ಕರ್ನಾಟಕ

karnataka

ETV Bharat / sitara

ಡ್ರಗ್ಸ್​​ ಪ್ರಕರಣದ ರೋಚಕ ಮಾಹಿತಿ: ಇಡಿ ಎದುರು ಬಡ್ಡಿ ವ್ಯವಹಾರ ಬಾಯ್ಬಿಟ್ರಾ ಸಂಜನಾ? - Sanjana in the ED investigation

ನಟಿ ಸಂಜನಾ ಗಲ್ರಾನಿ ಡ್ರಗ್ಸ್​ ಮಾಫಿಯಾದಲ್ಲಿ ತೊಡಗಿರುವ ಆರೋಪದ ಮೇರೆಗೆ ಸಿಸಿಬಿ ದಾಳಿ ಮಾಡಿತ್ತು. ಈ ವೇಳೆ ಹತ್ತಾರು ಚೆಕ್​​ಗಳು ಸಿಕ್ಕಿದ್ದವು. ಈ ಬಗ್ಗೆ ಪ್ರಶ್ನಿಸಿದ್ದ ಇಡಿ ಅಧಿಕಾರಿಗಳ ಎದುರು ತನ್ನ ಬಡ್ಡಿ ವ್ಯವಹಾರದ ಬಗ್ಗೆ ಸಂಜನಾ ಬಾಯ್ಬಿಟ್ಟಿದ್ದಾರೆ ಎನ್ನಲಾಗ್ತಿದೆ. ಅಲ್ಲದೆ ಬೆಂಗಳೂರಿನ ಕೆಲ ಪ್ರತಿಷ್ಠಿತ ಮಾಲ್ ಮಾಲೀಕರಿಗೆ ಕೋಟಿ ಲೆಕ್ಕದಲ್ಲಿ ಸಾಲ ನೀಡಿರುವ ವಿಚಾರವೂ ಬಯಲಾಗಿದೆ.

Sanjana in the ED investigation
ಸಂಜನಾ

By

Published : Oct 1, 2020, 5:58 PM IST

ಬೆಂಗಳೂರು: ಸ್ಯಾಂಡಲ್​​​ವುಡ್​ಗೆ ಡ್ರಗ್ಸ್​ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಸಹ ತನಿಖೆಯನ್ನ ಚುರುಕುಗೊಳಿಸಿದ್ದು, ವಿಚಾರಣೆ ವೇಳೆ ಸಂಜನಾ ಮತ್ತೊಂದು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ ಎನ್ನಲಾಗ್ತಿದೆ.

ಸಂಜನಾ

ಇಡಿ ವಿಚಾರಣೆ ವೇಳೆ ಸಂಜನಾ ಬಡ್ಡಿ ವ್ಯವಹಾರದಲ್ಲಿ ಕೂಡ ಭಾಗಿಯಾಗಿರುವ ವಿಚಾರ ಬಯಲಾಗಿದೆ‌. ಈಕೆ ನಗರದ ಪ್ರತಿಷ್ಠಿತ ಉದ್ಯಮಿಗಳ ಜೊತೆ ಕೋಟಿ ಕೋಟಿ ಲೆಕ್ಕದಲ್ಲಿ ಬಡ್ಡಿ ವ್ಯವಹಾರ ಮಾಡ್ತಿದ್ದು, ಇಲ್ಲಿಯತನಕ 20ಕ್ಕೂ ಹೆಚ್ಚು ಮಂದಿಗೆ ಸಾಲ ನೀಡಿದ್ದಾರೆ ಎಂದು ಹೇಳಲಾಗ್ತಿದೆ.

ಸಂಜನಾ ಡ್ರಗ್ಸ್​ ಮಾಫಿಯಾದಲ್ಲಿರುವ ಮಾಹಿತಿ ಮೇರೆಗೆ ಸಿಸಿಬಿ ದಾಳಿ ಮಾಡಿತ್ತು. ಈ ವೇಳೆ ಹತ್ತಾರು ಚೆಕ್​​ಗಳು ಸಿಕ್ಕಿದ್ದವು ಎನ್ನಲಾಗ್ತಿದೆ. ಈ ಬಗ್ಗೆ ಪ್ರಶ್ನಿಸಿ ಇಡಿ ಅಧಿಕಾರಿಗಳ ಎದುರು ತನ್ನ ಬಡ್ಡಿ ವ್ಯವಹಾರದ ಬಗ್ಗೆ ಸಂಜನಾ ಬಾಯ್ಬಿಟ್ಟಿದ್ದಾರೆ. ಅಲ್ಲದೆ ಬೆಂಗಳೂರಿನ ಕೆಲ ಪ್ರತಿಷ್ಠಿತ ಮಾಲ್ ಮಾಲೀಕರಿಗೆ ಕೋಟಿ ಲೆಕ್ಕದಲ್ಲಿ ಸಾಲ ನೀಡಿರುವ ವಿಚಾರವೂ ಬಯಲಾಗಿದೆ ಎನ್ನಲಾಗ್ತಿದೆ.

ಸಾಲ ವಸೂಲಿಗೆ ತಾನೇ ನಾಲ್ವರನ್ನ ಇಟ್ಟುಕೊಂಡಿದ್ದು, ಹಣ ವಾಪಸ್​ ಕೊಡದೆ ಇರುವವರನ್ನ ಬೆದರಿಸಿ ವಸೂಲಿ ಮಾಡುತ್ತಿದ್ದಳು. ಅಷ್ಟು ಮಾತ್ರವಲ್ಲದೇ ಹಣ ನೀಡದ ಶಾಪಿಂಗ್ ಮಾಲ್ ಮಾಲೀಕರು ಸರಿಯಾದ ಸಮಯಕ್ಕೆ ಬಡ್ಡಿ ಕೊಡದೇ ಹೋದಲ್ಲಿ ಕಾರುಗಳನ್ನು ಟಾರ್ಗೆಟ್ ಮಾಡ್ತಿದ್ದ ಸಂಜನಾ, ಲಕ್ಷಾಂತರ ರೂ. ಬೆಲೆಬಾಳುವ ಕಾರು​ಗಳನ್ನು ವಶಡಿಸಿಕೊಳ್ಳುತ್ತಿದ್ದರು ಎಂಬ ಮಾಹಿತಿ ತಿಳಿದುಬಂದಿದೆ.

ABOUT THE AUTHOR

...view details