ಹೈದರಾಬಾದ್ (ತೆಲಂಗಾಣ):ಇದು ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳಿಗೆ ಸಂತಸವಾಗುವ ಸುದ್ದಿ. ಶೀಘ್ರದಲ್ಲೇ ಪುಷ್ಪಾ 2 ಚಿತ್ರ ನಿರ್ಮಾಣಕ್ಕೆ ನಿರ್ಮಾಪಕರು ಮುಂದಾಗಿದ್ದಾರೆ.
ಅದರಲ್ಲೂ ಪ್ರಮುಖವಾಗಿ ಹಿಂದಿ ಮಾತನಾಡುವ ಪ್ರೇಕ್ಷಕರನ್ನು ಪರಿಗಣಿಸಿ ಸ್ಕ್ರಿಪ್ಟ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಸಿನಿಮಾ ನಿರ್ಮಾಪಕರು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಎರಡು ಭಾಗದಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಬೇಕೆಂದು ನಿರ್ದೇಶಕ ಸುಕುಮಾರ್ ಅಂದು ಕೊಂಡಿರಲಿಲ್ಲವಂತೆ. ಆದರೆ, ಈ ಚಿತ್ರದ ಬಾಕ್ಸ್ ಆಫೀಸ್ನ್ನು ಧೂಳೀಪಟ ಮಾಡಿದ್ದು, ಈ ಚಿತ್ರದ ಮುಂದುವರಿದ ಭಾಗಕ್ಕೆ ಜನ ಕಾತರದಿಂದ ಕಾಯುತ್ತಿದ್ದಾರೆ. ಅದಕ್ಕೆ ಚಿತ್ರತಂಡವೂ ಸರ್ವ ರೀತಿಯಲ್ಲೂ ಸಜ್ಜಾಗಿದೆ.
ಇದನ್ನೂ ಓದಿ: ಮಗುವನ್ನು ಕೊಂದ ಮಾನಸಿಕ ಅಸ್ವಸ್ಥ: ರೊಚ್ಚಿಗೆದ್ದು ಆರೋಪಿಯನ್ನು ಸಾಯಿಸಿ ಬೆಂಕಿಹಚ್ಚಿದ್ರು ಜನ!
ಪುಷ್ಪ: ದಿ ರೈಸ್ ಮತ್ತು ಪುಷ್ಪ: ದಿ ರೂಲ್ ಎಂದು ಎರಡು ವಿಭಾಗದಲ್ಲಿ ನಿರ್ದೇಶಕರು ಚಿತ್ರವನ್ನು ವಿಭಾಗ ಮಾಡಿದ್ದು, ಮುಂದೆ ಪ್ರಸ್ತುತಪಡಿಸುವ ಪುಷ್ಪ: ದಿ ರೂಲ್ ಸ್ಕ್ರಿಪ್ಟ್‌ನಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗುತ್ತದೆಯಂತೆ.
ಈಗ ಅವರು ಪುಷ್ಪಾ: ದಿ ರೂಲ್‌ನ ಸ್ಕ್ರಿಪ್ಟ್ ವರ್ಕ್ ಅನ್ನು ಪರಿಷ್ಕರಿಸಲು ಪ್ರಾರಂಭಿಸಿದ್ದಾರೆ. ಇದನ್ನು ಪ್ಯಾನ್-ಇಂಡಿಯಾ ಚಿತ್ರದ ಎರಡನೇ ಭಾಗ ಎಂದು ಕರೆಯಲಾಗಿದೆ. ಈ ಚಿತ್ರವು ಮತ್ತಷ್ಟು ದೊಡ್ಡ ಪರಿಣಾಮವನ್ನು ಉಂಟುಮಾಡುವ ರೀತಿಯಲ್ಲಿ ಸ್ಕ್ರಿಪ್ಟ್ ಅನ್ನು ಪಾಲಿಶ್ ಮಾಡಲು ಮುಂದಾಗಿದೆ ಚಿತ್ರತಂಡ ಎಂದು ತಿಳಿದುಬಂದಿದೆ.
ಪುಷ್ಪ ಒಂದು ಪ್ರಾದೇಶಿಕ ಚಲನಚಿತ್ರವಾಗಿದ್ದು, ಭಾರತದಾದ್ಯಂತ ವ್ಯಾಪಕ ಪ್ರೇಕ್ಷಕರನ್ನು ಆಕರ್ಷಿಸಿದೆ. ಅಷ್ಟೇ ಅಲ್ಲದೆ ರಾಷ್ಟ್ರವ್ಯಾಪಿ ಪ್ರಚಾರವನ್ನೂ ಪಡೆದಿದೆ.