ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಸಾವಿನಿಂದ ಅವರ ತಂದೆ ಕೆಕೆ ಸಿಂಗ್ ಇನ್ನೂ ಹೊರಬಂದಿಲ್ಲ. ಮಗನ ಸಾವಿಗೆ ಕಂಬನಿ ಸುರಿಸುತ್ತಾ ಸುಶಾಂತ್ಗೆ ಸಂಬಂಧಿಸಿದ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
2021ರಲ್ಲಿ ಜೀವನದಲ್ಲಿ ನೆಲೆ ಕಂಡುಕೊಳ್ಳಬೇಕು, ಮದುವೆಯಾಗಬೇಕು ಎಂದು ಸುಶಾಂತ್ ತಂದೆ ಬಳಿ ತಿಳಿಸಿದ್ದರಂತೆ. ಇನ್ನು ಅಂಕಿತಾ ಲೋಖಂಡೆ ಮತ್ತು ಸುಶಾಂತ್ ನಡುವಿನ ಸಂಬಂಧದ ಹೊರತು ಪಡಿಸಿ ಬೇರೆ ಏನೂ ತಿಳಿದಿರಲಿಲ್ಲ. ರಿಯಾ ಚಕ್ರಬರ್ತಿ ಕುರಿತಾಗಿ ಮಾಧ್ಯಮಗಳ ಮೂಲಕ ವಿಷಯ ತಿಳಿದಿದೆ ಎಂದಿದ್ದಾರೆ.
ಇನ್ನು ಮಗನ ಮದುವೆ ವಿಚಾರವಾಗಿ ಮಾತನಾಡಿದ ಅವರು, "ಮದುವೆ ವಿಚಾರವಾಗಿ ಈ ಮೊದಲು ನಾನು ಮತ್ತು ಸುಶಾಂತ್ ಮಾತನಾಡಿದ್ದೆವು. ಕೊರೊನಾ ಇದೆ ಈ ಸಂದರ್ಭದಲ್ಲಿ ನಾನು ಮದುವೆಯಾಗುವುದಿಲ್ಲ. ಆದರೆ, ಸಿನಿಮಾ ರಿಲೀಸ್ ಆದ ಬಳಿಕ 2021ರ ಫೆಬ್ರವರಿ - ಮಾರ್ಚ್ ತಿಂಗಳಲ್ಲಿ ಆಗುತ್ತೇನೆ" ಎಂದಿದ್ದರಂತೆ ಸುಶಾಂತ್.
"ನಿನ್ನ ಜೀವನವನ್ನು ಯಾರೊಂದಿಗೆ ಕಳೆಯಲು ಇಷ್ಟಪಡುತ್ತೀಯೋ ಅವಳ ಜೊತೆಯೇ ನೀನು ವಿವಾಹವಾಗು" ಎಂದು ಹೇಳಿದ್ದರಂತೆ ಕೆಕೆ ಸಿಂಗ್. ಖಾಸಗಿ ಟಿವಿ ಮಾಧ್ಯಮಕ್ಕೆ ನೀಡಿದ ಸಂದರ್ಶನಲ್ಲಿ ಮಾತನಾಡಿದ ಅವರು, ''ನನ್ನ ಮಗ ಸಣ್ಣ ವಯಸ್ಸಿನಲ್ಲಿರುವಾಗ ಮನಬಿಚ್ಚಿ ಮಾತನಾಡುತ್ತಿದ್ದ. ಆದರೆ ಕೆಲ ವರ್ಷಗಳಿಂದ ಆತ ಏಕಾಂಗಿಯಾಗಿಯೇ ಇರುತ್ತಿದ್ದ. ಹೆಚ್ಚಾಗಿ ಯಾರೊಂದಿಗೂ ಮಾತನಾಡುತ್ತಿರಲಿಲ್ಲ'' ಎಂದಿದ್ದಾರೆ.