ಕಳೆದ ಮೂರು ತಿಂಗಳಿಂದ ಕೆಲಸ ಇಲ್ಲದೆ ಸಿನಿ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನರಿತ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಲಾಕ್ಡೌನ್ ಆದಾಗಿನಿಂದಲೂ ಸಿನಿ ಕಾರ್ಮಿಕರ ನೆರವಿಗೆ ನಿಂತಿದ್ದಾರೆ.
ಸಿನಿ ಕಾರ್ಮಿಕರ ನೆರವಿಗೆ ನಿಂತ ಸಾ.ರಾ.ಗೋವಿಂದು ಸರ್ಕಾರ ಹಾಗೂ ದಾನಿಗಳಿಂದ ಕಾರ್ಮಿಕರಿಗೆ ದಿನಸಿ ಕಿಟ್ಗಳು ಹಾಗೂ ಬಿಗ್ ಬಜಾರ್ ವೋಚರ್ಗಳ ನೆರವು ಕೊಡಿಸಿ ಸಂಕಷ್ಟದಲ್ಲಿದ್ದ ಕಾರ್ಮಿಕರ ಹಸಿವು ನೀಗಿಸಿದ್ದಾರೆ. ಇದರ ನಡುವೆ ತೀವ್ರ ಸಕಂಷ್ಟದಲ್ಲಿದ್ದ ಪ್ರೊಡಕ್ಷನ್ ಬಾಯ್ಸ್ ನೆರವಿಗೆ ಸಾರಾ ಗೋವಿಂದು ನಿಂತು, ದಾನಿಗಳಿಂದ ದಿನಸಿ ಕಿಟ್ ಕೊಡಿಸಿದ್ದಾರೆ.
ಹೌದು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಸುಮಾರು 300ಕ್ಕೂ ಹೆಚ್ಚು ಪ್ರೊಡಕ್ಷನ್ ಕಾರ್ಮಿಕರಿಗೆ ಕೇಂದ್ರ ಜಿಎಸ್ಟಿ ಹಾಗೂ ಕಸ್ಟಮ್ ಕಮಿಷನರ್ ಅಮಿತೇಶ್ ಭರತ್ ಸಿಂಗ್ ಅವರ ನೆರವಿನಲ್ಲಿ ದಿನಸಿ ಕಿಟ್, ಸ್ಯಾನಿಟೈಸರ್ ಹಾಗೂ ಮಾಸ್ಕ್ ವಿತರಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಸಾ.ರಾ.ಗೋವಿಂದು. ಸಿನಿಮಾ ಕಾರ್ಮಿಕರ ಪರವಾಗಿ ಕಸ್ಟಮ್ಸ್ ಹಾಗೂ ಕೇಂದ್ರದ ಜಿಎಸ್ಟಿ ಅಧಿಕಾರಿಗಳಿಗೆ ಧನ್ಯವಾದ ಹೇಳಿದ್ರು. ಅಲ್ಲದೆ ಮತ್ತಷ್ಟು ದಾನಿಗಳು ಕಷ್ಟದಲ್ಲಿ ಇರುವ ಕಾರ್ಮಿಕರ ನೆರವಿಗೆ ಬರುವಂತೆ ಮನವಿ ಮಾಡಿದ್ರು.