ಬಾಲಿವುಡ್ನಲ್ಲಿ ಕ್ಯೂಟ್ ಕಪಲ್ಗಳ ಪೈಕಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಕೂಡ ಇದ್ದಾರೆ. ಇದೀಗ ಈ ಜೋಡಿ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದು, ಸಿನಿಮಾ ಸೆಟ್ನಲ್ಲಿ ನಾವು ಗಂಡ ಹೆಂಡತಿ ರೀತಿಯಲ್ಲಿಯೇ ಇರಲಿಲ್ಲ ಎಂದು ದೀಪಿಕಾ ಪಡುಕೋಣೆ ಮನದಾಳ ಬಿಚ್ಚಿಟ್ಟಿದ್ದಾರೆ.
ಭಾರತೀಯ ಲೆಜೆಂಡ್ ಕ್ರಿಕೆಟರ್ ಕಪಿಲ್ ದೇವ್ ಜೀವನಕ್ಕೆ ಸಂಬಂಧಿಸಿದಂತೆ ಹಿಂದಿಯಲ್ಲಿ '83'ಎಂಬ ಸಿನಿಮಾ ರೆಡಿಯಾಗುತ್ತಿದೆ. ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಕಪಿಲ್ ದೇವ್ ಪಾತ್ರದಲ್ಲಿ ನಟಿಸುತ್ತಿದ್ದು, ಕಪಿಲ್ ದೇವ್ ಪತ್ನಿ ರೋಮಿ ದೇವ್ ಪಾತ್ರದಲ್ಲಿ ದೀಪಿಕಾ ಕಾಣಿಸಿಕೊಂಡಿದ್ದಾರೆ.