'ರಾಧಾರಮಣ' ಧಾರಾವಾಹಿ ರಾಧಾ ಟೀಚರ್ ಆಗಿ ಕಿರುತೆರೆ ವೀಕ್ಷಕರ ಗಮನ ಸೆಳೆದಿರುವ ಶ್ವೇತಾ ಆರ್. ಪ್ರಸಾದ್ ಇದೀಗ ಹೊಸ ಫೋಟೊ ಶೂಟ್ ಮೂಲಕ ಅಭಿಮಾನಿಗಳ ಕಣ್ಮನ ಸೆಳೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಮುದ್ದು ಮುಖದ ಚೆಲುವೆ ತಮ್ಮ ಫೋಟೋಗಳ ಮೂಲಕ ಅಭಿಮಾನಿಗಳ ಮನಕ್ಕೆ ಮತ್ತೊಮ್ಮೆ ಲಗ್ಗೆಯಿಟ್ಟಿದ್ದಾರೆ.
ಶ್ವೇತಾ ಪ್ರಸಾದ್ ಹೊಸ ಫೋಟೊ ಶೂಟ್... ಅಭಿಮಾನಿಗಳ ಹೃದಯಕ್ಕೆ ಲಗ್ಗೆಯಿಟ್ಟ ನಟಿ - ಶ್ವೇತಾ ಹೊಸ ಫೋಟೋಶೂಟ್
ಕಿರುತೆರೆಯಿಂದ ರಾಜ್ಯದ ಜನರಿಗೆ ಪರಿಚಯವಾದ ಆರ್ ಜೆ ಪ್ರದೀಪ್ ಪತ್ನಿ ಶ್ವೇತಾ ಆರ್. ಪ್ರಸಾದ್ ಇದೀಗ ಹೊಸ ಫೋಟೊ ಶೂಟ್ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ಶ್ವೇತಾ 'ಕಳ್ಬೆಟ್ಟದ ದರೋಡೆಕೋರರು' ಚಿತ್ರದ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟಿದ್ದಾರೆ.
'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಜಾಹ್ನವಿ ಆಲಿಯಾಸ್ ಜಾನು ಆಗಿ ಮನ ಸೆಳೆದಿದ್ದ ಈ ಶ್ವೇತ ಸುಂದರಿ ಮತ್ತೆ ರಮಣನ ಮನದನ್ನೆ ಆರಾಧನಾ ಆಗಿ ಬದಲಾದರು. ಧಾರಾವಾಹಿಯ ಕಾಂಟ್ರಾಕ್ಟ್ ಮುಗಿದಿದ್ದರಿಂದ ಧಾರಾವಾಹಿಯಿಂದ ಅರ್ಧದಿಂದ ಹೊರಬಂದರು. ಆದರೂ ಮೊದಲ ಧಾರಾವಾಹಿಯಲ್ಲೇ ಸಾವಿರಾರು ಅಭಿಮಾನಿಗಳನ್ನು ಪಡೆದಿದ್ದಾರೆ ಈ ಸುಂದರಿ. ಈ ಧಾರಾವಾಹಿ ಜೊತೆಜೊತೆಗೆ 'ಕಳ್ಬೆಟ್ಟದ ದರೋಡೆಕೋರರು' ಸಿನಿಮಾದ ನಾಯಕಿಯಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿರುವ ಶ್ವೇತಾ ಇದೀಗ ಪೋಟೋ ಶೂಟ್ ಮೂಲಕ ಸುದ್ದಿಯಾಗಿದ್ದಾರೆ. ಇದರೊಂದಿಗೆ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗಾಗಿ ಪತಿ ಆರ್ಜೆ ಪ್ರದೀಪ್ ಮತ್ತು ಸ್ನೇಹಿತರ ಸಹಾಯದಿಂದ ಸಹಾಯ ಹಸ್ತ ಕೂಡಾ ಚಾಚಿದ್ದಾರೆ.