ಕರ್ನಾಟಕ

karnataka

ETV Bharat / sitara

ರಘು ದೀಕ್ಷಿತ್​ ಹೊಸ ಪ್ರಯತ್ನ : ಬರಲಿದೆಯಂತೆ ಹತ್ತು ಹಾಡುಗಳ ಆಲ್ಬಂ

ರಘು ದೀಕ್ಷಿತ್​ ವಿಶೇಷ ಪ್ರಯತ್ನ ಒಂದಕ್ಕೆ ಕೈ ಹಾಕಿದ್ದಾರೆ. ಅದೇನೆಂದರೆ ಹತ್ತು ಹಾಡುಗಳನ್ನು ಹೊಂದಿರುವ ಒಂದು ಆಲ್ಬಂ ರೆಡಿ ಮಾಡುತ್ತಿದ್ದು, ಈ ಹಾಡುಗಳನ್ನು ಸಂತ ಶಿಶುನಾಳ ಶರೀಫ್​ ಮತ್ತು ದಾ.ರಾ ಬೇಂದ್ರೆ ಸಾಹಿತ್ಯವನ್ನು ಬಳಸಿಕೊಂಡು ತಯಾರು ಮಾಡಲಾಗುತ್ತಿದೆ. ಈ ಹಾಡುಗಳನ್ನು ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಮಾಡುವ ಪ್ಲಾನ್​ ಮಾಡಲಾಗಿದೆ.

ರಘು ದೀಕ್ಷಿತ್​ ಹೊಸ ಪ್ರಯತ್ನ : ಬರಲಿದೆಯಂತೆ ಹತ್ತು ಹಾಡುಗಳ ಆಲ್ಬಂ

By

Published : Aug 6, 2019, 10:04 PM IST

ಕನ್ನಡದ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ರಘು ದೀಕ್ಷಿತ್​​, ತಮ್ಮ ವಿಶೇಷ ಹಾಡುಗಾರಿಕೆ ಮೂಲಕ ಗುರುತಿಸಿಕೊಂಡಿದ್ದಾರೆ. ‘ನಿನ್ನ ಪೂಜೆಗೆ ಬಂದೆ ಮಾದೇಶ್ವರ ಎಂಬ ಹಾಡಿನ ಮೂಲಕ ಸಿನಿ ಲೋಕಕ್ಕೆ ಲಗ್ಗೆ ಇಟ್ಟ ರಘು, ಇದೀ ಹತ್ತಾರು ಹಾಡುಗಳನ್ನು ಕಾಂಪೋಸ್​ ಮಾಡಿದ್ದಾರೆ.

‘ಹ್ಯಾಪಿ ನ್ಯೂ ಇಯರ್’ ಸಿನಿಮಾಕ್ಕೆ ಸಂಗೀತ ನೀಡಿದ್ದ ರಘು ದೀಕ್ಷತ್​ ಸದ್ಯ ‘ನಿನ್ನ ಸನಿಹಕೆ’ ಎಂಬ ಸಿನಿಮಾದ ಗೀತೆಗಳಿಗೆ ನಿರ್ದೇಶನ ಮಾಡಿದ್ದಾರೆ. ಆದ್ರೆ ಮ್ಯಾಟ್ರು ಅದಲ್ಲ. ಇದೀಗ ರಘು ದೀಕ್ಷಿತ್​ ವಿಶೇಷ ಪ್ರಯತ್ನ ಒಂದಕ್ಕೆ ಕೈ ಹಾಕಿದ್ದಾರೆ. ಅದೇನೆಂದರೆ ಹತ್ತು ಹಾಡುಗಳನ್ನು ಹೊಂದಿರುವ ಒಂದು ಆಲ್ಬಂ ರೆಡಿ ಮಾಡುತ್ತಿದ್ದು, ಈ ಹಾಡುಗಳನ್ನು ಸಂತ ಶಿಶುನಾಳ ಶರೀಫ್​ ಮತ್ತು ದಾ.ರಾ ಬೇಂದ್ರೆ ಸಾಹಿತ್ಯವನ್ನು ಬಳಸಿಕೊಂಡು ತಯಾರು ಮಾಡಲಾಗುತ್ತಿದೆ.

ಇನ್ನು ಈ ಹಾಡುಗಳನ್ನು ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಮಾಡುವ ಪ್ಲಾನ್​ ಮಾಡಲಾಗಿದ್ದು, ಆಯಾ ಭಾಷೆಯ ಲಿರಿಕಲ್​ ರೈಟರ್​ಗಳ ಹುಡುಕಾಟ ನಡೆಯುತ್ತಿದೆ. ದಾ.ರಾ ಬೇಂದ್ರೆಯವರ ‘ಕುಡ್ಲಿಕ್ಕೆ ಹೊಂಟಿದೆ ನಾ ಜ್ವಾಕಿ...ಎಂಬ ಹಾಡನ್ನು ಬೇರೆ ಭಾಷೆಗಳಿಗೆ ತರ್ಜುಮೆ ಮಾಡಲಾಗುತ್ತಿದೆ.

ಲಿರಿಕ್ಸ್​​ ಆದ ನಂತ್ರ ಈ 10 ಹಾಡುಗಳನ್ನು ಸಹ ರಘು ದೀಕ್ಷತ್​ ಹಾಡಲಿದ್ದಾರೆ. ಆದ್ರೆ ಈ ಆಲ್ಬಂ ಹೆಸರನ್ನು ರಘು ದೀಕ್ಷಿತ್ ಇನ್ನೂ ನಿಶ್ಚಯ ಮಾಡಿಲ್ಲ. ಇದರಲ್ಲಿ ಕರ್ನಾಟಕದ ನಾಲ್ಕು ಭಾಷೆಗಳ (ಕನ್ನಡ, ಕೊಡವ, ತುಳು, ಕೊಂಕಣಿ) ಒಳಗೊಂಡ ಒಂದು ಹಾಡು ಸಹ ಇದೆ ಎಂಬ ಸುಳಿವನ್ನು ರಘು ಬಿಚ್ಚಿಟ್ಟಿದ್ದಾರೆ.

ABOUT THE AUTHOR

...view details