ಸಿನಿಮಾ ನಟ-ನಟಿಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಅಪರೂಪ. ಆಡಿಯೋ ಬಿಡುಗಡೆ ಸಮಾರಂಭ, ಚಿತ್ರೀಕರಣ, ಸಿನಿಮಾ ಮುಹೂರ್ತ, ಪ್ರೆಸ್ಮೀಟ್ ಅಥವಾ ಇನ್ನಿತರ ಕಾರ್ಯಕ್ರಮಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವುದನ್ನು ಹೊರತುಪಡಿಸಿ ಸಾರ್ವಜನಿಕ ಸ್ಥಳಗಳಲ್ಲಿ ಅಡ್ಡಾಡುವುದು ಅಪರೂಪ. ಒಂದು ವೇಳೆ ಹೊರಗೆ ಹೋಗಬೇಕಾದಂತ ಸಂದರ್ಭ ಬಂದಲ್ಲಿ ಮುಖಕ್ಕೆ ಮಾಸ್ಕ್ ಕಟ್ಟಿ, ಸನ್ ಗ್ಲಾಸ್ ಧರಿಸಿ ಹೊರಬರುತ್ತಾರೆ.
ಮುಖಕ್ಕೆ ದುಪ್ಪಟ್ಟಾ ಸುತ್ತಿ ಕಮರ್ಷಿಯಲ್ ಸ್ಟ್ರೀಟ್ನಲ್ಲಿ ಶಾಪಿಂಗ್ ಮಾಡಿದ ಸ್ಯಾಂಡಲ್ವುಡ್ ಖ್ಯಾತ ನಟಿ...! - Rachita ram in Commercial Street
'ವೀರಂ' ಚಿತ್ರದಲ್ಲಿ ಬ್ಯುಸಿ ಇರುವ ನಟಿ ರಚಿತಾ ರಾಮ್, ಚಿತ್ರಕ್ಕಾಗಿ ತಾವೇ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಸುತ್ತಾಡಿ ಶಾಪಿಂಗ್ ಮಾಡಿ ಬಂದಿದ್ದಾರೆ. ಚಿತ್ರತಂಡದೊಂದಿಗೆ ಮುಖಕ್ಕೆ ದುಪ್ಪಟ್ಟಾ ಸುತ್ತಿಕೊಂಡಿದ್ದ ರಚಿತಾ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: 'ತಲೈವಿ' ಚಿತ್ರದಲ್ಲಿ ಅರವಿಂದ್ ಸ್ವಾಮಿ ಎಂಜಿಆರ್ ಲುಕ್ ವೈರಲ್
ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡಾ ಇದೀಗ ಮುಖಕ್ಕೆ ದುಪ್ಪಟ್ಟ ಕಟ್ಟಿ, ಸನ್ ಗ್ಲಾಸ್ ಧರಿಸಿ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಸುತ್ತಾಡಿದ್ದಾರೆ. ರಚಿತಾ ಈ ರೀತಿ ಹೊರಗೆ ಬರುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಅವರು ಅನೇಕ ಬಾರಿ ತಮ್ಮ ಇಷ್ಟದ ಸ್ಥಳಗಳಿಗೆ ಹೋಗಿ, ತಮಗಿಷ್ಟವಾದ ತಿಂಡಿಗಳನ್ನು ತಿಂದು ಬಂದಿದ್ದಾರೆ. ರಚಿತಾ ರಾಮ್ ಸದ್ಯಕ್ಕೆ 'ವೀರಂ' ಚಿತ್ರದಲ್ಲಿ ನಟಿಸುತ್ತಿದ್ದು ಈ ಚಿತ್ರವನ್ನು ಖದರ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಸ್ವತ: ರಚಿತಾ ರಾಮ್ ಅವರೇ ಕಮರ್ಷಿಯಲ್ ರೋಡ್ಗೆ ತೆರಳಿ ಚಿತ್ರಕ್ಕಾಗಿ ಶಾಪಿಂಗ್ ಮಾಡಿ ಬಂದಿದ್ದಾರೆ. ಬಿಳಿ ಬಣ್ಣದ ಕುರ್ತಾದೊಂದಿಗೆ ಕೆಂಪು ಬಣ್ಣದ ದುಪ್ಪಟ್ಟಾದಿಂದ ಮುಖ ಸುತ್ತಿಕೊಂಡಿರುವ ರಚಿತಾ ಸನ್ ಗ್ಲಾಸ್ ಧರಿಸಿ ತಮಗಿಷ್ಟವಾದ ಕಾಸ್ಟ್ಯೂಮ್ಗಳನ್ನು ಆಯ್ಕೆ ಮಾಡಿದ್ದಾರೆ. "ಕಮರ್ಷಿಯಲ್ ಸ್ಟ್ರೀಟ್ಗೆ ಬಂದು ಕಾಸ್ಟ್ಯೂಮ್ ನಾವೇ ಶಾಪಿಂಗ್ ಮಾಡುತ್ತಿದ್ದೇವೆ. ಇದೊಂದು ಹೊಸ ಅನುಭವ, ನನ್ನನ್ನು ಯಾರೂ ಪತ್ತೆ ಹಚ್ಚುತ್ತಿಲ್ಲ. ತುಂಬಾ ಮಜಾ ಇದೆ, ಇಡೀ ಚಿತ್ರತಂಡವೇ ಶಾಪಿಂಗ್ಗಾಗಿ ಬಂದಿದ್ದೇವೆ. ಎಲ್ಲರೂ ಮಾಸ್ಕ್ ಹಾಕಿರುವುದರಿಂದ ಕಂಡುಹಿಡಿಯಲು ಸಾಧ್ಯ ಇಲ್ಲ" ಎಂದು ಹೇಳಿರುವ ರಚಿತಾ ರಾಮ್, ನಿರ್ದೇಶಕರನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.