ಹೈದ್ರಾಬಾದ್(ತೆಲಂಗಾಣ) :ಮದುವೆ ವಿಚ್ಛೇದನದಿಂದ ಸಾಕಷ್ಟು ಸುದ್ದಿಯಾಗಿದ್ದ ಖ್ಯಾತ ನಟಿ ಸಮಂತಾ ರುತ್ ಪ್ರಭು ಈಗ ತಮ್ಮ ಮನೆಯಿಂದ ಹೊರ ಬಂದಿದ್ದಾರೆ. ಮನೆ ಬಿಟ್ಟು ಅವರು ಸಿನಿಮಾ ಸೆಟ್ನಲ್ಲೇ ವಾಸ ಮಾಡಲು ಮುಂದಾಗಿದ್ದಾರೆ.
ಸಮಂತಾ ಸದ್ಯ ತಮ್ಮ ಮುಂದಿನ ಬಹುಭಾಷಾ ಚಿತ್ರ 'ಯಶೋದಾ' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಅವರು ಮನೆಗೆ ಹೋಗದೇ ಸೆಟ್ನಲ್ಲಿ ತಾತ್ಕಾಲಿಕವಾಗಿ ಉಳಿದುಕೊಳ್ಳಲು ನಿರ್ಧರಿಸಿದ್ದಾರಂತೆ.
ಇದಕ್ಕೆ ಪ್ರಮುಖ ಕಾರಣ ಸಿನಿಮಾದ ಸೆಟ್. ಯಶೋಧ ಚಿತ್ರೀಕರಣಕ್ಕಾಗಿ ಹಾಕಿರುವ ಸೆಟ್ ನೋಡಿಯೋ ಮಾರು ಹೋಗಿದ್ದು, ತಾವು ಸೆಟ್ನಲ್ಲೇ ಇರುವುದಾಗಿ ಹೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಏನಿದೆ ಆ ಸೆಟ್ನಲ್ಲಿ?: ಶ್ರೀದೇವಿ ಮೂವೀಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ 'ಯಶೋದಾ' ಚಿತ್ರವನ್ನು ಶಿವಲೆಂಕ ಕೃಷ್ಣಪ್ರಸಾದ್ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ 3 ಕೋಟಿ ರೂ. ವೆಚ್ಚದ ಬೃಹತ್ ಸೆಟ್ ನಿರ್ಮಿಸಲಾಗಿದೆಯಂತೆ. ಅದರಲ್ಲೂ, ಐಷಾರಾಮಿಯಾದ ಸೆವೆನ್ ಸ್ಟಾರ್ ಹೋಟೆಲ್ ಮಾದರಿಯಲ್ಲೇ ಅದ್ದೂರಿ ಸೆಟ್ ಕೂಡ ಇದೆ. ಇದು ಚಿತ್ರದ ಪ್ರಮುಖ ಆಕರ್ಷಣೆಗಳಲ್ಲೇ ಒಂದಾಗಿದೆ ಎಂದು ಮೂಲಗಳ ಹೇಳುತ್ತಿವೆ.