ಕರ್ನಾಟಕ

karnataka

ETV Bharat / sitara

'ನಾನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಬೇಡಿ' ಎಂದು ಬೇಡಿಕೊಂಡ ಗಾಯಕಿ ನೇಹಾ ಕಕ್ಕರ್​​

'ಇಂಡಿಯನ್ ಐಡಲ್​​​' ಕಾರ್ಯಕ್ರಮದ ಸ್ಪರ್ಧಿಯೊಬ್ಬರೊಂದಿಗೆ ನೇಹಾ ಬಹಳ ದಿನಗಳಿಂದ ಡೇಟಿಂಗ್​​ನಲ್ಲಿದ್ದಾರೆ. ಅವರೊಂದಿಗೆ ತಿರುಗುತ್ತಿದ್ದಾರೆ ಎಂಬ ರೂಮರ್​​ಗಳಿಂದ ಗಾಯಕಿ ನೇಹಾ ನೊಂದಿದ್ದಾರೆ. ದಯವಿಟ್ಟು ಇಲ್ಲಸಲ್ಲದ ಸುಳ್ಳುಸುದ್ದಿಗಳನ್ನು ಹಬ್ಬಿಸಬೇಡಿ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅವರು ಮನವಿ ಮಾಡಿದ್ದಾರೆ.

ಗಾಯಕಿ ನೇಹಾ ಕಕ್ಕರ್​

By

Published : Aug 13, 2019, 9:17 PM IST

ಬಾಲಿವುಡ್ ಗಾಯಕಿ ನೇಹಾ ಕಕ್ಕರ್ ದನಿಗೆ ಮಾರುಹೋಗದವರಿಲ್ಲ. ತಮ್ಮ ಗಾಯನದಿಂದ ಎಲ್ಲರನ್ನು ಮಂತ್ರಮುಗ್ಧಗೊಳಿಸುವ ನೇಹಾ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ನೋವನ್ನು ಹೊರಹಾಕಿದ್ದಾರೆ. 'ನಾನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಬೇಡಿ' ಎಂದು ಬೇಡಿಕೊಂಡಿದ್ದಾರೆ.

'ಇಂಡಿಯನ್ ಐಡಲ್' ಕಾರ್ಯಕ್ರಮದ ಸ್ಪರ್ಧಿಯೊಬ್ಬರೊಂದಿಗೆ ನೇಹ ಕಕ್ಕರ್ ಡೇಟಿಂಗ್ ಮಾಡುತ್ತಿದ್ದು, ಇಬ್ಬರೂ ಜೊತೆಯಾಗಿ ತಿರುಗುತ್ತಿದ್ದಾರೆ. ಅಲ್ಲದೆ ಜೊತೆಯಾಗೇ ಬಹಳಷ್ಟು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದೆ. ಈ ರೂಮರ್​​​​​​ಗೆ ಮನನೊಂದಿರುವ ನೇಹಾ ಕಕ್ಕರ್​​, 'ದಯವಿಟ್ಟು ಹೀಗೆ ಇಲ್ಲಸಲ್ಲದ ರೂಮರ್ ಹಬ್ಬಿಸಬೇಡಿ. ಈ ಸುಳ್ಳು ಸುದ್ದಿಯಿಂದ ನನ್ನ ಮನಸ್ಸಿಗೆ ಬಹಳ ನೋವಾಗಿದೆ. ನಾನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಬೇಡಿ' ಎಂದು ತಮ್ಮ ಇನ್ಸ್​​​ಟಾಗ್ರಾಂ​ ಮೂಲಕ ನೆಟಿಜನ್​​​​ಗಳಿಗೆ ಮನವಿ ಮಾಡಿದ್ದಾರೆ.

'ಈ ಪೋಸ್ಟ್​​ ಬರೆಯುವಾಗ ನಾನು ಮಾನಸಿಕ, ಶಾರೀರಿಕವಾಗಿ ಕುಗ್ಗಿ ಹೋಗಿದ್ದೇನೆ. ಆದರೆ ನಾನು ಮಾತನಾಡಲೇಬೇಕು. ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರು ನಾನೂ ಒಬ್ಬಳು ಹೆಣ್ಣು, ನಾನು ಅವರ ಸೋದರಿಯಂತೆ ಎಂದು ಅರ್ಥ ಮಾಡಿಕೊಳ್ಳುವ ಮನಸ್ಥಿತಿಯನ್ನು ಹೊಂದಿಲ್ಲ. ಇದುವರೆಗೂ ಸಿನಿ ಇಂಡಸ್ಟ್ರಿಯಲ್ಲಿ ನನ್ನನ್ನು ನಾನು ಗುರುತಿಸಿಕೊಳ್ಳುವುದಕ್ಕೆ ಬಹಳ ಕಷ್ಟಪಟ್ಟಿದ್ದೇನೆ. ನನ್ನ ಕರಿಯರ್​​ನಿಂದ ನನ್ನ ಕುಟುಂಬ ಹೆಮ್ಮೆ ಪಡುವಂತೆ ಮಾಡಿದ್ದೇನೆ. ಅಂತದ್ದರಲ್ಲಿ ನನ್ನ ವೈಯಕ್ತಿಕ ವಿಷಯದ ಬಗ್ಗೆ ಏಕೆ ಜನರು ಇಲ್ಲಸಲ್ಲದ್ದನ್ನು ಮಾತನಾಡುತ್ತಾರೆ ಎಂಬುದು ನನಗೆ ಇನ್ನೂ ಅರ್ಥವಾಗುತ್ತಿಲ್ಲ. ನಾನು ಸೆಲಬ್ರಿಟಿ ಆಗುವುದಕ್ಕಿಂತ ಮುನ್ನ ಒಂದು ಹೆಣ್ಣು ಎನ್ನುವುದನ್ನು ಮರೆಯಬೇಡಿ. ನಿಮ್ಮ ಸೋದರಿ, ಮಗಳ ಬಗ್ಗೆ ಇದೇ ರೀತಿ ಮಾತನಾಡುತ್ತೀರಾ? ನಾನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಬೇಡಿ ಎಂದು ನೇಹಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ ಹಾಕಿಕೊಂಡಿದ್ದಾರೆ.

ABOUT THE AUTHOR

...view details