ಕರ್ನಾಟಕ

karnataka

ETV Bharat / sitara

ರಮೇಶ್​​ ಅರವಿಂದ್​​​​ಗೆ ಈ ಸಿನಿಮಾಗಳ ಭಾಗ-2 ಮಾಡುವ ಆಸೆಯಂತೆ! - ಕಾಮಿಡಿ ಎಂಟರ್​​​​ಟೈನ್ಮೆಂಟ್​​​​​​​​​​​​​ ಸಿನಿಮಾ

ಸ್ಯಾಂಡಲ್​ವುಡ್ ಚಾರ್ಮಿಂಗ್ ಸ್ಟಾರ್​​​​​​​​​​​​​​​ ರಮೇಶ್​ ಅರವಿಂದ್​​ಗೆ ತಾವು ಅಭಿನಯಿಸಿರುವ 'ರಾಮ ಶಾಮ ಭಾಮ' ಹಾಗೂ 'ತುತ್ತಾ ಮುತ್ತಾ' ಚಿತ್ರದ ಭಾಗ-2 ಮಾಡುವ ಆಸೆಯಂತೆ. 'ಶಿವಾಜಿ ಸುರತ್ಕಲ್' ಚಿತ್ರದ ಸುದ್ದಿಗೋಷ್ಠಿಯಲ್ಲಿ ರಮೇಶ್​ ಈ ಆಸೆ ವ್ಯಕ್ತಪಡಿಸಿದ್ದಾರೆ.

ರಮೇಶ್​​ ಅರವಿಂದ್

By

Published : Sep 11, 2019, 6:26 PM IST

ನಿರೂಪಕ, ನಿರ್ದೇಶಕ, ನಟನಾಗಿ ಸ್ಯಾಂಡಲ್​​​​ವುಡ್​​​​​ನಲ್ಲಿ ಎವರ್​​​ ಗ್ರೀನ್​ ಹೀರೋ ಎಂದು ಕರೆಸಿಕೊಂಡವರು ನಟ ರಮೇಶ್ ಅರವಿಂದ್. 100 ಸಿನಿಮಾಗಳ ಸರದಾರ ರಮೇಶ್​ ಅರವಿಂದ್ ನಿನ್ನೆಯಷ್ಟೇ ತಮ್ಮ 55ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

'ಶಿವಾಜಿ ಸುರತ್ಕಲ್' ಚಿತ್ರದ ಸುದ್ದಿಗೋಷ್ಠಿ

ರಮೇಶ್ ಅರವಿಂದ್ 101ನೇ ಸಿನಿಮಾ 'ಶಿವಾಜಿ ಸುರತ್ಕಲ್' ಟೀಸರ್​ ಕೂಡಾ ನಿನ್ನೆ ಬಿಡುಗಡೆಯಾಗಿದೆ. ಇದರಲ್ಲಿ ರಮೇಶ್​​​ ಎರಡು ಡಿಫರೆಂಟ್​​​​ ರೋಲ್​​​​ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು 'ಶಿವಾಜಿ ಸುರತ್ಕಲ್' ಚಿತ್ರದ ಸುದ್ದಿಗೋಷ್ಠಿಯಲ್ಲಿ ರಮೇಶ್ ಅರವಿಂದ್ ಇಂಟ್ರೆಸ್ಟಿಂಗ್ ವಿಚಾರವೊಂದನ್ನು ಹೇಳಿಕೊಂಡಿದ್ದಾರೆ. ತಾವು ಇದುವರೆಗೂ ಅಭಿನಯಿಸಿರುವ ಕೆಲವೊಂದು ಸಿನಿಮಾಗಳ ಸೀಕ್ವೆಲ್ ಮಾಡಬೇಕು ಎಂಬ ಆಸೆ ರಮೇಶ್​​​​ಗೆ ಇದೆಯಂತೆ. ಅದರಲ್ಲಿ 2005ರಲ್ಲಿ ಬಂದ ಫ್ಯಾಮಿಲಿ ಕಾಮಿಡಿ ಎಂಟರ್​​​​ಟೈನ್ಮೆಂಟ್​​​​​​​​​​​​​ ಸಿನಿಮಾ 'ರಾಮ ಶಾಮ ಭಾಮ' ಚಿತ್ರದ ಎರಡನೇ ಭಾಗ ಮಾಡುವ ಪ್ಲ್ಯಾನ್ ಮಾಡಿದ್ದಾರೆ ರಮೇಶ್​​. ಆದರೆ ಕಮಲ್ ಹಾಸನ್ ಬ್ಯುಸಿ ಇರುವ ಕಾರಣ ಅದು ತಡವಾಗುತ್ತಿದೆಯಂತೆ. ಇದರೊಂದಿಗೆ 1998ರಲ್ಲಿ ಬಿಡುಗಡೆಯಾದ 'ತುತ್ತಾ ಮುತ್ತಾ' ಚಿತ್ರದ ಭಾಗ-2 ಸಿನಿಮಾ ತೆಗೆಯುವ ಆಸೆಯನ್ನೂ ಕೂಡಾ ರಮೇಶ್ ವ್ಯಕ್ತಪಡಿಸಿದ್ದಾರೆ.

ಇನ್ನು ರಮೇಶ್ ಅರವಿಂದ್ ಸಿನಿ ಕರಿಯರ್​​​​​​​​​​​​​​​​​​​​ನಲ್ಲಿ 'ಅಮೃತ ವರ್ಷಿಣಿ' ಸಿನಿಮಾ ಅವರನ್ನು ಬಹಳ ಕಾಡಿತ್ತಂತೆ. ಅದೇ ಚಿತ್ರದ ಹ್ಯಾಂಗೋವರ್​​​​​ನಲ್ಲಿ ಬಹಳ ದಿನ ಇದ್ದರಂತೆ. ಈ ಚಿತ್ರದಲ್ಲಿ ಸುಹಾಸಿನಿ ಪತಿ ಪಾತ್ರ ಮಾಡಿದ್ದ ಶರತ್ ಬಾಬು ಅವರನ್ನು ಕೊಲೆ ಮಾಡಿ ನಂತರ ಮನೆಗೆ ಬಂದು ಸುಹಾಸಿನಿ ಅವರನ್ನು ನೋಡುವ ಕ್ಷಣ ಅವರನ್ನು ತುಂಬಾ ಕಾಡಿತ್ತಂತೆ. ನಾನು ಅದೇ ಪಾತ್ರದ ಹ್ಯಾಂಗೋವರ್​​​ನಲ್ಲಿ ಬಹಳ ದಿನಗಳ ಕಾಲ ಇದ್ದೆ ಎಂದು ರಮೇಶ್ ಹೇಳಿಕೊಂಡಿದ್ದಾರೆ. ಅಂದಿಗೂ ಇಂದಿಗೂ ಕೂಡಾ ರಮೇಶ್ ಅರವಿಂದ್ ಹೆಣ್ಣುಮಕ್ಕಳ ಅಚ್ಚುಮೆಚ್ಚಿನ ನಟರಾಗಿ ಮಿಂಚುತ್ತಿದ್ದಾರೆ.

ABOUT THE AUTHOR

...view details