ಕರ್ನಾಟಕ

karnataka

By

Published : Jul 22, 2019, 10:37 PM IST

ETV Bharat / sitara

ಬಾಲಿವುಡ್ ನಟರನ್ನು ಭೇಟಿ ಮಾಡಿದ ರಾಘಣ್ಣ..ಭೇಟಿ ಹಿಂದಿನ ಕಾರಣ ಏನು..?

'ಪೊಗರು' ಸಿನಿಮಾ ಶೂಟಿಂಗ್​​ಗಾಗಿ ಹೈದರಾಬಾದ್ ರಾಮೋಜಿ ಫಿಲಮ್ ಸಿಟಿಗೆ ತೆರಳಿರುವ ರಾಘವೇಂದ್ರ ರಾಜ್​​ಕುಮಾರ್ ಅಲ್ಲಿ ಬಾಲಿವುಡ್ ನಟರಾದ ಜಾನ್ ಅಬ್ರಹಾಂ ಹಾಗೂ ಅನಿಲ್ ಕಪೂರ್ ಅವರನ್ನು ಭೇಟಿ ಮಾಡಿದ್ದಾರೆ.

ರಾಘಣ್ಣ

'ಅಮ್ಮನ ಮನೆ' ಸಿನಿಮಾ ಮೂಲಕ ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದ ರಾಘವೇಂದ್ರ ರಾಜ್​​ಕುಮಾರ್ ಇದೀಗ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಿದ್ದಾರೆ. ಇತ್ತೀಚೆಗೆ ರಾಘಣ್ಣ ಬಾಲಿವುಡ್ ನಟ ಜಾನ್ ಅಬ್ರಹಾಂ ಹಾಗೂ ಅನಿಲ್ ಕಪೂರ್​​ ಅವರನ್ನು ಭೇಟಿ ಮಾಡಿದ್ದಾರೆ.

ಅನಿಲ್​​ ಕಪೂರ್ ಜೊತೆ ರಾಘಣ್ಣ

ರಾಘಣ್ಣ ಹಾಗೂ ಬಾಲಿವುಡ್​​​​ ನಟರ ಭೇಟಿ ವಿಷಯ ತಿಳಿದ ಅಭಿಮಾನಿಗಳು ಇವರೆಲ್ಲಾ ಯಾವುದಾದರೂ ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿರಬಹುದಾ ಎಂಬ ಕುತೂಹಲದಲ್ಲಿದ್ದಾರೆ. ಆದರೆ ಇದು ಔಪಚಾರಿಕ ಭೇಟಿ ಅಷ್ಟೇ. ರಾಘಣ್ಣ ಇಬ್ಬರೊಂದಿಗೆ ಕೂಡಾ ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಕಳೆದಿದ್ದಾರೆ. ಈ ಸ್ಟಾರ್ ನಟರ ಮಿಲನಕ್ಕೆ ಸಾಕ್ಷಿಯಾಗಿದ್ದು ಹೈದರಾಬಾದ್​​​​ನ ರಾಮೋಜಿ ಫಿಲ್ಮ್ ಸಿಟಿ. ರಾಘಣ್ಣ ಸದ್ಯಕ್ಕೆ ಧ್ರುವಾಸರ್ಜಾ, ಅಭಿನಯದ 'ಪೊಗರು' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಜಾನ್ ಅಬ್ರಹಾಂ ಜೊತೆ ರಾಘವೇಂದ್ರ ರಾಜ್​ಕುಮಾರ್​

'ಪೊಗರು' ಸಿನಿಮಾ ಶೂಟಿಂಗ್ ಸ್ಪಾಟ್ ಪಕ್ಕದಲ್ಲೇ, ಜಾನ್ ಅಬ್ರಹಾಂ ಹಾಗೂ ಅನಿಲ್ ಕಪೂರ್ ಚಿತ್ರಗಳ ಶೂಟಿಂಗ್ ನಡೆಯುತ್ತಿದೆ. ಬಿಡುವಿನ ವೇಳೆಯಲ್ಲಿ ರಾಘವೇಂದ್ರ ಕುಮಾರ್ ಜಿಮ್ ಹೋಗಿದ್ದಾಗ ಜಾನ್ ಅಬ್ರಾಹಂ ಹಾಗೂ ಅನಿಲ್ ಕಪೂರ್ ಕೂಡಾ ಅದೇ ಜಿಮ್​​​​​​​​ಗೆ ಬಂದಿದ್ದಾರೆ. ಈ ವೇಳೆ ಮೂವರೂ ಭೇಟಿಯಾಗಿ ಉಭಯ ಕುಶಲೋಪರಿ ನಡೆಸಿದ್ದಾರೆ. ಬಾಲಿವುಡ್​ ನಟರಿಬ್ಬರೂ ರಾಘಣ್ಣನನ್ನು ಕುರಿತು ನಿಮ್ಮ ತಂದೆ ಡಾ. ರಾಜ್​ಕುಮಾರ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದಿದ್ದೇವೆ ಎಂದು ಬಹಳ ಆತ್ಮೀಯವಾಗಿ ಮಾತನಾಡಿಸಿದ್ದಲ್ಲದೆ ಅವರ ಆರೋಗ್ಯ ಕೂಡಾ ವಿಚಾರಿಸಿದ್ದಾರೆ. ಈ‌ ಕ್ಷಣವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ ರಾಘಣ್ಣ.

For All Latest Updates

TAGGED:

ABOUT THE AUTHOR

...view details