ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬರೋಬ್ಬರಿ 35 ವರ್ಷಗಳನ್ನ ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ಅಭಿಮಾನಿಗಳ ಸೇನಾ ಸಮಿತಿ, ನಾಗವಾರದ ಶಿವರಾಜ್ ಕುಮಾರ್ ನಿವಾಸದಲ್ಲಿ ಕೇಕ್ ಕತ್ತರಿಸುವ ಮೂಲಕ ಅಭಿಮಾನಿಗಳ ಜೊತೆ ಸಂಭ್ರಮವನ್ನ ಆಚರಿಸಿದ್ರು.
ಶಿವಣ್ಣ ಸಿನಿ ಜರ್ನಿ@35.. ನಿರ್ಮಾಪಕ, ನಿರ್ದೇಶಕರಿಗೆ ಸೆಂಚುರಿ ಸ್ಟಾರ್ ಕೃತಜ್ಞತೆ - ಶಿವರಾಜ್ಕುಮಾರ್ ಸುದ್ದಿ
ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಿನಿಮಾ ಇಂಡಸ್ಟ್ರಿಯಲ್ಲಿ ಬರೋಬ್ಬರಿ 35 ವರ್ಷಗಳನ್ನ ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಅವರು ಧನ್ಯವಾದ ತಿಳಿಸಿದ್ದಾರೆ.
ಸಿಲ್ವರ್ ಸ್ಕ್ರೀನ್ ಮೇಲೆ ಮೂರುವರೆ ದಶಕಗಳ ಕಾಲ ಮಿಂಚಿದ ಶಿವರಾಜ್ ಕುಮಾರ್ ತಮ್ಮ 35ನೇ ವರ್ಷಕ್ಕೆ ಕಾರಣರಾದ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞಾನ, ಸಹ ಕಲಾವಿದರು, ಕೋ ಸ್ಟಾರ್ಸ್ ಹಾಗು ತಮ್ಮ ಕುಟುಂಬ ವರ್ಗಕ್ಕೆ ಶಿವಣ್ಣ ಮನಃಪೂರ್ವಕವಾಗಿ ಕೃತಜ್ಞತೆ ಹೇಳಿದ್ದಾರೆ. ಅಂದಹಾಗೆ, ಶಿವರಾಜ್ ಕುಮಾರ್ ಆನಂದ್ ಸಿನಿಮಾದ ಮೂಲಕ ನಾಯಕನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು.
1986ರಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಸಿಂಗೀತಂ ಶ್ರೀನಿವಾಸ್ ರಾವ್ ಈ ಚಿತ್ರವನ್ನು ನಿರ್ದೇಶಿಸಿದ್ದರು. ಅಲ್ಲಿಂದ ಇಲ್ಲಿಯವರೆಗೂ ಸುಮಾರು 125ಕ್ಕೂ ಅಧಿಕ ಸಿನಿಮಾಗಳಲ್ಲಿ ಸೆಂಚುರಿ ಸ್ಟಾರ್ ನಟಿಸಿದ್ದಾರೆ.