ಕರ್ನಾಟಕ

karnataka

By

Published : Oct 20, 2020, 12:19 PM IST

ETV Bharat / sitara

ತೆರೆಯ ಮೇಲೆ ಮತ್ತೆ ಬರ್ತಿದ್ದಾರೆ 'ಆಚಾರ್ಯ ಶ್ರೀ ಶಂಕರ'

8ನೇ ಶತಮಾನದಲ್ಲಿ ಅದ್ವೈತ ಸಿದ್ಧಾಂತದ ಮೂಲಕ ಸಮಾಜದಲ್ಲಿನ ತಾರತಮ್ಯಗಳನ್ನು ಸರಿ ಮಾಡುವ ಪ್ರಯತ್ನ ನಡೆಸಿದ್ದ ಶಂಕರಾಚಾರ್ಯರ ಜೀವನಾಧಾರಿತ ಸಿನಿಮಾ ಇದೀಗ ಸಿದ್ಧವಾಗುತ್ತಿದೆ. ಚಿತ್ರವನ್ನು ಕನ್ನಡ, ತೆಲುಗು ಮತ್ತು ಸಂಸ್ಕೃತದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

aacharya shree shankara movie in kannada, telugu, Sanskrit
ತೆರೆಯ ಮೇಲೆ ಮತ್ತೆ ಬರ್ತಿದ್ದಾರೆ 'ಆಚಾರ್ಯ ಶ್ರೀ ಶಂಕರ'

1984ರಲ್ಲಿ ತೆರೆ ಕಂಡ ಶಂಕರಾಚಾರ್ಯರ ಜೀವನಾಧಾರಿತ ಸಂಸ್ಕೃತದ ಆದಿ ಶಂಕರಾಚಾರ್ಯ ಸಿನಿಮಾ ರಾಷ್ಟ್ರಮಟ್ಟದಲ್ಲಿ ಜನಮನ್ನಣೆ ಗಳಿಸಿತ್ತು. ಇದೀಗ ಅಂತಹದ್ದೇ ಮತ್ತೊಂದು ಸಿನಿಮಾ ಆಚಾರ್ಯ ಶ್ರೀ ಶಂಕರ ಕನ್ನಡ, ತೆಲುಗು ಮತ್ತು ಸಂಸ್ಕೃತದಲ್ಲಿ ಚಿತ್ರೀಕರಣ ಮುಗಿಸಿದೆ.

ಆಚಾರ್ಯ ಶ್ರೀ ಶಂಕರ

8ನೇ ಶತಮಾನದಲ್ಲಿ ಅದ್ವೈತ ಸಿದ್ಧಾಂತದ ಮೂಲಕ ಸಮಾಜದ ಓರೆಕೋರೆಗಳನ್ನು ತಿದ್ದುವ ಕೆಲಸ ಮಾಡಿದ್ದ ಶಂಕರಾಚಾರ್ಯರ ಜೀವನಾಧಾರಿತ ಸಿನಿಮಾ ಇದಾಗಿದ್ದು, ಸಿನಿಮಾಕ್ಕೆ ರಾಜ ರವಿಶಂಕರ್ ನಿರ್ದೇಶನ ಮಾಡಿದ್ದು, ವೈ ಎನ್ ಶರ್ಮಾ ಮತ್ತು ಅವರ ಪತ್ನಿ ಶ್ರೀಮತಿ ವಿಜಯಲಕ್ಷ್ಮಿ ಬಂಡವಾಳ ಹಾಕಿದ್ದಾರೆ.

ಆಚಾರ್ಯ ಶ್ರೀ ಶಂಕರ

ಚಿತ್ರದಲ್ಲಿನ ಕಥೆ, ಚಿತ್ರಕಥೆ ಮತ್ತು ಸಂಭಾಷೆಯನ್ನು ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳು ಪರಾಮರ್ಶಿಸಿ ಅನುಮತಿ ನೀಡಿದ್ದಾರೆ. ಸಿನಿಮಾವು ಇದೇ ವರ್ಷದ ಜನವರಿಯಲ್ಲಿ ಶೃಂಗೇರಿ ಶಾರದಾಂಬೆಯ ಸನ್ನಿಧಿಯಲ್ಲಿ ಆರಂಭವಾಗಿತ್ತು. ತೀರ್ಥಹಳ್ಳಿ, ಕುಂದಾಪುರ, ದೇವರಾಯನದುರ್ಗದಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಯಿತು.

ಆಚಾರ್ಯ ಶ್ರೀ ಶಂಕರ ಸಿನಿಮಾ ತಂಡ

ಸಿನಿಮಾದ ಮುಖ್ಯ ಭಾಗವಾದ ಶಂಕರಾಚಾರ್ಯರ ಪಾತ್ರಕ್ಕೆ ಶಿರಸಿಯ ರವೀಂದ್ರ ಭಾಗವತ್ ಬಣ್ಣಹಚ್ಚಿದ್ದಾರೆ. ಮಂಡನ ಮಿಶ್ರ ಪಾತ್ರದಲ್ಲಿ ಹಿರಿಯ ನಟ ರಾಮಕೃಷ್ಣ, ಕುಮಾರಿಲ ಭಟ್ಟನಾಗಿ ರಮೇಶ್ ಭಟ್, ಮಾಸ್ಟರ್ ಲಿಖಿತ ಶರ್ಮ, ಮಾಸ್ಟರ್ ಬಿ ಪಿ ರೋಹಿತ್ ಶರ್ಮ, ಡಾ ಆರೂಡ ಭಾರತಿ ಸ್ವಾಮೀಜಿ, ಮೂಗು ಸುರೇಶ್, ಜಿ ರಾಮ ರಾವ್, ಆದಿತ್ಯ ಶೆಟ್ಟಿ, ಸಾಯಿಪ್ರಕಾಶ್, ನಾಗೇಂದ್ರ ಪ್ರಸಾದ್, ಸತ್ಯ ಪ್ರಸಾದ್, ಶಶಿ ಕೋಟೆ, ವಿನಯಾ ಪ್ರಸಾದ್, ಪ್ರಥಮ ಪ್ರಸಾದ್, ತೇಜಸ್ವಿನಿ, ಸುರೇಖ ಸುಕುಮಾರ, ಸುಧ, ಉಷಾ ಹಾಗೂ ಇನ್ನಿತರರು ಈ ಚಿತ್ರದಲ್ಲಿ ಇದ್ದಾರೆ.

ಆಚಾರ್ಯ ಶ್ರೀ ಶಂಕರ ಸಿನಿಮಾ ತಂಡ

ಚಿತ್ರಕ್ಕೆ ಅರ್ಜುನ ಜನ್ಯ ಸಂಗೀತ ನೀಡಿದ್ದು, ಸಿ ನಾರಾಯಣ ಛಾಯಾಗ್ರಹಣ, ಆರ್ ದೊರೆರಾಜ್ ಸಂಕಲನ, ಕುಮಾರ ನೊಣವಿನಕೆರೆ ಮೇಕಪ್, ಕೆ ಚಂದ್ರಚಾರಿ ವಸ್ತ್ರ ವಿನ್ಯಾಸ ಮಾಡಿದ್ದಾರೆ.

ಆಚಾರ್ಯ ಶ್ರೀ ಶಂಕರ ಸಿನಿಮಾ ತಂಡ

ABOUT THE AUTHOR

...view details