ಕರ್ನಾಟಕ

karnataka

By

Published : Dec 9, 2019, 10:53 AM IST

ETV Bharat / sitara

ಪ್ಲಾಸ್ಟಿಕ್​​ ಮುಕ್ತ ಭಾರತಕ್ಕೆ ಮುಂದಾದ ರಾಜ್​​​​ ಫ್ಯಾಮಿಲಿ: ಜಾಗೃತಿಗಾಗಿ ಪರಿಸರ ಸ್ನೇಹಿ ಬ್ಯಾಗ್​​​​ ತಯಾರಿಕೆ

ಪ್ಲಾಸ್ಟಿಕ್​​ ನಿರ್ನಾಮ ಮಾಡುವ ಉದ್ದೇಶದಿಂದ ಪ್ಲಾಸ್ಟಿಕ್​ ಬ್ಯಾಗ್​ ಬಳಸದಂತೆ ವರನಟ ಡಾ. ರಾಜ್​​ಕುಮಾರ್​​ ಕುಟುಂಬ ಜನರಿಗೆ ಜಾಗೃತಿ ಮೂಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಬ್ಯಾಗ್​​ ತಯಾರಿಸುವಲ್ಲಿ ರಾಜ್​​ಕುಮಾರ್​​ ಕುಟುಂಬ ಮುಂದಾಗಿದೆ.

Raj Kumar Family, Plastic Free India
ಪ್ಲಾಸ್ಟಿಕ್​​ ಮುಕ್ತ ಭಾರತಕ್ಕೆ ಮುಂದಾದ ರಾಜ್​​ ಫ್ಯಾಮಿಲಿ

ಡಾ.ರಾಜ್​ಕುಮಾರ್​​ ಫ್ಯಾಮಿಲಿ ಆಗಾಗ್ಗೆ ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಕರ್ನಾಟಕದ ಜನರ ಪ್ರೀತಿಗೆ ಪಾತ್ರವಾಗಿದೆ. ಈ ಹಿಂದೆ ರಕ್ತದಾನ, ನೇತ್ರದಾನ, ಗಿಡ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ಸಹಾಯ ಮಾಡಿತ್ತು.

ಇದೀಗ ಮತ್ತೊಂದು ಸಮಾಜದ ಒಳಿತಿನ ಕೆಲಸಕ್ಕೆ ರಾಜ್​​​​ ಫ್ಯಾಮಿಲಿ ಕೈ ಹಾಕಿದೆ. ಅದೇ ಪ್ಲಾಸ್ಟಿಕ್​​ ಮುಕ್ತ ಭಾರತ. ಹೌದು, ಪ್ಲಾಸ್ಟಿಕ್​​ ನಿರ್ನಾಮ ಮಾಡುವ ಉದ್ದೇಶದಿಂದ ಪ್ಲಾಸ್ಟಿಕ್​ ಬ್ಯಾಗ್​ ಬಳಸದಂತೆ ಜನರಿಗೆ ಜಾಗೃತಿ ಮೂಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಬ್ಯಾಗ್​​ ತಯಾರಿಸುವಲ್ಲಿ ರಾಜ್​​​ಕುಮಾರ್​​ ಕುಟುಂಬ ಮುಂದಾಗಿದೆ. ತಮ್ಮ ಮನೆಯ ಯಾವುದಾದರು ಕಾರ್ಯಕ್ರಮಗಳಿಗೆ ಬರುವ ಅತಿಥಿಗಳಿಗೆ ಈ ಬ್ಯಾಗ್​ ಕೊಡುವ ಮೂಲಕ ಪ್ಲಾಸ್ಟಿಕ್​​ ಮುಕ್ತ ಭಾರತವನ್ನು ಮಾಡುವುದು ಇದರ ಉದ್ದೇಶ.

ರಾಜ್​​ ಹೆಸರಲ್ಲಿ ಪರಿಸರ ಜಾಗೃತಿ

ಈ ಬಗ್ಗೆ ಮಾತನಾಡಿರುವ ರಾಘವೇಂದ್ರ ರಾಜ್​​ಕುಮಾರ್​​​, ನಮ್ಮ ತಂದೆಯ ಹೆಸರಲ್ಲಿ ಏನಾದರು ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಸಮಾಜದಲ್ಲಿ ಒಳ್ಳೆ ಪ್ರತಿಕ್ರಿಯೆ ಸಿಗುತ್ತದೆ. ಯಾಕಂದ್ರೆ ನಮ್ಮ ತಂದೆಯ ಅಭಿಮಾನಿ ಗಣ ಅಷ್ಟು ದೊಡ್ಡದಿದೆ. ಇನ್ನು ನಮ್ಮ ತಂದೆ ಒಂದು ಮಾತು ಹೇಳುತ್ತಿದ್ದರು. ಬೇರೆಯವರಿಗೆ ಏನನ್ನಾದರೂ ಒಳ್ಳೆ ಕೆಲಸ ಮಾಡು ಎನ್ನುವುದಕ್ಕಿಂತ ಮುಂಚೆ ಆ ಕೆಲಸವನ್ನು ಮೊದಲು ನೀನು ಮಾಡು ಎಂದು ಹೇಳುತ್ತಿದ್ರು ಅಂತಾ ರಾಘವೇಂದ್ರ ರಾಜ್​​ಕುಮಾರ್​​ ಹೇಳಿದರು.

ಶಿವಣ್ಣ, ಪುನೀತ್​​​, ರಾಘವೇಂದ್ರ ರಾಜ್​​ಕುಮಾರ್​​

ಡಾ. ರಾಜ್​​ಕುಮಾರ್ ಹೆಸರಿನಲ್ಲಿರುವ ಐಎಎಸ್ ಅಕಾಡೆಮಿ ಸಹ ಇತ್ತೀಚಿಗೆ ಟ್ರಸ್ಟ್ ಆಗಿ ಬದಲಾವಣೆಯಾಗಿದೆ. ಇನ್ನು ಡಾ. ರಾಜ್​​​ಕುಮಾರ್ ಟ್ರಸ್ಟ್ ಅಡಿಯಲ್ಲಿ ಸಾವಿರಾರು ವ್ಯಕ್ತಿಗಳಿಗೆ ನೇತ್ರ ತಪಾಸಣೆ, ನೇತ್ರ ದಾನ ಬ್ಯಾಂಕ್, ಶಸ್ತ್ರ ಚಿಕಿತ್ಸೆ ಸಹ ನಡೆಯುತ್ತಿದೆ.

ರಾಜ್​​ ಹೆಸರಲ್ಲಿ ಪರಿಸರ ಜಾಗೃತಿ

ABOUT THE AUTHOR

...view details