ಕರ್ನಾಟಕ

karnataka

ETV Bharat / sitara

Bigg Boss Season 8: ಪ್ರಶಾಂತ್​ ಸಂಬರಗಿ ತಪ್ಪಿನ ಫ್ಯಾಕ್ಟ್​ ಚೆಕ್​ ಮಾಡಿದ ಕಿಚ್ಚ

ಬಿಗ್​ಬಾಸ್​ ಸೀಸನ್​​ 8ರ ಸೆಕೆಂಡ್​ ಇನ್ನಿಂಗ್ಸ್​​ನ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ, ದಿವ್ಯಾ ಸುರೇಶ್ ಅವರ ಸಿನಿಮಾ ಬಗ್ಗೆ ರ್ಯಾಗಿಂಗ್ ಮಾಡಿದ್ದ ಪ್ರಶಾಂತ್ ವರ್ತನೆ ಕುರಿತಾಗಿ ಚರ್ಚೆ ನಡೆದಿದ್ದು, ಪ್ರಶಾಂತ್​ಗೆ ಸುದೀಪ್​ ಎಚ್ಚರಿಕೆ ನೀಡಿದ್ದಾರೆ.

sudeep took a class to prashant sambaragi
ಪ್ರಶಾಂತ್​ ಸಂಬರಗಿಗೆ ಸುದೀಪ್​ ಹೇಳಿದ್ದೇನು?

By

Published : Jul 4, 2021, 1:25 PM IST

ಬಿಗ್​ಬಾಸ್​ ಸೀಸನ್​​ 8ರ ಸೆಕೆಂಡ್​ ಇನ್ನಿಂಗ್ಸ್​​ನ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಕೆಲ ಸ್ಪರ್ಧಿಗಳಿಗೆ ನಟ ಸುದೀಪ್​ ಕ್ಲಾಸ್​ ತೆಗೆದುಕೊಂಡಿದ್ದಾರೆ. ದಿವ್ಯಾ ಸುರೇಶ್​ ವಿಚಾರವಾಗಿ ಸ್ಪರ್ಧಿ ಪ್ರಶಾಂತ್​ ಸಂಬರಗಿ ನಡೆದುಕೊಂಡಿರುವ ರೀತಿಯ ಕುರಿತು ಚರ್ಚೆ ನಡೆದಿದ್ದು, ಸುದೀಪ್​ ಎಚ್ಚರಿಕೆ ನೀಡಿದ್ದಾರೆ.

ಬಿಗ್​ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ

ದಿವ್ಯಾ ಸುರೇಶ್ ಅವರ ಸಿನಿಮಾ ಬಗ್ಗೆ ರ್ಯಾಗಿಂಗ್ ಮಾಡಿದ್ದ ಪ್ರಶಾಂತ್ ಬಗ್ಗೆ ಮಾತನಾಡಿದ ಸುದೀಪ್, ನಿಮ್ಮ 45 ವರ್ಷದ ಈ ಜರ್ನಿಯಲ್ಲಿ ನಿಮಗೆ ನೀವು ಮಾಡಿರುವ ಯಾವುದಾದರೂ ಒಂದು ಕೆಲಸದ ಬಗ್ಗೆ ನಿಮಗೆ ಬೇಸರ, ಮುಜುಗರ ಅನ್ನಿಸಿದೆಯಾ? ನಾನು ಹೀಗೆ ಮಾಡಬಾರದಿತ್ತು ಅಂತ ಅನಿಸಿದೆಯಾ? ಎಂದು ಪ್ರಶಾಂತ್ ಅವರನ್ನು ಕೇಳಿದರು. ಪ್ರಶಾಂತ್ ಮೊದಲು ಇಲ್ಲ ಎಂದು ಹೇಳಿದರು. ಆಗ ಸುದೀಪ್ ಮತ್ತೆ ಮತ್ತೆ ಕೇಳಿದರು. ನೀವು ಡಿಗ್ರಿ ಓದುತ್ತಿದ್ದಾಗ ಏನೂ ನಡೆದಿಲ್ಲವಾ ಎಂದಾಗ, ಪ್ರಶಾಂತ್ ನನಗೆ ನೆನಪಾಗುತ್ತಿಲ್ಲ ಎಂದು ಹೇಳಿ ಜಾರಿಕೊಳ್ಳುವ ಪ್ರಯತ್ನ ಮಾಡಿದರು. ನಂತರ ಪ್ರಶಾಂತ್ ಹೌದು ಎಂದಿದ್ದಾರೆ.

ಸುದೀಪ್ ಮಾತಿಗಿಳಿದು.. ಹಾಗಾದ್ರೆ ನೀವು ದಿವ್ಯಾ ಸುರೇಶ್ ಅವರು ಮಾಡಿರುವ ಸಿನಿಮಾ ಹೆಸರು ತೆಗೆದುಕೊಂಡು ರ್ಯಾಗಿಂಗ್ ಮಾಡುತ್ತಿದ್ದೀರಾ ಯಾಕೆ ಎಂದು ಗರಂ ಆಗಿ ಪ್ರಶ್ನಿಸಿದರು. ಆಗ ಪ್ರಶಾಂತ್, ಇಲ್ಲ ಸರ್.. ನಾನು ಒಂದು ದಿನ ಮಾಡಿದ್ದೇನೆ ಅಷ್ಟೇ ಎಂದು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದರು. ಆಗ ಸುದೀಪ್​, ನೀವು ನೋವು ಮಾಡುವ ಉದ್ದೇಶದಿಂದಲೇ ಮಾಡಿದಾಗ ನಾಟ್ ಓಕೆ, ಕೆಲವು ವಿಚಾರಗಳನ್ನು ಮಾತನಾಡುವಾಗ ಯೋಚಿಸಿ ಮಾತನಾಡಿ, ನಾನು ಕೂಡಾ ಸಿನಿಮಾ ಮಾಡಿದ್ದೇನೆ, ನಾನು ಗೆದ್ದಿದ್ದೇನೆ, ಸೋತಿದ್ದೇನೆ. ಒಂದೊಂದು ಪಾಠವನ್ನು ಕಲಿತಿದ್ದೇನೆ ಎಂದು ಬುದ್ಧಿ ಹೇಳಿದ್ರು.

ದಿವ್ಯಾ ಸುರೇಶ್ ಬಗ್ಗೆ 72 ದಿನದಲ್ಲಿ ಒಂದೇ ಒಂದು ನೆಗೆಟಿವ್ ಆಗಿ ಮಾತನಾಡಿಲ್ಲ ಎಂದು ಹೇಳುತ್ತೀರಾ. ಫ್ಯಾಕ್ಟ್ ಚೆಕ್ ಮಾಡಿದ್ರೆ ಪ್ರಶಾಂತ್ ಅವರೇ ನೀವು ಶೃತಿ ತಪ್ಪುತ್ತಾ ಇದ್ದೀರಾ, ಇನ್ಮೇಲೆ ನಿಮಗೆ ಬಿಟ್ಟಿದ್ದು, ನಾನು ಹೇಳುವುದನ್ನು ನೇರವಾಗಿ ಹೇಳಿದ್ದೇನೆ ಎಂದರು.

ದಿವ್ಯಾ ಸುರೇಶ್​ಗೆ ಧೈರ್ಯ ತುಂಬಿದ ಸುದೀಪ್:

ನೀವೆಲ್ಲರೂ ಒಂದೇ ನನಗೆ. ನಿಮಗೆ ನಿಮ್ಮದೇ ಐಡೆಂಟಿಟಿಗಳಿವೆ. ನಿಮ್ಮ ಸಿನಿಮಾ ಬಗ್ಗೆ ನಿಮಗೆ ಹೆಮ್ಮೆ ಇರಲಿ. ದಿವ್ಯಾ ಅವರೇ, ನಿಮ್ಮ ಕುರಿತಾಗಿ ಮಾತನಾಡುವಾಗ ಕಣ್ಣೀರು ಹಾಕುವುದಲ್ಲ. ನಿಮಗೆ ಅನ್ನಿಸಿದ್ದನ್ನು ನೇರವಾಗಿ ಮಾತನಾಡಿ ಎಂದು ಧೈರ್ಯ ತುಂಬಿದರು.

ABOUT THE AUTHOR

...view details