ಉಳಿದವರು ಕಂಡಂತೆ ಚಿತ್ರದ ನಂತರ ನಿರ್ದೇಶನದಿಂದ ದೂರವೇ ಉಳಿದಿದ್ದ ರಕ್ಷಿತ್ ಶೆಟ್ಟಿ, ಇದೀಗ ಮತ್ತೆ ಆ್ಯಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ 'ರಿಚರ್ಡ್ ಆಂಟನಿ' ಎಂಬ ಚಿತ್ರಕ್ಕೆ ಅವರೇ ಕಥೆ ಬರೆದು, ನಿರ್ದೇಶಿಸುತ್ತಿರುವ ಜತೆಗೆ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕುರಿತು ಹೊಂಬಾಳೆ ಫಿಲಂಸ್ ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಭಾನುವಾರ ಘೋಷಿಸಿದೆ.
RICHARD ANTHONY: ಹೊಂಬಾಳೆ ಫಿಲಂಸ್ ಹೊಸ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಆ್ಯಕ್ಷನ್ ಕಟ್ - RRR MOVIE
ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ 'ರಿಚರ್ಡ್ ಆಂಟನಿ' ಎಂಬ ಚಿತ್ರವನ್ನು ರಕ್ಷಿತ್ ಶೆಟ್ಟಿ ನಿರ್ದೇಶನ ಮಾಡ್ತಿದ್ದು, ಮತ್ತೆ ನಿರ್ದೇಶಕನಾಗಿ ಮಿಂಚುವ ತಯಾರಿಯಲ್ಲಿದ್ದಾರೆ.
ಗುರುವಾರವಷ್ಟೇ ಹೊಂಬಾಳೆ ಫಿಲಂಸ್ ಸಂಸ್ಥೆಯು ಹೊಸ ಚಿತ್ರದ ಪೋಸ್ಟರ್ವೊಂದನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿತ್ತು. ಈ ಚಿತ್ರದ ಹೆಸರೇನು, ಯಾರು ನಟಿಸುತ್ತಾರೆ ಎಂಬ ವಿಷಯ, ಇಂದು ಹೊಂಬಾಳೆ ಫಿಲಂಸ್ನ ಯೂಟ್ಯೂಬ್ ಚಾನಲ್ನಲ್ಲಿ ಇಂದು ಪ್ರೊಡಕ್ಷನ್ ನಂಬರ್ 10 ಕುರಿತಾದ ಹೆಚ್ಚಿನ ಮಾಹಿತಿ ಹೊರಬಿದ್ದಿದೆ.
ಮೊದಲು ಬಿಡುಗಡೆಯಾಗಿದ್ದ ಪೋಸ್ಟರ್ ಸಾಕಷ್ಟು ಕುತೂಹಲಗಳಿಗೆ ಎಡೆಮಾಡಿಕೊಟ್ಟಿತ್ತು. ಸಮುದ್ರದಿಂದ ನಡೆದು ಬಂದಂತಿರುವ ರಕ್ತಸಿಕ್ತ ಹೆಜ್ಜೆಗುರುತಿದ್ದ ಈ ಪೋಸ್ಟರ್ನಲ್ಲಿ ಅಲೆಗಳು ಸತ್ತವರನ್ನು ಎಳೆದು ತಂದರೆ, ಸಮುದ್ರ ತೀರವೆಲ್ಲ ರಕ್ತವಾಗುತ್ತದೆ ಎಂಬ ಅರ್ಥ ಬರುವ ಟ್ಯಾಗ್ಲೈನ್ ಇದೆ. ಪೋಸ್ಟರ್ ನೋಡಿದವರೆಲ್ಲರೂ, ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ನಟಿಸಬಹುದಾ? ಸೂರರೈ ಪೋಟ್ರು ನಿರ್ದೇಶಿಸಿದ್ದ ಸುಧಾ ಕೊಂಗರಾ ನಿರ್ದೇಶಿಸಬಹುದಾ ಎಂದು ಪ್ರಶ್ನಿಸಿದ್ದರು. ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಡದೆ ಸುಮ್ಮನಿದ್ದ ಹೊಂಬಾಳೆ ಫಿಲಂಸ್, ಇದೀಗ ಈ ಪೋಸ್ಟರ್ ಮೂಲಕವೇ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದೆ.