ಕರ್ನಾಟಕ

karnataka

ETV Bharat / sitara

ಕೇವಲ 45 ದಿನಗಳಲ್ಲೇ ಮುಗಿಯಲಿದೆಯಂತೆ ‘ಸಲಾರ್’ ಚಿತ್ರೀಕರಣ - ನಿರ್ದೇಶಕ ಪ್ರಶಾಂತ್ ನೀಲ್

ಇದೀಗ ‘ಸಲಾರ್’ ಚಿತ್ರವನ್ನು ಕೇವಲ 45 ದಿನಗಳಲ್ಲಿ ಮುಗಿಸುತ್ತಾರಂತೆ ಪ್ರಶಾಂತ್ ನೀಲ್. ಬಹಳ ಬೇಗ ಚಿತ್ರವನ್ನು ಮುಗಿಸುವುದಕ್ಕೆ ಪ್ರಭಾಸ್ ಸೂಚಿಸಿದ್ದು, ಅದರಂತೆ ಕೇವಲ 45 ದಿನಗಳಲ್ಲಿ ಸಲಾರ್ ಚಿತ್ರದ ಚಿತ್ರೀಕರಣ ಮುಗಿಯಲಿದೆ ಎಂದು ಹೇಳಲಾಗುತ್ತಿದೆ.

salar-film-shooting
ಕೇವಲ 45 ದಿನಗಳಲ್ಲಿ ಮುಗಿಯಲಿದೆಯಂತೆ ‘ಸಲಾರ್’ ಚಿತ್ರೀಕರಣ

By

Published : Jan 16, 2021, 11:57 AM IST

‘ಸಲಾರ್’ ಚಿತ್ರದ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಆಗಲಿ, ಪ್ರಭಾಸ್ ಆಗಲಿ ಎಲ್ಲೂ ಮಾತನಾಡಿಲ್ಲ. ಚಿತ್ರದ ಬಗ್ಗೆ ಯಾವೊಂದು ವಿಷಯವನ್ನೂ ಸರಿಯಾಗಿ ಬಿಟ್ಟುಕೊಟ್ಟಿಲ್ಲ. ಆದರೆ, ಚಿತ್ರದ ಬಗ್ಗೆ ದಿನಾ ಒಂದಲ್ಲ ಒಂದು ಮಾತು ಕೇಳಿ ಬರುತ್ತಿವೆ. ಇದೀಗ ‘ಸಲಾರ್’ ಚಿತ್ರವನ್ನು ಕೇವಲ 45 ದಿನಗಳಲ್ಲಿ ಮುಗಿಸುತ್ತಾರಂತೆ ಪ್ರಶಾಂತ್ ನೀಲ್.

ಸಾಮಾನ್ಯವಾಗಿ, ಪ್ರಶಾಂತ್ ನೀಲ್ ಚಿತ್ರಗಳೆಂದರೆ ವರ್ಷ, ಎರಡು ವರ್ಷ ಎಳೆಯುತ್ತವೆ. `ಉಗ್ರಂ, `ಕೆಜಿಎಫ್ 1 ಮತ್ತು `ಕೆಜಿಎಫ್ 2 ಚಿತ್ರಗಳೆಲ್ಲಾ ಒಂದಲ್ಲ ಒಂದು ಕಾರಣಕ್ಕೆ, ನಿಧಾನಗತಿಯಲ್ಲಿ ಚಿತ್ರೀಕರಣವಾಗಿವೆ. ಹಾಗಿರುವಾಗ, ‘ಸಲಾರ್’ ಚಿತ್ರವನ್ನು ಕೇವಲ 45 ದಿನಗಳಲ್ಲಿ ಚಿತ್ರೀಕರಣ ಮುಗಿಸುತ್ತಾರಂತೆ. ಪ್ರಭಾಸ್ ಹಲವು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಈಗಾಗಲೇ ರಾಧೇ ಶ್ಯಾಮ್ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಇದಾದ ಮೇಲೆ ಇದೇ ವರ್ಷ ಅವರು `ಆದಿಪುರುಷ್ ಮತ್ತು ದೀಪಿಕಾ, ಇನ್ನೊಂದು ತೆಲುಗು ಚಿತ್ರಗಳಲ್ಲಿ ನಟಿಸಬೇಕಿದೆ. ಈ ಎಲ್ಲಾ ಚಿತ್ರಗಳು ಇದೇ ವರ್ಷ ಮುಗಿಯಬೇಕಿರುವುದರಿಂದ, ಸಲಾರ್​ ಚಿತ್ರನವನ್ನು 45 ದಿನಗಳಲ್ಲಿ ಮುಗಿಸಲು ಚಿಂತಿಸಲಾಗಿದೆಯಂತೆ.

ಬಹಳ ಬೇಗ ಚಿತ್ರವನ್ನು ಮುಗಿಸುವುದಕ್ಕೆ ಪ್ರಭಾಸ್ ಸೂಚಿಸಿದ್ದು, ಅದರಂತೆ ಕೇವಲ 45 ದಿನಗಳಲ್ಲಿ `ಸಲಾರ್ ಚಿತ್ರದ ಚಿತ್ರೀಕರಣ ಮುಗಿಯಲಿದೆ ಎಂದು ಹೇಳಲಾಗುತ್ತಿದೆ. ಇಲ್ಲಿ ಇಡೀ ಚಿತ್ರವೇ 45 ದಿನಗಳಲ್ಲಿ ಮುಗಿಯುತ್ತದಾ? ಅಥವಾ ಪ್ರಭಾಸ್ ಭಾಗದ ಚಿತ್ರೀಕರಣ ಮಾತ್ರ 45 ದಿನಗಳಲ್ಲಿ ಮುಗಿಯುತ್ತದಾ? ಎಂಬ ಪ್ರಶ್ನೆಗಳು ಸಹ ಉದ್ಭವವಾಗಿವೆ.

ಅಂದಹಾಗೆ,`ಸಲಾರ್ ಚಿತ್ರದ ಚಿತ್ರೀಕರಣ ಫೆಬ್ರವರಿ ಮೊದಲ ವಾರದಿಂದ ಪ್ರಾರಂಭವಾಗಲಿದೆಯಂತೆ.`ರಾಧೇ ಶ್ಯಾಮ್ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಇದೀಗ ನಡೆಯುತ್ತಿದ್ದು, ಅದು ಮುಗಿಯುತ್ತಿದ್ದಂತೆಯೇ, ಪ್ರಭಾಸ್`ಸಲಾರ್ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಆಕಾಶದೀಪ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಂ ಬ್ಯಾಕ್ ಮಾಡಿದ ಮನೆದೇವರು ಖ್ಯಾತಿಯ ಜಯ್ ಡಿಸೋಜಾ

ABOUT THE AUTHOR

...view details