ಬಿಗ್ ಬಾಸ್ ಸ್ಪರ್ಧಿ ಪ್ರಥಮ್ ನಟಿಸಿ, ನಿರ್ದೇಶನ ಮಾಡಿರುವ ಚಿತ್ರ ನಟ ಭಯಂಕರ. ಬಿಡುಗಡೆಗೆ ಸಜ್ಜಾಗಿರುವ ಈ ಸಿನಿಮಾದ ಪೋಸ್ಟರ್ ಅನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಬಿಡುಗಡೆ ಮಾಡಿದರು. ಇದೇ ವೇಳೆ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.
ನಂತರ ಮಾತನಾಡಿದ ನಟ ಪ್ರಥಮ್, ನಾನು ನಿರ್ದೇಶಕನಾಗಿ, ನಟನಾಗಿ ಸಿನಿಮಾ ಮಾಡ್ತಿರುವುದರಿಂದ ನಿಮ್ಮ ಸಿನಿಮಾ ನೋಡೇ ನೋಡ್ತೀನಿ ಎಂದು ಸಿದ್ದರಾಮಯ್ಯ ಸರ್ ತಿಳಿಸಿದ್ದಾರೆ ಎಂದು ಹೇಳಿದರು.
ಚಿತ್ರಕ್ಕೆ ಸುಶ್ಮಿತಾ ಜೋಷಿ ಹೀರೋಯಿನ್ ಆಗಿದ್ದಾರೆ. ಹಿರಿಯ ನಟ ಸಾಯಿಕುಮಾರ್ ನಟಿಸಿದ್ದಾರೆ. ಓಂ ಪ್ರಕಾಶ್ ರಾವ್, ನಿಹಾರಿಕಾ ಶೆಣೈ, ಸುಶ್ಮಿತ ಜೋಶಿ, ಶೋಭ್ ರಾಜ್, ಕುರಿ ಪ್ರತಾಪ್, ಚಂದನ ರಾಘವೇಂದ್ರ, ಶಂಕರ್ ಅಶ್ವತ್ಥ್, ಮೋಹನ್ ಜುನೇಜ, ರಮ, ಬಿರಾದಾರ್, ಎಂ.ಎಸ್ ಉಮೇಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ.