ಬೆಂಗಳೂರು:ಹಿರಿಯ ನಟ ಶನಿ ಮಹದೇವಪ್ಪ (88) ಕಳೆದ ನಾಲ್ಕು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ಕೊನೆಯುಸಿರೆಳೆದಿದ್ದಾರೆ.
'ಕವಿರತ್ನ ಕಾಳಿದಾಸ' ಖ್ಯಾತಿಯ ಶನಿ ಮಹದೇವಪ್ಪ ವಿಧಿವಶ - ಹಿರಿಯ ನಟ ಶನಿ ಮಹದೇವಪ್ಪ ವಿಧಿವಶ
ಹಿರಿಯ ನಟ ಶನಿ ಮಹದೇವಪ್ಪ ಕಳೆದ ನಾಲ್ಕು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ನಿಧನರಾದರು.
ಹಿರಿಯ ನಟ ಶನಿ ಮಹದೇವಪ್ಪ ವಿಧಿವಶ
450ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಮನೋಜ್ಞವಾಗಿ ಅಭಿನಯಿಸಿರುವ ಇವರು, ಕವಿರತ್ನ ಕಾಳಿದಾಸ, ಗುರು, ಕೆರಳಿದ ಸಿಂಹ, ಯಾರಿವನು.. ಸೇರಿದಂತೆ ಕನ್ನಡದ ವರನಟ ಡಾ.ರಾಜ್ ಕುಮಾರ್ ಜೊತೆ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಈ ಮೂಲಕ ಕನ್ನಡ ಸಿನಿಮಾ ಲೋಕದಲ್ಲಿ ವಿಶೇಷ ಛಾಪು ಮೂಡಿಸಿದ್ದರು.
ಅನಾರೋಗ್ಯದ ಕಾರಣ ಕೆ.ಸಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದ ಇವರು ಸಂಜೆ 5 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ. ಶನಿ ಮಹದೇವಪ್ಪ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
Last Updated : Jan 3, 2021, 7:40 PM IST