ಕರ್ನಾಟಕ

karnataka

ETV Bharat / sitara

ಪೋಸ್ಟರ್​​ ನೋಡಿ ಇದು ವರ್ಸ್ಟ್‌ ಸಿನಿಮಾ ಅಂತಾ ಕಾಣುತ್ತೆ ಅಂದ್ರು ಪುನೀತ್​​.. - puneethrajkumar news

ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸುತ್ತಿದ್ದಾರೆ. ಅರವಿಂದ್‌ ಕಶ್ಯಪ್‌ ಛಾಯಾಗ್ರಹಣ ಮಾಡುತ್ತಿದ್ದಾರೆ. ಗುಲ್‌ಮೊಹರ್‌ ಫಿಲ್ಮ್ಸ್‌ ಮತ್ತು ವರುಣ್‌ ಸ್ಟುಡಿಯೋಸ್‌ ಬ್ಯಾನರ್‌ನಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ..

ಪೋಸ್ಟರ್​​ ನೋಡಿ ಇದು ವರ್ಸ್ಟ್‌ ಸಿನಿಮಾ ಅಂತ ಕಾಣುತ್ತೆ ಅಂದ್ರು ಪುನೀತ್​​
ಪೋಸ್ಟರ್​​ ನೋಡಿ ಇದು ವರ್ಸ್ಟ್‌ ಸಿನಿಮಾ ಅಂತ ಕಾಣುತ್ತೆ ಅಂದ್ರು ಪುನೀತ್​​

By

Published : Jan 29, 2021, 7:09 PM IST

Updated : Jan 29, 2021, 7:40 PM IST

ಸ್ಯಾಂಡಲ್​​ವುಡ್​​ಗೆ ದಿನೇದಿನೆ ಹೊಸಬರು, ಹೊಸ ಕಥೆ, ಹೊಸ ಕಾನ್ಸೆಪ್ಟ್ ಇಟ್ಟುಕೊಂಡು ಎಂಟ್ರಿ ಕೊಡ್ತಿದ್ದಾರೆ. ಇದೀಗ ಹೊಸಬರ ಸಿನಿಮಾವೊಂದು ಟ್ರೆಂಡಿಯಾಗಿರೋ ಟೈಟಲ್ ಇಟ್ಟುಕೊಂಡು, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹತ್ತಿರ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿಸಿದೆ.

ಅಚ್ಚರಿ ಏನಂದ್ರೆ, ಪೋಸ್ಟರ್‌ ರಿಲೀಸ್‌ ಮಾಡಿದ ಬಳಿಕ ಪುನೀತ್​​ 'ಇದನ್ನು ಬಿಡುಗಡೆ ಮಾಡೋಕೆ ಇಷ್ಟೆಲ್ಲ ಬಿಲ್ಡಪ್‌ ಬೇಕಾಗಿತ್ತಾ' ಎಂದು ವ್ಯಂಗ್ಯ ಮಾಡಿದ್ದಾರೆ. ಆ ಸಿನಿಮಾವೇ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ'‌.

ಹಾಸ್ಟೆಲ್​​ ಹುಡುಗರು ಬೇಕಾಗಿದ್ದಾರೆ ಪೋಸ್ಟರ್‌

ಈ ಟೈಟಲ್ ತಕ್ಕಂತೆಯೇ, ಮೊಮೊರಿ ಕಾರ್ಡ್‌ ಮಾದರಿಯಲ್ಲಿ ಪೋಸ್ಟರ್ ಡಿಸೈನ್ ಮಾಡಲಾಗಿದೆ. ಇದನ್ನ ನೋಡಿ ಪುನೀತ್‌ ಖುಷಿಪಟ್ಟಿದ್ದಾರೆ. ಇದೇನಿದು ಮೊಮೊರಿ ಕಾರ್ಡ್‌ ಇದ್ದಂಗೆ ಇದೆ. ಇದನ್ನು ಬಿಡುಗಡೆ ಮಾಡೋಕೆ ಇಷ್ಟೆಲ್ಲ ಬಿಲ್ಡಪ್‌ ಬೇಕಾಗಿತ್ತಾ ಅಂತಾ ಪುನೀತ್​ ಕೇಳಿದ್ದಾರೆ. ಅಲ್ಲದೆ ಪ್ರಾಯಶಃ ಇದು ವರ್ಸ್ಟ್‌ ಸಿನಿಮಾ ಅಂತಾ ಕಾಣುತ್ತೆ ಎಂದಿದ್ದಾರೆ.

ಪುನೀತ್​​ ಸೀರಿಯಸ್​ ಆಗಿ ಈ ರೀತಿ ಹೇಳಿದ್ದಾರಾ? ಎಂದು ಕನ್ಫ್ಯೂಸ್​​ ಆಗ್ಬೇಡಿ. ಯಾಕಂದ್ರೆ, ಚಿತ್ರತಂಡವೇ ಈ ರೀತಿ ಒಂದು ವಿಶೇಷ ಪ್ಲಾನ್​ ಮಾಡಿ ಚಿತ್ರದ ಪೋಸ್ಟರ್​​ ರಿಲೀಸ್​​ ಮಾಡಿಸಿದೆ. ಸಿನಿಮಾಗೆ ಮನರಂಜನಾ ವಾಹಿನಿಯೊಂದರಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ನಿರ್ದೇಶಕ ನಿತಿನ್‌ ಕೃಷ್ಣಮೂರ್ತಿ ಆ್ಯಕ್ಷನ್​​​-ಕಟ್​​​ ಹೇಳುತ್ತಿದ್ದಾರೆ.

ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸುತ್ತಿದ್ದಾರೆ. ಅರವಿಂದ್‌ ಕಶ್ಯಪ್‌ ಛಾಯಾಗ್ರಹಣ ಮಾಡುತ್ತಿದ್ದಾರೆ. ಗುಲ್‌ಮೊಹರ್‌ ಫಿಲ್ಮ್ಸ್‌ ಮತ್ತು ವರುಣ್‌ ಸ್ಟುಡಿಯೋಸ್‌ ಬ್ಯಾನರ್‌ನಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ.

Last Updated : Jan 29, 2021, 7:40 PM IST

ABOUT THE AUTHOR

...view details