ಡಿಸ್ಕವರಿ ಪ್ಲಸ್ ವಾಹಿನಿ ಗಡಿ ಕಾಯುವ ಯೋಧರ ಬಗ್ಗೆ ಜನರಿಗೆ ತಿಳಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಹೊರಟಿದೆ. ಈ ಕಾರ್ಯಕ್ರಮದಲ್ಲಿ ಖ್ಯಾತ ಸೆಲೆಬ್ರಿಟಿಗಳನ್ನು ಬಳಸಿಕೊಂಡು ಪ್ರಸಾರ ಮಾಡಲಾಗುತ್ತಿದೆ. ಈ ಶೋಗೆ 'ಮಿಷನ್ ಫ್ರಂಟ್‌ಲೈನ್' ಎಂದು ಹೆಸರಿಡಲಾಗಿದೆ.
'ಮಿಷನ್ ಫ್ರಂಟ್‌ಲೈನ್': ಗನ್ ಹಿಡಿದು ಗಡಿ ಕಾಯಲು ನಿಂತ 'ಬಲ್ಲಾಳದೇವ' ರಾಣಾ ದಗ್ಗುಬಾಟಿ - Rana on the border of the country
ಮಿಷನ್ ಫ್ರಂಟ್‌ಲೈನ್' ಕಾರ್ಯಕ್ರಮದ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡ ದಗ್ಗುಬಾಟಿ, 'ಬಿಎಸ್‌ಎಫ್ ಯೋಧನಾಗಿ ಒಂದು ದಿನ ಗಡಿಯಲ್ಲಿ ಕಳೆದಿದ್ದೇನೆ. ಈ ಅನುಭವ ನಿಜಕ್ಕೂ ಮರೆಯಲಾಗದು. ಯುದ್ಧದ ಕಥೆಗಳು ಹಾಗೂ ಅಲ್ಲಿ ಕಳೆದ ನನ್ನ ಅನುಭವ ನನ್ನಲ್ಲಿಯೇ ಉಳಿದುಹೋಗಿದೆ. ಅದನ್ನು ನಾನು ಯಾವಾಗಲೂ ಮರೆಯುವುದಿಲ್ಲ. ಡಿಸ್ಕವರಿ ಪ್ಲಸ್ ಮಿಷನ್ ಫ್ರಂಟ್ಲೈನ್ಗೆ ಧನ್ಯವಾದ ಎಂದಿದ್ದಾರೆ.
ಇದರ ಶೂಟಿಂಗ್ಗೆ ತೆಲುಗಿನ ಖ್ಯಾತ ನಟ ರಾಣಾ ದಗ್ಗುಬಾಟಿ ಒಂದು ದಿನವನ್ನು ಗಡಿಯಲ್ಲಿ ಕಳೆದಿದ್ದಾರೆ. ಅಲ್ಲದೇ ಗಡಿಭಾಗದಲ್ಲಿ ಸೈನಿಕರು ಎದುರಿಸುವ ಕಷ್ಟಗಳನ್ನು ಜೈಸಲ್ಮೇರ್‌ನಲ್ಲಿ ಗಡಿರಕ್ಷಣಾ ಯೋಧರ ಜೊತೆ ಇದ್ದು ಅನುಭವವನ್ನು ಪಡೆದುಕೊಂಡಿದ್ದಾರೆ.
'ಮಿಷನ್ ಫ್ರಂಟ್‌ಲೈನ್' ಕಾರ್ಯಕ್ರಮದ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡ ದಗ್ಗುಬಾಟಿ, 'ಬಿಎಸ್‌ಎಫ್ ಯೋಧನಾಗಿ ಒಂದು ದಿನ ಗಡಿಯಲ್ಲಿ ಕಳೆದಿದ್ದೇನೆ. ಈ ಅನುಭವ ನಿಜಕ್ಕೂ ಮರೆಯಲಾಗದು. ಯುದ್ಧದ ಕಥೆಗಳು ಹಾಗೂ ಅಲ್ಲಿ ಕಳೆದ ನನ್ನ ಅನುಭವ ನನ್ನಲ್ಲಿಯೇ ಉಳಿದುಹೋಗಿದೆ. ಅದನ್ನು ನಾನು ಯಾವಾಗಲೂ ಮರೆಯುವುದಿಲ್ಲ. ಡಿಸ್ಕವರಿ ಪ್ಲಸ್ ಮಿಷನ್ ಫ್ರಂಟ್ಲೈನ್ಗೆ ಧನ್ಯವಾದ ಎಂದಿದ್ದಾರೆ.