ಸಲಗ ಚಿತ್ರವನ್ನು ಪ್ರೋತ್ಸಾಹಿಸಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರೇಕ್ಷಕರನ್ನು ಭೇಟಿ ಮಾಡಿ ಧನ್ಯವಾದ ಸಮರ್ಪಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ.
ಈ ಹಿಂದೆ ಕೆಲವು ಚಿತ್ರಗಳು ಗೆದ್ದ ಖುಷಿಯಲ್ಲಿ ಚಿತ್ರ ತಂಡದವರು ಬೇರೆ-ಬೇರೆ ಊರುಗಳಿಗೆ ಸಂಚರಿಸಿ ಅಲ್ಲಿನ ಪ್ರೇಕ್ಷಕರನ್ನು ಮಾತನಾಡಿಸಿ, ಧನ್ಯವಾದ ಸಲ್ಲಿಸಿದ್ದರು. ಇದೀಗ ದುನಿಯಾ ವಿಜಯ್ ಮತ್ತು ಚಿತ್ರ ತಂಡದವರು ಕೂಡಾ ಚಿತ್ರದ ಯಶಸ್ಸಿನ ಕಾರಣಕ್ಕೆ ಪ್ರೇಕ್ಷಕರಿಗೆ ಧನ್ಯವಾದ ಹೇಳಲಿದ್ದಾರೆ.
ಈ ಸಂಭ್ರಮದಲ್ಲಿ ವಿಜಯ್, ಸಂಜನಾ ಆನಂದ್, ಧನಂಜಯ್, ನಿರ್ಮಾಪಕ ಕೆ.ಪಿ. ಶ್ರೀಕಾಂತ್, ಸಂಗೀತ ನಿರ್ದೇಶಕ ಚರಣ್ರಾಜ್ ಮುಂತಾದವರು ಭಾಗವಹಿಸಲಿದ್ದಾರೆ.
ಅಕ್ಟೋಬರ್ 31ರಂದು ಸಲಗ ಸಂಭ್ರಮ ಶುರುವಾಗಲಿದೆ. ಮೈಸೂರಿನ ಸಂಗಮ್ ಚಿತ್ರಮಂದಿರದಲ್ಲಿ ಸಂಜೆ 6.30ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ಅಲ್ಲಿಂದ ಶುರುವಾಗುವ ಕಾರ್ಯಕ್ರಮವು ನ.1ರಂದು ಮಂಡ್ಯ, ಮದ್ದೂರು ಮತ್ತು ಚೆನ್ನಪಟ್ಟಣದಲ್ಲಿ ಮುಂದುವರೆಯಲಿದೆ. ನಂತರದ ದಿನಗಳಲ್ಲಿ ಕನಕಪುರ, ಮಳವಳ್ಳಿ, ತುಮಕೂರು, ಚಿತ್ರದುರ್ಗ ಕೊನೆಗೆ ಹುಬ್ಬಳ್ಳಿಯಲ್ಲಿ ಮುಗಿಯಲಿದೆ.
ಇದನ್ನೂ ಓದಿ:ಅಭಿಮಾನಿಗಳ ಜೊತೆ 'ಸಲಗ' ವೀಕ್ಷಿಸಿದ ದುನಿಯಾ ವಿಜಯ್