ಮಹಾನಗರಿ ಚೆನ್ನೈನಲ್ಲಿ ಎಂಎನ್ಸಿಗಳು ಶಟರ್ ಎಳೆದು ಮನೆಯಿಂದಲೇ ಕಾರ್ಯನಿರ್ವಹಿಸಿ (work from Home) ಎಂದು ಸೂಚನೆ ನೀಡಿದೆ. ಇದರ ನಡುವೆ ಹಾಲಿವುಡ್ ಹೀರೋ ನೀರಿನ ಕೊರತೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಹಾಲಿವುಡ್ನ ಜನಪ್ರಿಯ ಟೈಟಾನಿಕ್ ಸಿನಿಮಾದ ಹೀರೋ ಲಿಯನಾರ್ಡೋ ಡಿಕ್ಯಾಪ್ರಿಯೊ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಮಾಡಿ, ತಮಿಳರ ಸಮಸ್ಯೆ ಬಗ್ಗೆ ಹತ್ತಾರು ಸಾಲು ಬರೆದಿದ್ದಾರೆ.