ಕರ್ನಾಟಕ

karnataka

By

Published : Nov 24, 2020, 6:50 PM IST

ETV Bharat / sitara

'ಲೂಪ್​​ ಲಪೇಟ' ಕಡೆ ಓಡುತ್ತಿದ್ದಾರೆ ನಟಿ ತಾಪ್ಸಿ

ಇದೀಗ ಲೋಲಾ ಕುಟುಂಬದ ಕಡೆ ಓಡುತ್ತಿದ್ದೇನೆ. ಇದು ಕೂಲ್​​ ಅಂಡ್​​ ಚಿಲ್​ ಆಗಿದೆ ಎಂದು ಬರೆದಿದ್ದಾರೆ. ಈ ಹಿಂದೆಯೂ ಕೂಡ ರಶ್ಮಿ ರಾಕೆಟ್​​​​​ ಚಿತ್ರಕ್ಕಾಗಿ ತಾವು ತರಬೇತಿ ಪಡೆಯುತ್ತಿರುವ ಕೆಲ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದರು..

Taapsee Pannu wraps up the first schedule of Rashmi Rocket
'ಲೂಪ್​​ ಲಪೇಟ' ಕಡೆ ಓಡುತ್ತಿದ್ದಾರೆ ನಟಿ ತಾಪ್ಸಿ

ಬಾಲಿವುಡ್​​ನಲ್ಲಿ ತಾಪ್ಸಿ ಪನ್ನು ಅಭಿನಯದ 'ರಶ್ಮಿ ರಾಕೆಟ್' ಎಂಬ ಸಿನಿಮಾ ತಯಾರಾಗುತ್ತಿದೆ. ಚಿತ್ರದಲ್ಲಿ ತಾಪ್ಸಿ ಪನ್ನು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಸಿನಿಮಾಕ್ಕಾಗಿ ಭಾರೀ ತಯಾರಿ ನಡೆಸಿದ್ದಾರೆ. ಆದ್ರೆ, ಈಗಾಗಲೇ ಈ ಚಿತ್ರದ ಮೊದಲ ಹಂತದ ಶೂಟಿಂಗ್​ ಮುಗಿದಿದ್ದು, 'ಲೂಪ್​​ ಲಪೇಟ' ಎಂಬ ಮತ್ತೊಂದು ಚಿತ್ರದ ಶೂಟಿಂಗ್​ನಲ್ಲಿ ತಾಪ್ಸಿ ಭಾಗಿಯಾಗಿದ್ದಾರೆ.

ಈ ಬಗ್ಗೆ ಸ್ವತಃ ತಾಪ್ಸಿಯೇ ಮಾಹಿತಿ ಹಂಚಿಕೊಂಡಿದ್ದು, ರಶ್ಮಿ ರಾಕೆಟ್​​​ ಫಸ್ಟ್​​ ಶೆಡ್ಯೂಲ್​​ ಮುಕ್ತಾಯವಾಗಿದ್ದು, ಇದೀಗ ಲೂಪ್​​ ಲಪೇಟ ತಂಡದ ಕಡೆ ಹೋಗುವುದಾಗಿ ಹೇಳಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಓಡುತ್ತಿರುವ ಚಿತ್ರವನ್ನು ಶೇರ್​​ ಮಾಡಿದ್ದು, ರಶ್ಮಿ ರಾಕೆಟ್​​​​ ಚಿತ್ರದ ಮೊದಲ ಹಂತದ ಶೂಟಿಂಗ್​ ಮುಗಿದಿದೆ.

ಇದೀಗ ಲೋಲಾ ಕುಟುಂಬದ ಕಡೆ ಓಡುತ್ತಿದ್ದೇನೆ. ಇದು ಕೂಲ್​​ ಅಂಡ್​​ ಚಿಲ್​ ಆಗಿದೆ ಎಂದು ಬರೆದಿದ್ದಾರೆ. ಈ ಹಿಂದೆಯೂ ಕೂಡ ರಶ್ಮಿ ರಾಕೆಟ್​​​​​ ಚಿತ್ರಕ್ಕಾಗಿ ತಾವು ತರಬೇತಿ ಪಡೆಯುತ್ತಿರುವ ಕೆಲ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದರು.

ABOUT THE AUTHOR

...view details