ಇಂದಿಗೆ ರಿಷಭ್ ಶೆಟ್ಟಿ ನಿರ್ದೇಶನದ ಮೊದಲ ಚಿತ್ರ 'ರಿಕ್ಕಿ' ತೆರೆ ಕಂಡು ಬರೋಬ್ಬರಿ 5 ವರ್ಷಗಳು ಪೂರೈಸಿವೆ. ಈ ಸಂತಸವನ್ನು ರಿಷಭ್ ಮತ್ತು ರಕ್ಷಿತ್ ಶೆಟ್ಟಿ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಟ್ವಿಟರ್ನಲ್ಲಿ ಸುದೀರ್ಘವಾಗಿ ಬೆರೆದಿರುವ ರಿಷಭ್, "ಬಹು ವರ್ಷದ ಕನಸು, ಚೊಚ್ಚಲ ಕೂಸು, ರಿಕ್ಕಿ ಬಿಡುಗಡೆಯಾಗಿ ಇಂದಿಗೆ 5 ವರ್ಷ. ಮೊದಲ ಸಿನಿಮಾ ಕಲಿಸಿದ ಪಾಠ, ಕೊಟ್ಟ ಅನುಭವ ಅಪಾರ. ರಕ್ಷಿತ್, ಹರಿಪ್ರಿಯ, ಪ್ರಮೋದ್, ಅಚ್ಯುತಣ್ಣರಂತಹ ಅದ್ಭುತ ನಟರ ಜೊತೆ ಕೆಲಸ ಮಾಡಿದ್ದು ಅದೃಷ್ಟ. ಅವರೆಲ್ಲ ಇಂದಿಗೂ ಜೀವದ ಗೆಳೆಯರು. ನಿರ್ಮಾಪಕರಾದ ಎಸ್.ವಿ.ಬಾಬು ಅವರಿಗೆ ಸದಾ ಋಣಿ. ಎಲ್ಲಕ್ಕಿಂತ ಮಿಗಿಲಾಗಿ ಚಿತ್ರವನ್ನು ಮೆಚ್ಚಿ, ಬೆನ್ನು ತಟ್ಟಿದ ಪ್ರೇಕ್ಷಕ ಪ್ರಭುಗಳಿಗೆ ಧನ್ಯವಾದಗಳು" ಎಂದಿದ್ದಾರೆ.