ಕರ್ನಾಟಕ

karnataka

ETV Bharat / sitara

ಮುಂದಿನ ವರ್ಷ ಅಂಬಿ ಸ್ಮಾರಕ ನಿರ್ಮಾಣಕ್ಕೆ ಚಾಲನೆ: ರಾಕ್​​​​​​​​​​​​​​​​​​​​​​​​​​​​​ಲೈನ್ ವೆಂಕಟೇಶ್

ಅಂಬರೀಶ್ ಸ್ಮಾರಕದ ವಿಷಯವಾಗಿ ಚಿತ್ರರಂಗದಿಂದ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದಕ್ಕೆ ಮುಖ್ಯಮಂತ್ರಿಗಳು ಕೂಡಾ ಸ್ಪಂದಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅಂಬರೀಶ್ ಹೆಸರಿನಲ್ಲಿ ಟ್ರಸ್ಟ್​​​​​​​​​​ ಸ್ಥಾಪಿಸಿ, ಆ ಟ್ರಸ್ಟ್ ಮುಖಾಂತರ ಸ್ಮಾರಕದ ಕೆಲಸಗಳನ್ನು ಆರಂಭಿಸಲಿದ್ದೇವೆ ಎಂದು ರಾಕ್​​ಲೈನ್ ವೆಂಕಟೇಶ್ ಹೇಳಿದ್ದಾರೆ.

ಅಂಬಿ ಮೊದಲ ವರ್ಷದ ಪುಣ್ಯಸ್ಮರಣೆ

By

Published : Nov 14, 2019, 11:48 PM IST

ರೆಬಲ್ ಸ್ಟಾರ್ ಅಂಬರೀಶ್ ಅವರ ಮೊದಲ ವರ್ಷದ ಪುಣ್ಯತಿಥಿಯನ್ನು ಕುಟುಂಬ ವರ್ಗಇಂದುಬೆಂಗಳೂರಿನ ಅರಮನೆ ಆವರಣದ ಗಾಯತ್ರಿ ವಿಹಾರ್​​ನಲ್ಲಿ ಆಚರಿಸಿದೆ. ನವೆಂಬರ್​ 24 ರಂದು ಅಂಬರೀಶ್ ನಿಧನರಾದ ದಿನವಾದರೂ ಪಂಚಾಂಗದ ಪ್ರಕಾರ ಇಂದು ಒಳ್ಳೆಯ ದಿನವಾದ್ದರಿಂದ ಈ ದಿನವೇ ಪುಣ್ಯತಿಥಿ ಆಚರಿಸಲಾಗಿದೆ.

ಅಂಬರೀಶ್ ಮೊದಲ ವರ್ಷದ ಪುಣ್ಯತಿಥಿ ಕಾರ್ಯಕ್ರಮ

ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಲಾಗಿದ್ದ ಅಂಬರೀಶ್ ಭಾವಚಿತ್ರಕ್ಕೆ ಪತ್ನಿ ಸುಮಲತಾ ಅಂಬರೀಶ್, ಮಗ ಅಭಿಷೇಕ್ ಅಂಬರೀಶ್, ನಿರ್ಮಾಪಕ ರಾಕ್​​​​​​​​​​​​​​​​​​​​ಲೈನ್ ವೆಂಕಟೇಶ್, ನಟ‌ ದೊಡ್ಡಣ್ಣ ನಮನ ಸಲ್ಲಿಸಿದ್ರು. ಇಂದು ಬಿಜೆಪಿಗೆ ಸೇರ್ಪಡೆಯಾದ ಸುಧಾಕರ್, ಕಾಂಗ್ರೆಸ್ ಮುಖಂಡ ಕೆ.ಜೆ. ಜಾರ್ಜ್, ನಿರ್ದೇಶಕ ನಾಗಣ್ಣ, ಭಾರತಿ ವಿಷ್ಣುವರ್ಧನ್, ವಿಷ್ಣುವರ್ಧನ್ ಅಳಿಯ ಅನಿರುದ್ಧ್​​​​ ಸೇರಿದಂತೆ ಅಂಬರೀಶ್ ಸಂಬಂಧಿಕರು, ಸ್ನೇಹಿತರು ನಮನ ಸಲ್ಲಿಸಿದರು.

ನಂತರ ಮಾತನಾಡಿದ ರಾಕ್​ಲೈನ್ ವೆಂಕಟೇಶ್​, ಅಂಬರೀಶ್ ಸ್ಮಾರಕದ ವಿಷಯವಾಗಿ ಚಿತ್ರರಂಗದಿಂದ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದಕ್ಕೆ ಮುಖ್ಯಮಂತ್ರಿಗಳು ಕೂಡಾ ಸ್ಪಂದಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅಂಬರೀಶ್ ಹೆಸರಿನಲ್ಲಿ ಟ್ರಸ್ಟ್​​​​​​​​​​ ಸ್ಥಾಪಿಸಿ, ಆ ಟ್ರಸ್ಟ್ ಮುಖಾಂತರ ಸ್ಮಾರಕದ ಕೆಲಸಗಳನ್ನು ಆರಂಭಿಸಲಿದ್ದೇವೆ. ಈ ಟ್ರಸ್ಟ್​​​​​​​​​​​​​​​ಗೆ ಅಧ್ಯಕ್ಷರಾಗಿ ಮುಖ್ಯಮಂತ್ರಿ, ಅಂಬರೀಶ್ ಕುಟುಂಬಸ್ಥರು ಹಾಗೂ ಕಲಾವಿದರ ಸಂಘದವರು​​​​​​​​​ ಇರಲಿದ್ದಾರೆ. ಈ ಟ್ರಸ್ಟ್ ಸ್ಥಾಪನೆಯಾದ ಮೇಲೆ ಮುಂದಿನ ವರ್ಷ ಅಂಬರೀಶ್ ಸ್ಮಾರಕಕ್ಕೆ ಚಾಲನೆ ದೊರೆಯಲಿದೆ. ಇನ್ನು ನವೆಂಬರ್ 24ರಂದು ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿರುವ ಸ್ಕ್ರೀನಿಂಗ್ ಥಿಯೇಟರ್​​​​​​​ಗೆ 'ಡಾ. ಅಂಬರೀಶ್ ಆಡಿಟೋರಿಯಂ' ಎಂದು ಹೆಸರು ಇಡಲಾಗುವುದು ಎಂದು ರಾಕ್​​​​​​​​​​​​​​ಲೈನ್ ವೆಂಕಟೇಶ್ ತಿಳಿಸಿದರು.

ABOUT THE AUTHOR

...view details