ಕರ್ನಾಟಕ

karnataka

ETV Bharat / sitara

ಕೆಜಿಎಫ್​​ ತಂಡಕ್ಕೆ ಬೈ​ ಹೇಳಿ ಮುಂಬೈಗೆ ತೆರಳಿದ ರವೀನಾ​ - ರವೀನಾ ಟಂಡನ್​

ರವೀನಾ ಟಂಡನ್ ಚಿತ್ರ ತಂಡಕ್ಕೆ ಬೈ ಹೇಳಿ ಮುಂಬೈಗೆ ಹಾರಿದ್ದಾರೆ. ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿರುವ ಬಾಲಿವುಡ್​ ಬೆಡಗಿ ಮುಂಬೈನತ್ತ ತೆರಳಿದ್ದಾರೆ.

ravena tandan back to mumbai from KGF2
ಕೆಜಿಎಫ್​​ ತಂಡಕ್ಕೆ ಬಾಯ್​ ಹೇಳಿದ್ರು ರವೀನಾ ಟಂಡನ್​!

By

Published : Feb 28, 2020, 5:16 PM IST

ಭಾರತೀಯ ಚಿತ್ರ ರಂಗದ ಬಹು ನಿರೀಕ್ಷಿತ, ಕುತೂಹಲಭರಿತ ಸಿನಿಮಾ ಕೆಜಿಎಫ್​. ಸದ್ಯ ಕೆಜಿಎಫ್​ ಚಾಪ್ಟರ್​ 2 ಶೂಟಿಂಗ್​ ಭರದಿಂದ ಸಾಗುತ್ತಿದೆ. ಚಿತ್ರದಲ್ಲಿ ದೊಡ್ಡ ದೊಡ್ಡ ನಟ-ನಟಿಯರು ಕಾಣಿಸಿಕೊಂಡಿದ್ದು, ಬಾಲಿವುಡ್​ನ ಸಂಜಯ್​ ದತ್​​, ರವೀನಾ ಟಂಡನ್ ಕೂಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಇದೀಗ ಮತ್ತೊಂದು ಮಾಹಿತಿ ಹೊರ ಬಂದಿದ್ದು, ರವೀನಾ ಟಂಡನ್ ಚಿತ್ರ ತಂಡಕ್ಕೆ ಬೈ​ ಹೇಳಿ ಮುಂಬೈಗೆ ಹಾರಿದ್ದಾರೆ. ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿರುವ ಬಾಲಿವುಡ್​ ಬೆಡಗಿ ಮುಂಬೈನತ್ತ ತೆರಳಿದ್ದಾರೆ.

ರವೀನಾ ಟಂಡನ್​ ಕೆಜಿಎಫ್​ ಚಿತ್ರ ತಂಡದ ಜೊತೆ ಸಖತ್​ ಎಂಜಾಯ್​ ಮಾಡಿದ್ದಾರೆ. ಈ ಬಗ್ಗೆ ಅವರೇ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಜಿಫ್​​ ಶೇರ್​​ ಮಾಡಿ ಖುಷಿ ಹಂಚಿಕೊಂಡಿದ್ದಾರೆ.

ಇನ್ನು ರವೀನಾ ಟಂಡನ್ ಕೆಜಿಎಫ್​ ಚಾಪ್ಟರ್​ 2 ಚಿತ್ರದಲ್ಲಿ ಪ್ರಧಾನಮಂತ್ರಿ ರಮಿಕಾ ಸೇನ್ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಹಿಂದೆ ಇವರನ್ನು ಚಿತ್ರ ತಂಡ ತುಂಬು ಹೃದಯದಿಂದ ಸ್ವಾಗತಿಸಿತ್ತು. ನಿರ್ದೇಶಕ ಪ್ರಶಾಂತ್​ ನೀಲ್​ ಕೂಡ ರವೀನಾ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ರಾಕಿಯನ್ನು ಸೆರೆಹಿಡಿಯುವವರು ಬಂದಾಯ್ತು ಎಂದು ಬರೆದುಕೊಂಡಿದ್ದಾರೆ.

ಯಶ್​ ಕೂಡ ರವೀನಾ ಮತ್ತು ತಾವು ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ನಮ್ಮ ತವರಿಗೆ ಸ್ವಾಗತ ಎಂದು ಬರೆದುಕೊಂಡಿದ್ದರು.

ABOUT THE AUTHOR

...view details