ಕೇಂದ್ರ ಸರ್ಕಾರ ಜಾರಿಗೆ ತರಲು ನಿರ್ಧರಿಸಿರುವ ಕೇಂದ್ರ ಮಸೂದೆಗಳಿಗೆ ಕೆಲವೊಂದು ರಾಜ್ಯಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಈಗಾಗಲೇ ಭಾರತ್ ಬಂದ್ ಮಾಡಲು ನಿರ್ಧರಿಸಲಾಗಿದೆ. ಮಸೂದೆಗಳ ವಿರುದ್ಧ ಪಂಜಾಬ್, ಹರಿಯಾಣ, ಕರ್ನಾಟಕದಲ್ಲೂ ವಿರೋಧ ವ್ಯಕ್ತವಾಗಿದೆ.
ರೈತರಿಗೆ ಅಗೌರವ ತೋರುವುದು ಸರಿಯಲ್ಲ: ನಟ ಶ್ರೀಮುರಳಿ ಟ್ವೀಟ್ - Parliament Monsoon Session
ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಮೂರು ಕೃಷಿ ಮಸೂದೆಗಳಿಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದು, ನಟ ಶ್ರೀಮುರಳಿ ಕೂಡ ಇದೇ ವಿಚಾರವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದೀಗ ಸ್ಯಾಂಡಲ್ವುಡ್ ನಟ ಶ್ರೀಮುರಳಿ ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಹಾಗೇ ಕಾಣಿಸುತ್ತಿದೆ. ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಒಂದಿಲ್ಲೊಂದು ರೂಪದಲ್ಲಿ ನಾವೆಲ್ಲ ಕೃಷಿ ಹಿನ್ನೆಲೆಯಿಂದಲೇ ಬಂದವರು. ರಾಜಕಾರಣಿಯೋ, ಕಲಾವಿದರೋ ಅಥವಾ ಉದ್ಯಮಿಯೋ, ಅದು ಯಾರೇ ಆದರೂ ಸರಿ, ರೈತರು ತಮ್ಮ ಜಮೀನುಗಳಲ್ಲಿ ಕಷ್ಟಪಟ್ಟು ಬೆವರು ಹರಿಸಿ ಬೆಳೆ ಬೆಳೆದರೆ ಮಾತ್ರ ನಾವೆಲ್ಲ ಅಚ್ಚುಕಟ್ಟಾಗಿ ಕುಳಿತು ಭೋಜನ ಸವಿಯುವುದು. ಹಾಗಾಗಿ ಯಾರೇ ಆದರೂ ಸರಿ, ರೈತರ ಬಗ್ಗೆ ಅಗೌರವ ತೋರುವುದು ಸರಿಯಲ್ಲ ಎಂದಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸಲು ನಿರ್ಧರಿಸಿರುವ ಕೃಷಿ ಮಸೂದೆಗಳ ವಿರುದ್ಧ ಬರುವ 28 ರಂದು ದೇಶಾದ್ಯಂತ ಪ್ರತಿಭಟನೆ ನಡೆಯಲಿದೆ. ಇದೀಗ ನಟ ಶ್ರೀಮುರುಳಿ ಟ್ವೀಟ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.