ಇಂದು ಖ್ಯಾತ ನಟ, ನಿರ್ದೇಶಕ ಶಂಕರ್ನಾಗ್ ಹುಟ್ಟಿದ ದಿನ. ಈ ದಿನ ಅವರು ನಮ್ಮೊಂದಿಗೆ ಇದ್ದಿದ್ದರೆ ಅಭಿಮಾನಿಗಳು ಶಂಕ್ರಣ್ಣನ 66ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದರು. ಅಭಿಮಾನಿಗಳು ಹಾಗೂ ಕಿಚ್ಚ ಸುದೀಪ್ ಶಂಕರ್ನಾಗ್ ಅವರನ್ನು ಸ್ಮರಿಸಿದ್ದಾರೆ.
ಇಂದು ಶಂಕರ್ ನಾಗ್ ಹುಟ್ಟಿದ ದಿನ...ಕರಾಟೆ ಕಿಂಗ್ನನ್ನು ಸ್ಮರಿಸಿದ ಪೈಲ್ವಾನ್ - Sudeep reminds Shankarnag
80-90 ರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ನೀಡಿದ ಆಟೋರಾಜ ಶಂಕರ್ನಾಗ್ ಅವರ 66ನೇ ಹುಟ್ಟುಹಬ್ಬ ಇಂದು. ಕಿಚ್ಚ ಸುದೀಪ್ ಶಂಕರ್ನಾಗ್ ಅವರ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಅವರನ್ನು ಸ್ಮರಿಸಿದ್ದಾರೆ.
ಸುದೀಪ್ ತಮ್ಮ ಟ್ವಿಟ್ಟರ್ನಲ್ಲಿ ಶಂಕರ್ನಾಗ್ ಅವರ ಫೋಟೋವನ್ನು ಹಂಚಿಕೊಂಡು 'ಎಲ್ಲರ ಪಾಲಿನ ಹೀರೋ' ಎಂದು ಕ್ಯಾಪ್ಷನ್ ಹಾಕಿದ್ದಾರೆ. ಅಭಿಮಾನಿಗಳು ಕೂಡಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶಂಕರ್ನಾಗ್ ಫೋಟೋ ಹಾಕಿ ಅವರನ್ನು ನೆನೆದಿದ್ದಾರೆ. ವಾಟ್ಸಾಪ್ ಡಿಪಿ ಹಾಗೂ ಸ್ಟೇಟಸ್ಗಳಲ್ಲಿ ಕೂಡಾ ಇಂದು ಆಟೋರಾಜನ ಫೋಟೋಗಳು ರಾರಾಜಿಸುತ್ತಿವೆ. ಶಂಕರ್ನಾಗ್ ಅಭಿಮಾನಿಗಳು ಅದರಲ್ಲೂ ಆಟೋ ಚಾಲಕರು ಎಲ್ಲರಿಗೂ ಸಿಹಿ ಹಂಚುವ ಮೂಲಕ ಶಂಕ್ರಣ್ಣನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
ಶಂಕರ್ನಾಗ್ ಅವರ ಬಗ್ಗೆ ಎಷ್ಟು ಹೇಳಿದರೂ ಸಾಲದು. ಒಟ್ಟಿನಲ್ಲಿ ಇಂದು ಅವರು ಬದುಕಿದ್ದಿದ್ದರೆ ಕನ್ನಡ ಚಿತ್ರರಂಗ ಅಂತಾರಾಷ್ಟ್ರಿಯ ಮಟ್ಟದಲ್ಲಿ ಬೆಳೆಯುತ್ತಿತ್ತು ಎಂಬ ಮಾತು ಮಾತ್ರ ನಿಜ. ಶಂಕರ್ನಾಗ್ ಅಗಲಿ 30 ವರ್ಷಗಳಾದರೂ ಅಭಿಮಾನಿಗಳು ಇಂದಿಗೂ ಅವರನ್ನು ಆರಾಧಿಸುತ್ತಿದ್ದಾರೆ. 'ಮಾಲ್ಗುಡಿ ಡೇಸ್' ಧಾರಾವಾಹಿಯನ್ನು ನಿರ್ದೇಶಿಸುವ ಮೂಲಕ ಕರ್ನಾಟಕದ ಸ್ಥಳಗಳನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸಿದ್ದರು. ಈ ಧಾರಾವಾಹಿ ಚಿತ್ರೀಕರಣಗೊಂಡಿದ್ದ ಶಿವಮೊಗ್ಗದ ಹೊಸನಗರ ತಾಲೂಕಿನ ಅರಸಾಳು ರೈಲು ನಿಲ್ದಾಣ ಇದೀಗ ಮ್ಯೂಸಿಯಂ ಆಗಿದೆ.