ಸದ್ಯ ಹೈದರಾಬಾದ್‌ನಲ್ಲಿ ಕೋಟಿಗೊಬ್ಬ 3 ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಈ ಸಿನಿಮಾದ ಶೂಟಿಂಗ್ ವೇಳೆ ಕಿಚ್ಚ ಸುದೀಪ್ ಬಾಲಿವುಡ್ ಜೆಂಟಲ್ಮ್ಯಾನ್ ಅಜಯ್ ದೇವಗನ್ ಅವರನ್ನು ಮೀಟ್ ಮಾಡಿದ್ದಾರೆ. ಕೋಟಿಗೊಬ್ಬ 3 ಸಿನಿಮಾ ಶೂಟಿಂಗ್ ಪಕ್ಕದಲ್ಲಿ ಅಜಯ್ ದೇವಗನ್ ಅಭಿನಯದ ತಾನಾಜಿ ಅನ್ಸಂಗ್ ವಾರಿಯರ್ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸುದೀಪ್ ಅಜಯ್ ದೇವಗನ್ ಅವರನ್ನು ಭೇಟಿ ಮಾಡಿದ್ದಾರೆ. ಈ ಸುಂದರ ಕ್ಷಣಗಳ ಪೋಟೊ ತಮ್ಮ ಟ್ವಿಟರ್ಲ್ಲಿ ಹಂಚಿಕೊಂಡಿದ್ದಾರೆ.
ಅವರ ವೈಫ್ನ್ನೂ ನೀವು ಭೇಟಿಯಾಗಿರುತ್ತೀರಿ ಎಂಬುದು ನಂಗೆ ಗೊತ್ತು : ಪತಿ ಕಿಚಾಯಿಸಿದ ಪತ್ನಿ ಪ್ರಿಯಾ - ಪತ್ನಿ ಪ್ರಿಯಾ
ಕನ್ನಡದ ರನ್ನ ಕಿಚ್ಚ ಸುದೀಪ್ ಅವರಿಗೆ ಎಲ್ಲ ಚಿತ್ರರಂಗದಲ್ಲಿ ಸ್ನೇಹಿತರಿದ್ದಾರೆ. ಅದರಲ್ಲೂ ಬಿಟೌನ್ನಲ್ಲಿ ಕಿಚ್ಚನ ಆಪ್ತರು ಸಾಕಷ್ಟು ಇದ್ದಾರೆ. ಸದ್ಯ ಅವರು ನಟ ಅಜಯ್ ದೇವಗನ್ ಅವರನ್ನು ಭೇಟಿಯಾಗಿದ್ದಾರೆ.
ಚಿತ್ರಕೃಪೆ: ಟ್ವಿಟರ್
ಈ ತಾರೆಯರ ಸಮಾಗಮದ ಪೋಟೊಗೆ ಕಾಮೆಂಟ್ ಮಾಡಿರುವ ಸುದೀಪ್ ಪತ್ನಿ ಪ್ರಿಯಾ, ತಮ್ಮ ಗಂಡನನ್ನು ಕಿಚಾಯಿಸಿದ್ದಾರೆ. ಅಜಯ್ ದೇವಗನ್ ಜತೆ ಅವರ ಪತ್ನಿ ಕಾಜೋಲ್ ಅವರನ್ನು ನೀವು ಖುಷಿಯಿಂದಲೇ ಭೇಟಿಯಾಗಿರುತ್ತೀರಿ ಎಂಬುದು ನಂಗೆ ಗೊತ್ತು, ಯಾಕಂದ್ರೆ ನೀವು ಅವರ ದೊಡ್ಡ ಫ್ಯಾನ್ ಎಂದಿದ್ದಾರೆ.