ಕಪ್ಪು ಬಿಳುಪು ಕಾಲದಿಂದಲೂ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಮಂದಿ ನಾಯಕಿಯರು ಬಂದು ಹೋಗಿದ್ದಾರೆ. ಆದರೆ ಕೆಲವರು ಮಾತ್ರ ಅಭಿಮಾನಿಗಳ ಮನದಲ್ಲಿ ಗಟ್ಟಿಯಾಗಿ ನಿಲ್ಲುವ ಮೂಲಕ ಬಹಳ ವರ್ಷಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ್ದಾರೆ.
ಸದ್ಯಕ್ಕೆ ಚಿತ್ರರಂಗದಲ್ಲಿ ಯುವ ನಟಿಮಣಿಯರ ಕಾರುಬಾರು ಜೋರಾಗಿದೆ. ಈ ಮಧ್ಯೆ ಒಂದು ಕಾಲದಲ್ಲಿ ಸ್ಟಾರ್ ನಟಿಯರಾಗಿ ಮಿಂಚಿದ್ದವರು ಮಕ್ಕಳು ಕನ್ನಡ ಚಿತ್ರರಂಗದ ಭವಿಷ್ಯದ ನಾಯಕಿಯರಾಗಲು ರೆಡಿಯಾಗಿದ್ದಾರೆ. ಹಾಗಾದ್ರೆ ಯಾವ ನಟಿಯರ ಮಕ್ಕಳು ಸಿನಿಮಾ ಇಂಡಸ್ಟ್ರಿಯಲ್ಲಿ, ಭವಿಷ್ಯದ ಹೀರೋಯಿನ್ಸ್ ಆಗ್ತಾರೆ ಎಂಬುದರ ಮಾಹಿತಿ ಇಲ್ಲಿದೆ.
90 ರ ದಶಕದಲ್ಲಿ ತನ್ನ ಸೌಂದರ್ಯದಿಂದಲೇ ಶಿವರಾಜ್ ಕುಮಾರ್, ರವಿಚಂದ್ರನ್, ಅಂಬರೀಷ್ ಸೇರಿದಂತೆ ಸಾಕಷ್ಟು ಸ್ಟಾರ್ ನಟರ ಜೊತೆ ಮಿಂಚಿರುವ ನಟಿ ಸುಧಾರಾಣಿ. ಆ ಕಾಲದಲ್ಲಿ ಸ್ಟಾರ್ ನಟಿಯಾಗಿ ಮೆರೆದ ಸುಧಾರಾಣಿ ಮಗಳು ನಿಧಿ ಕನ್ನಡ ಚಿತ್ರರಂಗಕ್ಕೆ ಬರಲು ತೆರೆ ಮರೆಯ ಕಸರತ್ತು ನಡೆಯುತ್ತಿದೆ ಎನ್ನಲಾಗಿದೆ. ಈಗಾಗಲೇ ಅಪ್ಪ ಅಮ್ಮನ ಆಸೆಯಂತೆ ಪಿಯುಸಿ ಮುಗಿಸಿರುವ ನಿಧಿ, ಚಿತ್ರರಂಗದ ಭವಿಷ್ಯದ ನಾಯಕಿಯಾಗುವ ಎಲ್ಲಾ ಲಕ್ಷಣಗಳಿವೆ. ಸದ್ಯದ ಮಾಹಿತಿ ಪ್ರಕಾರ ಜೋಗಿ ಪ್ರೇಮ್, ನಿರ್ದೇಶನದಲ್ಲಿ ಸುಧಾರಾಣಿ ಮಗಳು ನಿಧಿ ಸಿನಿಮಾ ಇಂಡಸ್ಟ್ರಿಗೆ ಪರಿಚಯವಾಗಲಿದ್ದಾರೆ ಎನ್ನಲಾಗುತ್ತಿದೆ.
'ಏಕ್ ಲವ್ ಯಾ' ಚಿತ್ರದ ನಂತರ ರಕ್ಷಿತಾ ಸಹೋದರ ರಾಣಾ ಜೊತೆ ನಿಧಿಯನ್ನು ಲಾಂಚ್ ಮಾಡಲು ಪ್ರೇಮ್ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಒಂದು ವೇಳೆ ನಿಧಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದೇ ಆದರೇ ಸುಧಾರಾಣಿಯಂತೆ ಮಗಳು ನಿಧಿ ಕೂಡಾ ಸ್ಟಾರ್ ನಟಿಯಾಗುವುದರಲ್ಲಿ ಸಂದೇಹವೇ ಇಲ್ಲ ಎನ್ನುತ್ತಿದೆ ಸ್ಯಾಂಡಲ್ವುಡ್.
ಇನ್ನು ಅಳುಮುಂಜಿ ಪಾತ್ರಗಳಿಂದಲೇ, ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಪಟ್ಟ ಅಲಂಕರಿಸಿದ ನಟಿ ಶ್ರುತಿ. ಕನ್ನಡದ ಬಹುತೇಕ ನಟರೊಂದಿಗೆ ನಟಿಸಿ ಸೈ ಎನ್ನಿಸಿಕೊಂಡಿರುವ ಶ್ರುತಿ ಮಗಳು ಗೌರಿ ಕೂಡಾ ಸ್ಯಾಂಡಲ್ವುಡ್ ಭವಿಷ್ಯದ ಹೀರೋಯಿನ್ ಆಗುವ ಲಕ್ಷಣಗಳಿವೆ. ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಗಾಯನದಲ್ಲಿ ಗಮನ ಸೆಳೆಯುತ್ತಿರುವ ಶ್ರುತಿ ಪುತ್ರಿ ಗೌರಿ, ನಟನೆ ಜೊತೆಗೆ ಗಾಯಕಿಯಾಗಿ ಎಂಟ್ರಿಯಾಗುವ ಸೂಚನೆಗಳಿವೆ. ಹಾಡುಗಳಿಂದಲೇ ಮೆಚ್ಚುಗೆ ಗಳಿಸಿರೋ ಗೌರಿಗೆ, ತಾಯಿ ಸಪೋರ್ಟ್ ಕೂಡಾ ಇದೆ. ಮಗಳಿಗೆ ಏನು ಇಷ್ಟವೋ ನನಗೆ ಒಪ್ಪಿಗೆ ಇದೆ ಎಂದು ಶ್ರುತಿ ಸಾಕಷ್ಟು ಬಾರಿ ಹೇಳಿದ್ದಾರೆ.
ಅಮ್ಮ ಪ್ರಿಯಾಂಕ ಜೊತೆ ಐಶ್ವರ್ಯ ಉಪೇಂದ್ರ ಹಾಗೂ ಪ್ರಿಯಾಂಕಾ ತ್ರಿವೇದಿ ಮಗಳು ಐಶ್ವರ್ಯ, ಈಗಾಗಲೇ ದೇವಕಿ ಸಿನಿಮಾ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ನೀಡಿದ್ದಾರೆ. ಮೊದಲ ಚಿತ್ರದಲ್ಲೇ ಅಮ್ಮ ಪ್ರಿಯಾಂಕ ಉಪೇಂದ್ರ ಜೊತೆ ತೆರೆಹಂಚಿಕೊಂಡಿರುವ ಐಶ್ವರ್ಯ, ಭವಿಷ್ಯದ ಹೀರೋಯಿನ್ ಆಗೋದು ಪಕ್ಕಾ ಎನ್ನಲಾಗುತ್ತಿದೆ. 'ದೇವಕಿ' ಚಿತ್ರದಲ್ಲಿ ಐಶ್ವರ್ಯ ಆ್ಯಕ್ಟಿಂಗ್ ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಸದ್ಯಕ್ಕೆ ಉಪೇಂದ್ರ ದಂಪತಿ ಮಗಳ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ನೀಡುತ್ತಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಐಶ್ವರ್ಯ ಸ್ಟಾರ್ ನಾಯಕಿಯಾಗುವ ಎಲ್ಲಾ ಲಕ್ಷಣಗಳಿವೆ ಎನ್ನಲಾಗುತ್ತಿದೆ.
ರಾಮು-ಮಾಲಾಶ್ರೀ ಪುತ್ರಿ ಅನನ್ಯ ಕನ್ನಡ ಚಿತ್ರರಂಗದಲ್ಲಿ ಕನಸಿನ ರಾಣಿಯಾಗಿ ಬೆಳ್ಳಿ ತೆರೆ ಮೇಲೆ ರಾರಾಜಿಸಿದ ನಟಿ ಮಾಲಾಶ್ರೀ. ಈ ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಮಗಳು ಅನನ್ಯ ಸಿನಿಮಾ ಇಂಡಸ್ಟ್ರಿಗೆ ಬರ್ತಾರಾ ಎಂಬ ಚರ್ಚೆ ಗಾಂಧಿನಗರದಲ್ಲಿ ಚರ್ಚೆಯಾಗುತ್ತಿದೆ. ಇದುವರೆಗೂ ಮಾಲಾಶ್ರೀ ಮಗಳು ಅನನ್ಯ, ಅಪ್ಪ-ಅಮ್ಮನ ಜೊತೆ ಕಾಣಿಸಿಕೊಂಡಿರುವುದು ಬಿಟ್ಟರೆ, ಸಾರ್ವಜನಿಕಾಗಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಮತ್ತೊಂದು ಕಡೆ ರಾಮು ಅಥವಾ ಮಾಲಾಶ್ರೀ ತಮ್ಮ ಮಗಳ ಸಿನಿ ಎಂಟ್ರಿಯ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ಆದರೆ ಮುಂದಿನ ದಿನಗಳಲ್ಲಿ ಅನನ್ಯ ಕೂಡಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರೂ ಅಚ್ಚರಿ ಇಲ್ಲ.
ಮೂವರು ಪುತ್ರಿಯರೊಂದಿಗೆ ವಿಜಯಲಕ್ಷ್ಮಿ ಸಿಂಗ್ ಇನ್ನು ಸ್ಯಾಂಡಲ್ವುಡ್ನಲ್ಲಿ ನಟಿಯಾಗಿ ಹಾಗೂ ನಿರ್ದೇಶಕಿಯಾಗಿ ಗಮನ ಸೆಳೆದಿರುವ ನಟಿ ಎಂದರೆ ವಿಜಯಲಕ್ಷ್ಮಿ ಸಿಂಗ್. ಜೈಜಗದೀಶ್ ಹಾಗೂ ವಿಜಯಲಕ್ಷ್ಮಿ ಸಿಂಗ್ ಮೂವರು ಮಕ್ಕಳಾದ ವೈಭವಿ, ವೈನಿಧಿ, ವೈಸಿರಿ ಈಗಾಗ್ಲೇ 'ಯಾನ' ಚಿತ್ರದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ನೀಡಿದ್ದಾರೆ. ಸದ್ಯಕ್ಕೆ ಕೊರೊನಾ ಇರುವ ಕಾರಣ ಸಿನಿಮಾ ಚಟುವಟಿಕೆಗಳು ಮೊದಲಿನಂತೆ ನಡೆಯುತ್ತಿಲ್ಲ. ಆದರೆ ಈ ಮೂವರಿಗೆ ಕೂಡಾ ಮುಂದೆ ಒಳ್ಳೆ ಭವಿಷ್ಯ ಇದೆ ಎಂದು ಗಾಂಧಿನಗರ ಮಾತನಾಡಿಕೊಳ್ಳುತ್ತಿದೆ.