ಕರ್ನಾಟಕ

karnataka

ETV Bharat / sitara

ಹೊಟ್ಟೆ ಬೊಜ್ಜು ತೋರಿಸಿ ದಪ್ಪ ಆಗಿದ್ದೀ‌ನಿ ಅಂದ ಸಂಜನಾ - ದಪ್ಪ ಆಗಿದ್ದೀ‌ನಿ ಅಂದ ಸಂಜನಾ

ನಟಿ ಸಂಜನಾ ಗಲ್ರಾನಿ ಡಿಪ್ರೆಷನ್‌ನಿಂದ ದಪ್ಪಗಾಗಿದ್ದಾರಂತೆ, ಹೊಟ್ಟೆ ಬೊಜ್ಜು ಬಂದಿದೆಯಂತೆ ಹಾಗಂತ ಅವರೇ ಸ್ವತಃ ಹೇಳಿದ್ದಾರೆ. ಸದ್ಯ ಅವರು ಹೊಟ್ಟೆ ದಪ್ಪಗಾಗಿದೆ ಎಂದ ವಿಡಿಯೋ ವೈರಲ್ ಆಗಿದೆ.

sanjana
ಸಂಜನಾ

By

Published : Apr 15, 2021, 5:45 PM IST

ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ನಟಿ ಸಂಜನಾ ಗರ್ಲಾನಿ ಕಳೆದ ವರ್ಷ ಡ್ರಗ್ಸ್ ಪ್ರಕರಣದಲ್ಲಿ ಮೂರು ತಿಂಗಳು ಜೈಲುವಾಸ ಅನುಭವಿಸಿ, ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ. ಈಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ, ತಮ್ಮ ವೈಯಕ್ತಿಕ ಫೋಟೋಗಳನ್ನ ಹಂಚಿಕೊಳ್ಳುವ ಮೂಲಕ ಸಂಜನಾ ಆ್ಯಕ್ಟೀವ್ ಆಗಿದ್ದಾರೆ.

ಹೊಟ್ಟೆ ಬೊಜ್ಜು ತೋರಿಸಿ ದಪ್ಪ ಆಗಿದ್ದೀ‌ನಿ ಅಂದ ಸಂಜನಾ

ಇದೇ ಜೋಶ್​ನಲ್ಲಿ ಇರುವ ಸಂಜನಾ ಗರ್ಲಾನಿ, ಹೊಟ್ಟೆ ಬೊಜ್ಜು ತೋರಿಸುವ ಮೂಲಕ ನಾನು ದಪ್ಪ ಆಗಿದ್ದೀನಿ ಅಂತಾ ಹೇಳಿಕೊಂಡಿದ್ದಾರೆ. ಎಲ್ಲರೂ ಸಣ್ಣಗಾದ್ರೆ ನಾನು ಸಣ್ಣಗಾದೆ ಅಂತ ಹೇಳ್ತಾರೆ. ಆದರೆ, ನಾನು ದಪ್ಪ ಆಗಿದ್ದೀನಿ, ದಪ್ಪ ಆದೆ ಅಂತ ನಾನೇ ಮೊದಲು ಹೇಳ್ತೀನಿ ಎಂದು ಹೇಳುತ್ತ ಅವರ ಹೊಟ್ಟೆಯ ಬೊಜ್ಜು ತೋರಿಸಿದ್ದಾರೆ.

ಇನ್ನು ಕೆಲವರು ಸಂಜನಾ ದಪ್ಪಗಾಗಿರೋದನ್ನ ಟ್ರೋಲ್ ಮಾಡಿದ್ದಾರೆ. ಡಿಪ್ರೆಶನ್‌ನಿಂದ ನಾನು ದಪ್ಪ ಆಗಿದ್ದೀನಿ, ಬಹು ಬೇಗನೆ ಸಣ್ಣ ಆಗುತ್ತೇನೆ ಅಂತಾ ಸಂಜನಾ ಹೇಳಿದ್ದಾರೆ.

ದಪ್ಪ ಆಗಿರುವ ಸಂಜನಾ ಗರ್ಲಾನಿ, ಮೊದಲು ಫಿಟ್ನೆಸ್ ಬಗ್ಗೆ ಹೆಚ್ಚು ಕೇರ್​ ಕೊಡುವ ನಟಿಯಾಗಿ ಮಿಂಚಿದ್ದರು. ಅಕ್ಷರ ಎಂಬ ಯೋಗ ಕೇಂದ್ರ ಸಂಸ್ಥೆಯನ್ನ ಹುಟ್ಟಿ ಹಾಕಿ ನೂರಾರು ಜನಕ್ಕೆ ಯೋಗ ತರಬೇತಿ ಕೊಡುತ್ತಿದ್ದರು. ಯಾವ ಮಟ್ಟಿಗೆ ಅಂದರೆ ಸಂಜನಾ ಗರ್ಲಾನಿ ನಿತ್ಯ ಒಂದು ಗಂಟೆಯಿಂದ, ಎರಡು ಗಂಟೆ ಯೋಗ ಮಾಡುತ್ತಿದ್ದರು. ಅಷ್ಟೇ ಅಲ್ಲ ಕಷ್ಟಕರ ಯೋಗಗಳನ್ನ ಮಾಡುತ್ತಿದ್ದ ಸಂಜನಾ ಜೈಲಿಗೆ ಹೋಗಿ ಬಂದ ಮೇಲೆ ದಪ್ಪ ಆಗಿದ್ದಾರೆ.

ಬೊಜ್ಜು ಇಲ್ಲದ ಮೈ ಮಾಟ ಹೊಂದಿದ್ದ ಸಂಜನಾಗೆ ಈಗ ಹೊಟ್ಟೆ ಬೊಜ್ಜು ಬಂದಿದೆ. ಸದ್ಯ ಸಂಜನಾ ಗರ್ಲಾನಿ ಹೊಟ್ಟೆ ಬೊಜ್ಜು ತೋರಿಸಿರುವ ವಿಡಿಯೋ ಸಖತ್ ವೈರಲ್ ಆಗಿದೆ.

ABOUT THE AUTHOR

...view details