ಕರ್ನಾಟಕ

karnataka

ETV Bharat / sitara

ರೊಮ್ಯಾಂಟಿಕ್ ಲೋಕದಲ್ಲಿ 'ರಾಧೆ ಶ್ಯಾಮ್​' ಡ್ಯುಯೆಟ್... ಪ್ರಭಾಸ್ 20ನೇ ಸಿನಿಮಾದ ಫಸ್ಟ್​ ಲುಕ್​ ರಿಲೀಸ್ - 'ರಾಧೆ ಶ್ಯಾಮ್​' ಸಿನಿಮಾ ಪೋಸ್ಟರ್

ಪ್ರಭಾಸ್​ನ 20ನೇ ಸಿನಿಮಾದ ಫಸ್ಟ್ ಲುಕ್​ ಅನ್ನು ಚಿತ್ರತಂಡವು ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.

prabhas, pooja new movie first look
'ರಾಧೆ ಶ್ಯಾಮ್​'

By

Published : Jul 10, 2020, 1:11 PM IST

ಬಾಹುಬಲಿ ಖ್ಯಾತಿಯ ಡಾರ್ಲಿಂಗ್ ಪ್ರಭಾಸ್​ ಅವರ 20ನೇ ಸಿನಿಮಾದ ಫಸ್ಟ್ ಲುಕ್​ ಅನ್ನು ಚಿತ್ರತಂಡವು ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದೆ. ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ 'ರಾಧೆ ಶ್ಯಾಮ್​' ಸಿನಿಮಾದ ಆಕರ್ಷಕ ಪೋಸ್ಟರ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಸಾಹೋ ಬಳಿಕ ಪ್ರಭಾಸ್​ ಅಭಿನಯದ ಬಹುನಿರೀಕ್ಷಿತ ಹಾಗೂ ಅವರ 20ನೇ ಸಿನಿಮಾ ಇದಾಗಿದ್ದು, ಚಿತ್ರಕ್ಕೆ ತಾತ್ಕಾಲಿಕವಾಗಿ 'ಪ್ರಭಾಸ್​ 20' ಎಂದು ಹೆಸರಿಡಲಾಗಿತ್ತು. ಆದರೆ ಇಂದು ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಟೈಟಲ್​​ ಫಿಕ್ಸ್​ ಮಾಡಿದಂತಾಗಿದೆ.

'ರಾಧೆ ಶ್ಯಾಮ್​' ಸಿನಿಮಾ ಪೋಸ್ಟರ್

1920 ರ ಕಥೆಯೊಂದಿಗೆ ಈ ಚಿತ್ರ ಮೂಡಿಬರಲಿದ್ದು, ನಿರ್ದೇಶಕ ರಾಧಾಕೃಷ್ಣ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಯುವಿ ಕ್ರಿಯೇಷನ್ಸ್ ಮತ್ತು ಗೋಪಿಕೃಷ್ಣ ಫಿಲ್ಮ್ಸ್ ಬ್ಯಾನರ್​ ಅಡಿ ಚಿತ್ರ ನಿರ್ಮಾಣವಾಗುತ್ತಿದೆ. ಸ್ವಲ್ಪಮಟ್ಟಿಗೆ ಚಿತ್ರೀಕರಣ ಮಾಡಲಾಗಿದ್ದು, 2021ರ ಬೇಸಿಗೆ ವೇಳೆಗೆ ತೆರೆಗೆ ಬರಲಿದೆ.

ABOUT THE AUTHOR

...view details