ಕರ್ನಾಟಕ

karnataka

ETV Bharat / sitara

ಒಳ್ಳೆ ಫಾಶ್​​ ಲುಕ್​ನಲ್ಲಿ ಮಿರಮಿರ ಮಿಂಚಿದ ಯುವರತ್ನ - ಪುನೀತ್​ ರಾಜ್​ ಕುಮಾರ್​

ಇಂದು ಪುನೀತ್​ ರಾಜ್​ ಕುಮಾರ್​​​​ ಯುವರತ್ನ ಸಿನಿಮಾದಲ್ಲಿನ ಒಂದು ಫೋಸ್​​ ಅನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಗ್ರೇ ಬಣ್ಣದ ಸೂಟ್​ ಹಾಕಿಕೊಂಡು ಸನ್​​ ಗ್ಲಾಸ್​​ನಲ್ಲಿ ಒಳ್ಳೆ ಫಾಶ್​​ ಲುಕ್ ಕೊಟ್ಟು ಮಿಂಚಿದ್ದಾರೆ.

ಫೋಟೋ ಕೃಪೆ : ಟ್ವಿಟ್ಟರ್​​

By

Published : Sep 25, 2019, 9:46 PM IST

ಸ್ಯಾಂಡಲ್​ವುಡ್​ನಲ್ಲಿ ತೆರೆ ಮೇಲೆ ಕಾಲಿಡಲು ಕಾತುರವಾಗಿ ಕಾಯುತ್ತಿರುವ ಸಿನಿಮಾಗಳ ಪೈಕಿ ಪವರ್​​ ಸ್ಟಾರ್​ ಪುನೀತ್​ರಾಜ್​ ಕುಮಾರ್​ ಅಭಿನಯದ ಯುವರತ್ನ ಸಿನಿಮಾ ಕೂಡ ಒಂದು. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಎಷ್ಟು ಕುತೂಹಲವಿದೆ ಎಂದರೆ, ಚಿತ್ರತಂಡ ಸಿನಿಮಾ ಬಿಡುಗಡೆಯ ದಿನಾಂಕ ನಿಗದಿ ಮಾಡುವ ಮೊದಲೇ ಅಭಿಮಾನಿಗಳು ಡೇಟ್​ ಫಿಕ್ಸ್​ ಮಾಡಿದ್ದಾರೆ.

ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ದಿನದಿಂದ ದಿನಕ್ಕೆ ಕುತೂಹಲ ಜಾಸ್ತಿಯಾಗುತ್ತಿದ್ದು, ಅಪ್ಪುರನ್ನು ತೆರೆ ಮೇಲೆ ನೋಡಲು ಕಾದು ಕುಳಿತಿದ್ದಾರೆ.

ಇಂದು ಪುನೀತ್​ ರಾಜ್​ ಕುಮಾರ್​​​​ ಯುವರತ್ನ ಸಿನಿಮಾದಲ್ಲಿನ ಒಂದು ಫೋಸ್​​ ಅನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಗ್ರೇ ಬಣ್ಣದ ಸೂಟ್​ ಹಾಕಿಕೊಂಡು ಒಳ್ಳೆ ಫಾಶ್​​ ಲುಕ್​ನಲ್ಲಿ ಮಿರಮಿರ ಮಿಂಚಿದ್ದಾರೆ.

ಇನ್ನು ಯುವರತ್ನ ಸಿನಿಮಾವನ್ನು ಸಂತೋಷ್​ ಆನಂದ್​ ರಾಮ್​ ನಿರ್ದೇಶನ ಮಾಡುತ್ತಿದ್ದು, ಸಿನಿಮಾಕ್ಕೆ ವಿಜಯ್​​ ಕಿರಗಂದೂರು ಬಂಡವಾಳ ಹೂಡಿದ್ದಾರೆ. ಸಿನಿಮಾದಲ್ಲಿ ಸಾಯಿಕುಮಾರ್​, ಸೋನು ಗೌಡ, ಡಾಲಿ ಧನಂಜಯ್​, ಅಚ್ಯುತ್​ ಕುಮಾರ್​, ವಸಿಷ್ಠ ಸಿಂಹ, ರಂಗಾಯಣ ರಘು ಸೇರಿದಂತೆ ಬಹು ತಾರಾಗಣವೇ ಇದೆ.

ABOUT THE AUTHOR

...view details