ಕರ್ನಾಟಕ

karnataka

ETV Bharat / sitara

ಬಗೆದಷ್ಟು ತಿಳಿಯುತ್ತಲೇ ಇದೆ ಸಂಜನಾ ಕುರಿತಾದ ಸೀಕ್ರೇಟ್​​​​​​​...ನಟಿಯ ಜೊತೆಗಿರುವ ಆ ಡಾಕ್ಟರ್ ಯಾರು..? - Sandalwood drug case

ಸಿಸಿಬಿ ಪೊಲೀಸರು ಸಂಜನಾ ಗಲ್ರಾನಿಯನ್ನು ವಶಕ್ಕೆ ಪಡೆದಾಗ ರಾಹುಲ್ ತಂದೆ, ನನಗೆ ಅನಾರೋಗ್ಯ ಕಾಡಿದಾಗ ಸಂಜನಾ ಪೊಲೀಸರು ನನಗೆ ಚಿಕಿತ್ಸೆ ನೀಡಿದ್ದರು ಎಂದು ಹೇಳಿಕೆ ನೀಡಿದ್ದರು. ಇದೀಗ ನೆರೆಹೊರೆಯವರೂ ಕೂಡಾ ಸಂಜನಾ ಡಾಕ್ಟರೊಬ್ಬರ ಜೊತೆ ಲಿವಿಂಗ್ ರಿಲೇಷನ್​​​ಶಿಪ್​​​ನಲ್ಲಿದ್ದರು ಎಂದು ಆರೋಪಿಸುತ್ತಿದ್ದಾರೆ.

Secret revealed about Sanjana galrani
ಸಂಜನಾ

By

Published : Sep 8, 2020, 1:32 PM IST

Updated : Sep 8, 2020, 2:07 PM IST

ಸ್ಯಾಂಡಲ್​ವುಡ್ ನಟಿ ಸಂಜನಾ ಗಲ್ರಾನಿಯನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಕಚೇರಿಗೆ ಕರೆದೊಯ್ದಿದ್ದಾರೆ. ಈ ನಡುವೆ ಸಂಜನಾ ಕುರಿತಾಗಿ ಹೊಸ ವಿಚಾರವೊಂದು ಬೆಳಕಿಗೆ ಬಂದಿದೆ.

ರಾಹುಲ್ ಬರ್ತ್​ಡೇ ಸೆಲಬ್ರೇಷನ್

ವೈದ್ಯರೊಬ್ಬರೊಂದಿಗೆ ಸಂಜನಾ ಗಲ್ರಾನಿ ಲಿವಿಂಗ್ ರಿಲೇಷನ್​​ನಲ್ಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಸಂಜನಾ ಅಪಾರ್ಟ್​ಮೆಂಟ್​ ಸುತ್ತಮುತ್ತಲಿನ ನಿವಾಸಿಗಳು ಸಂಜನಾ ಬಗ್ಗೆ ಆರೋಪಿಸಿದ್ದಾರೆ. ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಕಾರ್ಡಿಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿರುವ ಡಾಕ್ಟರ್ ಜೊತೆ ಸಂಜನಾ ಲಿವಿಂಗ್ ರಿಲೇಷನ್​​​​​​ನಲ್ಲಿದ್ದರು ಎಂದು ನೆರೆಹೊರೆಯವರು ಆರೋಪಿಸಿದ್ದಾರೆ. ಅಲ್ಲದೆ, ಸಂಜನಾ ಆಗ್ಗಾಗ್ಗೆ ಪಾರ್ಟಿ ಮಾಡಿಕೊಂಡು ನೆರೆಹೊರೆಯವರಿಗೆ ಬಹಳ ಕಿರಿಕಿರಿಯುಂಟುಮಾಡುತ್ತಿದ್ದರು. ಯಾವ ಪಾರ್ಟಿ ಮಾಡಿದರೂ ಅಲ್ಲಿ ಆ ಡಾಕ್ಟರ್​ ಹಾಜರಿರುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.

ಸಂಜನಾ ಲಿವಿಂಗ್ ರಿಲೇಷನ್​​​​ನಲ್ಲಿದ್ದಾರೆ ಎನ್ನಲಾದ ವೈದ್ಯ

ಆದರೆ ಡ್ರಗ್ಸ್​ ಪ್ರಕರಣದಲ್ಲಿ ಸಂಜನಾ ಹೆಸರು ಕೇಳಿ ಬರುತ್ತಿದ್ದಂತೆ ಆ ಡಾಕ್ಟರ್ ಎಲ್ಲೂ ಕಾಣುತ್ತಿಲ್ಲ ಎನ್ನಲಾಗುತ್ತಿದೆ. ಸಂಜನಾಗೆ ಅಪಾರ್ಟ್​ಮೆಂಟ್, ಬಿಎಂಡಬ್ಲ್ಯೂ ಕಾರು ಕೊಡಿಸಿದವರು ಯಾರು ಎಂಬ ಅನುಮಾನ ಎಲ್ಲರಿಗೂ ಕಾಡುತ್ತಿದೆ. ಸಂಜನಾಗೆ ಮದುವೆಯಾಗಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಇತ್ತೀಚೆಗೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದ ರಾಹುಲ್ ತಂದೆ, ನಾನು ಅನಾರೋಗ್ಯದಿಂದ ಬಳಲುತ್ತಿದ್ದಾಗ ಸಂಜನಾ ಪತಿ ನನಗೆ ಚಿಕಿತ್ಸೆ ನೀಡಿದ್ದರು ಎಂದು ಹೇಳಿದ್ದರು.

ಸಂಜನಾ ಗಲ್ರಾನಿ

ಇದೇ ವರ್ಷ ಜನವರಿಯಂದು ಸಂಜನಾ ತಮ್ಮ ಅಪಾರ್ಟ್​ಮೆಂಟ್​​​ನಲ್ಲಿ ರಾಹುಲ್ ಹುಟ್ಟುಹಬ್ಬ ಆಚರಿಸಿದ್ದಾರೆ. ಈ ಬರ್ತ್​ಡೇ ಪಾರ್ಟಿಯಲ್ಲಿ ಕೂಡಾ ಸಂಜನಾ ಜೊತೆ ಆ ಡಾಕ್ಟರ್​ ಇರುವುದು ಕಂಡುಬಂದಿದೆ. ಒಟ್ಟಿನಲ್ಲಿ ಈ ಡ್ರಗ್ಸ್ ಪ್ರಕರಣ, ನಟಿಯರ ಬಗ್ಗೆ ಇನ್ನ್ಯಾವ ಸೀಕ್ರೇಟ್ ಹೊರತರುವುದೋ ಕಾದು ನೋಡಬೇಕು.

Last Updated : Sep 8, 2020, 2:07 PM IST

ABOUT THE AUTHOR

...view details