ಕರ್ನಾಟಕ

karnataka

ETV Bharat / sitara

ಸುದೀಪ್​​​ ಜೊತೆ ರಕ್ಷಿತ್​​​ ಸಿನಿಮಾ : ಮಾಹಿತಿ ಕೊಟ್ಟ ಕಿರಿಕ್​​ ಹುಡ್ಗ - ಸುದೀಪ್​​ ಮತ್ತು ರಕ್ಷಿತ್​ ಶೆಟ್ಟಿ

ಕಳದೆ ಹಲವಾರು ದಿನಗಳಿಂದ ಕಿಚ್ಚ ಸುದೀಪ್​​ ಜೊತೆ ರಕ್ಷಿತ್​​ ಶೆಟ್ಟಿ ಸಿನಿಮಾ ಮಾಡ್ತಾರಂತೆ ಎಂದು ಚರ್ಚೆಯಾಗುತ್ತಿದೆ. ಈ ಗುಸು ಗುಸು ಮಾತಿಗೆ ರಕ್ಷಿತ್​ ಶೆಟ್ಟಿ ತೆರೆ ಎಳೆದಿದ್ದು, ಸುದೀಪ್​​ ಜೊತೆ ಸಿನಿಮಾ ಮಾಡೋದನ್ನು ಖಚಿತಪಡಿಸಿದ್ದಾರೆ.

ಸುದೀಪ್​​​ ಜೊತೆ ರಕ್ಷಿತ್​​​ ಸಿನಿಮಾ : ಮಾಹಿತಿ ಕೊಟ್ಟ ಕಿರಿಕ್​​ ಹುಡ್ಗ !
ಸುದೀಪ್​​​ ಜೊತೆ ರಕ್ಷಿತ್​​​ ಸಿನಿಮಾ : ಮಾಹಿತಿ ಕೊಟ್ಟ ಕಿರಿಕ್​​ ಹುಡ್ಗ !

By

Published : Jan 17, 2021, 12:10 PM IST

ಸ್ಯಾಂಡಲ್​ವುಡ್​ನಲ್ಲಿ ಪುರುಸೊತ್ತು ಇಲ್ಲದ ನಟರ ಪೈಕಿ ಸಿಂಪಲ್​​ ಸ್ಟಾರ್​ ರಕ್ಷಿತ್​ ಶೆಟ್ಟಿ ಕೂಡ ಒಬ್ರು. ಒಂದಾದ ಮೇಲೆ ಒಂದರಂತೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿರುವ ಕಿರಿಕ್​​ ಹುಡುಗ ಸದ್ಯ ಚಾರ್ಲಿ 777 ಚಿತ್ರದ ಕೆಲಸಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಈ ನಡುವೆ ಕೂಡ ಫೇಸ್​​ಬುಕ್​ ಲೈವ್​​​ ಬಂದ 'ಅವನೇ ಶ್ರೀಮನ್ನಾರಾಯಣ' ನಟ, ಸುದೀಪ್​​ ಜೊತೆ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ.

ಸುದೀಪ್

ಹೌದು, ಕಳದೆ ಹಲವಾರು ದಿನಗಳಿಂದ ಸುದೀಪ್​​ ಜೊತೆ ರಕ್ಷಿತ್​​ ಶೆಟ್ಟಿ ಸಿನಿಮಾ ಮಾಡ್ತಾರಂತೆ ಎಂದು ಚರ್ಚೆಯಾಗುತ್ತಿದೆ. ಈ ಗುಸು ಗುಸು ಮಾತಿಗೆ ರಕ್ಷಿತ್​ ತೆರೆ ಎಳೆದಿದ್ದು, ಸುದೀಪ್​​ ಜೊತೆ ಸಿನಿಮಾ ಮಾಡೋದು ಪಕ್ಕ ಎಂದಿದ್ದಾರೆ. ಈಗಾಗಲೇ ಅರ್ಧ ಸ್ಕ್ರಿಪ್ಟ್ ಮುಗಿದಿದೆ. ಉಳಿದ ಭಾಗದ ಸ್ಕ್ರಿಪ್ಟ್ ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ.

ರಕ್ಷಿತ್​​​ ಶೆಟ್ಟಿ

ರಕ್ಷಿತ್​ ಶೆಟ್ಟಿ ಕೈಲಿರುವ ಸಿನಿಮಾಗಳೆಂದರೆ ಸಪ್ತ ಸಾಗರದಾಚೆ, ಪುಣ್ಯಕೋಟಿ ಮತ್ತು ರಿಚ್ಚಿ. ಈ ಎಲ್ಲಾ ಸಿನಿಮಾಗಳು ಆದ ಮೇಲೆ ಸುದೀಪ್ ಜೊತೆಗಿನ ಸಿನಿಮಾವನ್ನು ಕೈಗೆತ್ತಿಕೊಳ್ಳುವುದಾಗಿ ರಕ್ಷಿತ್​​ ತಿಳಿಸಿದ್ದಾರೆ.

ಸುದೀಪ್

ಚಾರ್ಲಿ 777 ಸಿನಿಮಾದ ಬಹುಪಾಲು ಚಿತ್ರೀಕರಣ ಮುಗಿದಿದ್ದು, ಇನ್ನೂ ಆರು ದಿನಗಳ ಶೂಟಿಂಗ್​ ಬಾಕಿ ಇದೆ. ಮತ್ತೆ ಕಾಶ್ಮೀರಕ್ಕೆ ಹೋಗಿ ಶೂಟಿಂಗ್​ ಮಾಡಬೇಕು ಎಂದಿದ್ದಾರೆ.

ABOUT THE AUTHOR

...view details