ಕರ್ನಾಟಕ

karnataka

ETV Bharat / sitara

ಗೆಲುವು ಕೊಟ್ಟ ಶಾಲೆ ಮರೆಯದ ಶೆಟ್ಟರು... ಹೊಸ ರೂಪ ಪಡೆದ 118 ವರ್ಷದ ಹಳೆಯ 'ಸರ್ಕಾರಿ ಶಾಲೆ ಕಾಸರಗೋಡು'

'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕೊಡುಗೆ ರಾಮಣ್ಣ ರೈ', ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲು ನೆಟ್ಟಿತು. ಇದರ ಜತೆಗೆ ಒಂದು ಕ್ರಾಂತಿಕಾರಕ ಬದಲಾವಣೆಗೂ ಮುನ್ನುಡಿ ಬರೆಯಿತು.

ಸರ್ಕಾರಿ ಶಾಲೆ ಕಾಸರಗೋಡು

By

Published : Apr 25, 2019, 11:16 AM IST

ರಿಷಭ್​ ಶೆಟ್ಟಿ ನಿರ್ದೇಶನದ, ಹಿರಿಯ ನಟ ಅನಂತ್ ನಾಗ್​ ನಟನೆಯ ಈ ಚಿತ್ರ ಮೂಡಿಸಿದ ಪ್ರಭಾದಿಂದ 'ಸರ್ಕಾರಿ ಶಾಲೆ ಉಳಿಸೋಣ' ಅಭಿಯಾನ ಪ್ರಾರಂಭವಾಯಿತು. ಇದರಡಿ ಅಳಿವಿನ ಅಂಚಿನಲ್ಲಿದ್ದ ಸಾಕಷ್ಟು ಶಾಲೆಗಳು ಮತ್ತೆ ತಲೆ ಎತ್ತಿ ನಿಂತವು.

ಸರ್ಕಾರಿ ಶಾಲೆ ಕಾಸರಗೋಡು

ಇನ್ನು ಕಾಸರಗೋಡು ಶಾಲೆ ಚಿತ್ರದ ಶೂಟಿಂಗ್​ ಬಂಟ್ವಾಳದ ಕೈರಂಗಳನ ಸರ್ಕಾರಿ ಶಾಲೆಯಲ್ಲಿ ನಡೆದಿತ್ತು. ಚಿತ್ರ ಗೆಲುವು ಪಡೆದ ನಂತ್ರ ನಿರ್ದೇಶಕ ರಿಷಭ್ ಶೆಟ್ಟಿ ಈ ಶಾಲೆಯನ್ನು ಮರೆಯಲಿಲ್ಲ. 118 ವರ್ಷಗಳ ಹಿಂದಿನ ಈ ಶಾಲೆಗೆ ಪುನರುಜ್ಜೀವನಕ್ಕೆ ಕೈ ಹಾಕಿದ್ರು. ಸಿನಿಮಾ ಗಳಿಸಿದ ಹಣದ ಕೊಂಚ ಭಾಗ ಈ ಶಾಲೆಯ ಉದ್ಧಾರಕ್ಕೆ ವಿನಿಯೋಗಿಸಿದರು.

ಸರ್ಕಾರಿ ಶಾಲೆ ಕಾಸರಗೋಡು

ಕಳೆದ ಕೆಲ ತಿಂಗಳು ಹಿಂದೆ ಕೈರಂಗಳ ಶಾಲೆ ಶಿಥೀಲಾವಸ್ಥೆಯಲ್ಲಿದ್ದ ಕಟ್ಟಡಗಳನ್ನು ದುರಸ್ತಿಗೊಳಿಸಿದ್ದರು. ಚಾವಣಿಗೆ ಹೊಸ ಹೆಂಚುಗಳನ್ನು ಹೊದಿಸಿ ಗಟ್ಟಿಮುಟ್ಟಾಗಿಸಿದ್ದರು. ಇದೀಗ ಈ ಶಾಲೆಗೆ ಮತ್ತೊಂದು ಹೊಸ ರೂಪ ನೀಡುತ್ತಿದ್ದಾರೆ ಈ ನಮ್ಮ ಶೆಟ್ಟರು.

ಸರ್ಕಾರಿ ಶಾಲೆ ಕಾಸರಗೋಡು

ಹೌದು, ಶಾಲೆಗೆ ಬಣ್ಣ ಬಳಿಸುತ್ತಿದ್ದಾರೆ. ಗೋಡೆಯ ಮೇಲೆ ಕರಾವಳಿ ಸಂಸ್ಕೃತಿ ಬಿಂಬಿಸುವ ಚಿತ್ರಗಳನ್ನು ಬಿಡಿಸಿದ್ದಾರೆ. ತಾವೇ ಮುಂದೆ ನಿಂತು ಈ ಕಾರ್ಯ ಮಾಡಿಸುತ್ತಿದ್ದಾರೆ. ಶೆಟ್ಟರ ಈ ಕಾರ್ಯದಿಂದ ಈ ಸರ್ಕಾರಿ ಶಾಲೆ ಹೊಚ್ಚ ಹೊಸ ರೂಪ ಪಡೆದ ಆಕರ್ಷಕವಾಗಿ ಕಾಣುತ್ತಿದೆ.

ತಮ್ಮ ಈ ಕೆಲಸವನ್ನು ಇಂದು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿರುವ ಶೆಟ್ಟರು, 'ರಜೆ ಮುಗಿಸಿ ಬರುವ ಮಕ್ಕಳಿಗೆ ಹೊಸ ವರ್ಷಕ್ಕೆ ಹೊಸ ಶಾಲೆ, ಹೊಸ ಕಲಿಕೆ, ಹೊಸ ಜೀವನವನ್ನು ನೀಡುವ ಪ್ರಯತ್ನದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದೇವೆ. ಆ ಮಕ್ಕಳ ಭವಿಷ್ಯಕ್ಕೂ, ನಮ್ಮ ಈ ಪ್ರಯತ್ನಕ್ಕೂ ನಿಮ್ಮ ಸಹಕಾರವಿರಲಿ' ಎಂದಿದ್ದಾರೆ.

ABOUT THE AUTHOR

...view details