ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು ರಾಗಿಣಿ, ರಾಗಿಣಿ ಆಪ್ತ ರವಿಶಂಕರ್, ಸಂಜನಾ ಸ್ನೇಹಿತ ರಾಹುಲ್, ಕಾರ್ತಿಕ್ ಹಾಗೂ ವೀರೇನ್ ಖನ್ನಾರನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸಿಸಿಬಿ ನೋಟೀಸ್ ಟೆನ್ಷನ್ ನಡುವೆಯೂ ಸುಲ್ತಾನ್, ಶೇರ್ಖಾನ್ಗೆ ಸ್ನಾನ ಮಾಡಿಸಿದ ನಟಿ - Sanjana galrani pets
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿಂತೆ ಯಾವುದೇ ಕ್ಷಣದಲ್ಲಾದರೂ ನಟಿ ಸಂಜನಾ ಗಲ್ರಾನಿಗೆ ನೋಟೀಸ್ ದೊರೆಯುವ ಸಾಧ್ಯತೆ ಇದೆ. ಆದರೆ ಸಂಜನಾ ಪಾತ್ರ ಯಾವುದರ ಟೆನ್ಷನ್ ಇಲ್ಲದೆ ತಮ್ಮ ಅಪಾರ್ಟ್ಮೆಂಟ್ನಲ್ಲಿ ತಮ್ಮ ಮುದ್ದು ಶ್ವಾನಗಳಿಗೆ ಸ್ನಾನ ಮಾಡಿಸುತ್ತಾ ಕಾಲ ಕಳೆಯುತ್ತಿದ್ದಾರೆ.
ಇನ್ನು ಈ ಪ್ರಕರಣದಲ್ಲಿ ಸಂಜನಾ ಗಲ್ರಾನಿ ಹೆಸರು ಕೂಡಾ ಕೇಳಿಬಂದಿದ್ದು ಯಾವುದೇ ಕ್ಷಣದಲ್ಲಾದರೂ ಸಂಜನಾಗೆ ಸಿಸಿಬಿಯಿಂದ ನೋಟೀಸ್ ದೊರೆಯುವ ಸಾಧ್ಯತೆ ಇದೆ. ಆದರೆ ಕೆಲವು ದಿನಗಳ ಹಿಂದೆ ಪ್ರಕರಣದ ವಿಚಾರವಾಗಿ ಸಂಜನಾ ಸ್ವಲ್ಪ ಟೆನ್ಷನ್ ಆದವರಂತೆ ಕಂಡು ಬಂದರೂ ಇಂದು ಮಾತ್ರ ಯಾವುದೇ ಟೆನ್ಷನ್ ಇಲ್ಲದೆ ತಮ್ಮ ಪ್ರೀತಿಯ ನಾಯಿಗಳಿಗೆ ಸ್ನಾನ ಮಾಡಿಸುತ್ತಿರುವುದು ಕಂಡು ಬಂತು.
ಸಂಜನಾ ಆಪ್ತ ರಾಹುಲ್ ವಶಕ್ಕೆ ಪಡೆದಿರುವ ಪೊಲೀಸರು ನಿನ್ನೆ ಸಂಜನಾ ಗಲ್ರಾನಿ ವಾಸವಿರುವ ಸಾಯಿತೇಜ ಅಪಾರ್ಟ್ಮೆಂಟ್ ಬಳಿ ಬಂದು ಸ್ಥಳ ನೋಡಿ ಫೋಟೋ ತೆಗೆದುಕೊಂಡು ಹೋಗಿದ್ದರು. ಸರ್ಚ್ ವಾರೆಂಟ್ ಪಡೆದು ಸಂಜನಾ ಮನೆ ಮೇಲೂ ಸಿಸಿಬಿ ಅಧಿಕಾರಿಗಳು ದಾಳಿ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.ಆದರೆ ಸಂಜನಾ ಮಾತ್ರ ಇದ್ಯಾವುದರ ಟೆನ್ಷನ್ ಇಲ್ಲದೆ ಸುಲ್ತಾನ್, ಶೇರ್ ಖಾನ್ಗೆ ಸ್ನಾನ ಮಾಡಿಸುತ್ತಾ ಕಾಲ ಕಳೆಯುತ್ತಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಲು ಅವರು ನಿರಾಕರಿಸಿದರು.