ಕರ್ನಾಟಕ

karnataka

By

Published : Dec 8, 2019, 12:19 PM IST

ETV Bharat / sitara

ಅರೇ.. ರಚಿತಾ ರಾಮ್​​ ಮದುವೆ ಆದ್ರಾ? ಅನುಮಾನಕ್ಕೆ ಕಾರಣವಾಯ್ತು ಈ ಫೋಟೋ..

ರಚಿತಾ ರಾಮ್​​ ಮತ್ತು ಗೌತಮ್​ ನಡುವೆ ಮದುವೆ ಆಯ್ತಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಇದಕ್ಕೆ ಕಾರಣ ರಚಿತಾ ರಾಮ್​ ಮತ್ತು ಗೌತಮ್​​ ಜೊತೆಗಿರುವ ಆ ಫೋಟೋ..

rachita ram Instagram pic create doubt
ರಚಿತಾ ರಾಮ್​​

ಇತ್ತೀಚೆಗೆ ನಟಿ ರಚಿತಾ ರಾಮ್​ ಅಕ್ಕ ನಿತ್ಯಾ ರಾಮ್​​ ಮದುವೆ ಆಗಿದೆ. ಆಷ್ಟ್ರೇಲಿಯಾದಲ್ಲಿರುವ ಬ್ಯುಸಿನೆಸ್‌ಮೆನ್​​ ಗೌತಮ್​ ಜೊತೆ ನಿತ್ಯಾ ರಾಮ್​​​ ಸಪ್ತಪದಿ ತುಳಿದಿದ್ದಾರೆ. ಆದರೆ, ಇದೀಗ ಡಿಂಪಲ್​ ಕ್ವೀನ್​ ಅಭಿಮಾನಿಗಳಲ್ಲಿ ಒಂದು ಅನುಮಾನ ಕಾಡಲು ಶುರುವಾಗಿದೆ. ಗೌತಮ್​ ಜೊತೆ ನಿತ್ಯಾ ಮದುವೆ ಆದ್ರಾ ಅಥವಾ ರಚಿತಾ ರಾಮ್​ ಮದುವೆ ಆದ್ರಾ ಅಂತಾ.. ಈ ಅನುಮಾನಕ್ಕೆ ಕಾರಣವಾಗಿದ್ದು, ರಚಿತಾ ಪೋಸ್ಟ್​​ ಮಾಡಿರುವ ಆ ಫೋಟೋ..

ರಚಿತಾ, ನಿತ್ಯಾ, ಗೌತಮ್​​
ರಚಿತಾ, ಗೌತಮ್​​
ರಚಿತಾ ಕುಟುಂಬ

ಮದುವೆ ಸಂದರ್ಭದಲ್ಲಿ ಭಾವನ ಜೊತೆ ರಚಿತಾ ರಾಮ್​ ಮದುವೆ ಮಾಲೆ ಧರಿಸಿ, ಮದುವೆ ಟೋಪಿ ಹಾಕಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ನೋಡುಗರಿಗೆ ಇದು ಗೌತಮ್​ ಮತ್ತು ರಚಿತಾ ರಾಮ್​ ಮದುವೆಯ ರೀತಿ ಕಾಣುತ್ತದೆ. ಯಾಕಂದ್ರೆ, ಗೌತಮ್​ ಮತ್ತು ರಚಿತ ಒಂದೇ ರೀತಿಯ ಮಾಲೆ ಧರಿಸಿ, ಇಬ್ಬರೂ ಕೂಡ ಮದುವೆಯಲ್ಲಿ ಹಾಕುವ ವೈಟ್​​ ಅಂಡ್​​ ವೈಟ್​​​ ಬಟ್ಟೆ ಧರಿಸಿದ್ದಾರೆ.

ರಚಿತಾ ರಾಮ್​

ಇನ್​ಸ್ಟಾಗ್ರಾಮ್​ನಲ್ಲಿ ಈ ಪೋಸ್ಟ್​​ ನೋಡಿದ ಕೆಲವುರು ರಚಿತಾಗೆ ಮದುವೆಯಾಯ್ತಾ ಎಂದು ಕೇಳಿದ್ರೆ, ಇನ್ನೂ ಕೆಲವರು ಮುಂದಿನ ಮದುಮಗಳು ರಚಿತ ರಾಮ್​ ಎಂದು ಕಿಂಡಲ್​ ಮಾಡಿದ್ದಾರೆ.

ABOUT THE AUTHOR

...view details