ಪವರ್ಸ್ಟಾರ್ ಪುನೀತ್ ರಾಜಕುಮಾರ್ ಸ್ಯಾಂಡಲ್ವುಡ್ನ 'ಚಾಮಯ್ಯ ಮೇಷ್ಟ್ರು' ಕೆ.ಎಸ್. ಅಶ್ವಥ್ ಅವರ ಪುತ್ರ ಶಂಕರ್ ಆಶ್ವಥ್ ಅವರ ಮನೆಗೆ ಭೇಟಿ ನೀಡಿ ಸರ್ಪ್ರೈಸ್ ಕೊಟ್ಟಿದ್ದಾರೆ. ಮನೆಗೆ ಬಂದ ರಾಜಕುಮಾರನಿಗೆ ಶಂಕರ್ ಆಶ್ವಥ್ ಕುಟುಂಬ ಅವರಿಗಿಷ್ಟವಾದ ಉಪ್ಪಿಟ್ಟು ಹಾಗೂ ಕೇಸರಿ ಬಾತ್ ಮಾಡಿ ಉಣಬಡಿಸಿದೆ. ಅಪ್ಪು ಸುಮಾರು 1 ಗಂಟೆಗೂ ಹೆಚ್ಚು ಕಾಲ ಶಂಕರ್ ಅಶ್ವಥ್ ಕುಟುಂಬದ ಜೊತೆ ಮಾತನಾಡಿ ಫೋಟೋ ತೆಗೆಸಿಕೊಂಡಿದ್ದಾರೆ.
ಶಂಕರ್ ಆಶ್ವಥ್ ಮನೆಗೆ ಭೇಟಿ ಕೊಟ್ಟ 'ಯುವರತ್ನ': ಮನಸೋತ 'ಚಾಮಯ್ಯ ಮೇಷ್ಟ್ರ' ಮಗ! - news kannada
'ಯುವರತ್ನ' ಚಿತ್ರದ ಶೂಟಿಂಗ್ನಲ್ಲಿರುವ ಪುನೀತ್ ರಾಜಕುಮಾರ್, ಬ್ಯುಸಿ ಸ್ಕೆಡ್ಯೂಲ್ ನಡುವೆ ಹಲವರನ್ನು ಭೇಟಿ ಮಾಡಿ ಸರ್ಪ್ರೈಸ್ ನೀಡುತ್ತಿದ್ದಾರೆ. ಇತ್ತೀಚೆಗೆ ಬರಿಗಾಲಿನಲ್ಲಿ ಚಾಮುಂಡಿ ಬೆಟ್ಟ ಹತ್ತಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದಿದ್ದರು. ಇದರ ಬೆನ್ನಲ್ಲೇ ಮೈಸೂರಿನಲ್ಲಿ ರಾಕಿಂಗ್ ಸ್ಟಾರ್ ಯಶ್ ಭೇಟಿ ಮಾಡಿ ಅವರ ಜೊತೆ ಊಟ ಸವಿದಿದ್ದರು. ಮತ್ತೆ ಇದೀಗ ಮತ್ತೊಬ್ಬ ಹಿರಿಯ ನಟರನ್ನು ಭೇಟಿ ಮಾಡಿ ಸರ್ಪ್ರೈಸ್ ಕೊಟ್ಟಿದ್ದಾರೆ.
ಶಂಕರ್ ಆಶ್ವಥ್ ಅವರ ಮನೆಗೆ ಭೇಟಿ ಕೊಟ್ಟ ಯುವರತ್ನ
ಈ ಫೋಟೋವನ್ನು ಶಂಕರ್ ಅಶ್ವತ್ ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ತಂದೆ ಮಹಾರಾಜ, ಮಗ ರಾಜಕುಮಾರ. ಅವರ ಎಲ್ಲ ಗುಣಗಳು ಇವರಲ್ಲಿವೆ. ಹೀಗಂತ ನನ್ನ ತಂದೆ ಕೆ.ಎಸ್. ಅಶ್ವಥ್ ನನಗೆ ಹೇಳುತ್ತಿದ್ದರು.
ನನ್ನ ತಂದೆ ಅಪ್ಪು ಸಾರ್ ಜೊತೆ ನಟಿಸಿದ್ದಾರೆ. ಅವಾಗಲೇ ಈ ಮಗುವಿಗೆ ಅಣ್ಣಾವ್ರ ಎಲ್ಲಾ ಅಂಶಗಳು ಇದೆ, ಮುಂದೆ ಇನ್ನೊಬ್ಬ ರಾಜಕುಮಾರ ಆಗುತ್ತಾನೆ ಎಂದು ಹೇಳಿದ್ದರು. ಅದು ಇಂದು ನಿಜವಾಗಿದೆ ಎಂದು ಫೇಸ್ಬುಕ್ನಲ್ಲಿ ನಟ ಶಂಕರ್ ಬರೆದುಕೊಂಡಿದ್ದಾರೆ.