ನಟಿ ಶ್ವೇತಾ ಚೆಂಗಪ್ಪ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಅವರು ಬೇಬಿ ಬಂಪ್ ಫೋಟೋಶೂಟ್ ಮಾಡಿಸಿ ಅದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಭಿಮಾನಿಗಳು ಕೂಡಾ ಶ್ವೇತಾಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದರು.
ಆ ಒಂದು ಸುದಿನಕ್ಕಾಗಿ ಕಾಯುತ್ತಿದ್ದೇನೆ ಅಂದ್ರು ಶ್ವೇತಾ ಚಂಗಪ್ಪ - Kiran appachu
ಕೊಡಗು ಸುಂದರಿ, ನಟಿ ಶ್ವೇತಾ ಚಂಗಪ್ಪ ತಮ್ಮ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಕೊಡಗಿನ ಹೆಣ್ಣಾಗಿ ಆ ಒಂದು ಸುದಿನಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ಸೋಷಿಯಲ್ ಮೀಡಿಯಾ ಮೂಲಕ ಶ್ವೇತಾ ತಮ್ಮ ಆಸೆ ವ್ಯಕ್ತಪಡಿಸಿದ್ದಾರೆ.
ಇದೀಗ ಶ್ವೇತಾ ಮತ್ತೊಂದು ಭಾವನಾತ್ಮಕ ಪೋಸ್ಟ್ ಒಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ತಮ್ಮ ಪತಿ ಕಿರಣ್ ಅಪ್ಪಚ್ಚು ಅವರೊಂದಿಗೆ ಇರುವ ಫೋಟೋವೊಂದನ್ನು ಪೋಸ್ಟ್ ಮಾಡಿ ಅದರೊಂದಿಗೆ 'ಒಂದು ಅರ್ಥಪೂರ್ಣ ಮಾತಿದೆ. ಕೊಡವರ ಹೆಣ್ಣು ಹೆತ್ತರೆ ಸ್ವರ್ಗ. ಹೀಗಾಗಿ ವೀರನಾಡು ಕೊಡಗಿನ ಹೆಣ್ಣಾಗಿ, ಆ ಒಂದು ಸುದಿನಕ್ಕೆ ಕಾಯುತ್ತಿರುವೆ' ಎಂದು ಬರೆದುಕೊಂಡಿದ್ದಾರೆ. ಶ್ವೇತಾ ಅವರ ಈ ಪೋಸ್ಟ್ಗೆ ಸಾಕಷ್ಟು ಜನ ಸಂತೋಷ ವ್ಯಕ್ತಪಡಿಸಿದ್ದಾರೆ. ಶ್ವೇತಾ ಈ ಫೋಟೋದಲ್ಲಿ ಹಸಿರು ಬಣ್ಣದ ಕೊಡಗಿನ ಸಾಂಪ್ರದಾಯಿಕ ಶೈಲಿಯ ಸೀರೆ ಧರಿಸಿದ್ದರೆ ಪತಿ ಕಿರಣ್ ಕೂಡಾ ಕೊಡಗಿನ ಉಡುಪು ಧರಿಸಿದ್ದಾರೆ.
ಶ್ವೇತಾ ಹಾಗೂ ಕಿರಣ್ ಅಪ್ಪಚ್ಚು ಅವರದ್ದು ಪ್ರೇಮವಿವಾಹ. ಎಸ್. ನಾರಾಯಣ್ ನಿರ್ದೇಶನದ ’ಸುಮತಿ’ ಧಾರಾವಾಹಿ ಮೂಲಕ ಶ್ವೇತಾ ಕಿರುತೆರೆಗೆ ಪರ್ದಾಪಣೆ ಮಾಡಿದರು. ನಂತರ ‘ಯಾರಿಗುಂಟು ಯಾರಿಗಿಲ್ಲ’ ಸೇರಿ ಇತರ ಕಾರ್ಯಕ್ರಮಗಳನ್ನು ಅವರು ನಿರೂಪಣೆ ಮಾಡಿದ್ದಾರೆ. ಬಿಗ್ಬಾಸ್ ಸೀಸನ್ 2ರಲ್ಲೂ ಅವರು ಭಾಗವಹಿಸಿದ್ದರು. ಮಜಾ ಟಾಕೀಸ್‍ನಲ್ಲಿ ರಾಣಿ ಪಾತ್ರದಲ್ಲಿ ಕೂಡಾ ಕಾಣಿಸಿಕೊಂಡಿದ್ದರು.