ಪ್ರಮುಖ ತೆಲುಗು ನಿರ್ಮಾಪಕರುಗಳಾದ ಅಲ್ಲು ಅರವಿಂದ್ ಮತ್ತು ಮಧು ಮಂತೇನಾ ಟಾಲಿವುಡ್‌ನಲ್ಲಿ ದೊಡ್ಡ ಬಜೆಟ್ ಸಿನಿಮಾವನ್ನು ತೆರೆಗೆ ತರಲು ನಿರ್ಧರಿಸಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ನ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಇರುವ ವದಂತಿ ಹಬ್ಬಿದೆ. ಈ ಸಿನಿಮಾ ರಾಮಾಯಣ ಎಂಬ ಹೆಸರಿನಲ್ಲಿ ಬರುತ್ತಿದ್ದು, ಇದರಲ್ಲಿ ಹೃತಿಕ್ ರಾಮನ ಪಾತ್ರ ಮಾಡಲಿದ್ದಾರೆ ಎನ್ನಲಾಗಿದೆ. ಹಾಗಾಗಿ ರಾಮನನ್ನು ಹೆದರಿಸಲು ರಾವಣ ಬೇಕು. ಇದೀಗ ರಾವಣನ ಹುಡುಕಾಟದಲ್ಲಿರುವ ಚಿತ್ರ ತಂಡ ಯಾರು ರಾವಣನ ಪಾತ್ರ ನಿರ್ವಹಿಸಲಿದ್ದಾರೆ ಎಂದು ಯೋಚಿಸಿದೆ.
ಅಲ್ಲು ಅರವಿಂದ್ ರಾಮಾಯಣದಲ್ಲಿ "ರಾವಣ"ನಾಗ್ತಾರಾ ಡಾರ್ಲಿಂಗ್ ಪ್ರಭಾಸ್? - ರಾವಣನ ಪಾತ್ರದಲ್ಲಿ ಪ್ರಭಾಸ್
ತೆಲುಗಿನ ಅಲ್ಲು ಅರವಿಂದ್ ನಿರ್ಮಾಣ ಮಾಡುತ್ತಿರುವ ರಾಮಾಯಣ ಸಿನಿಮಾದಲ್ಲಿ ಪ್ರಭಾಸ್ರನ್ನು ರಾವಣನನ್ನಾಗಿ ಮಾಡಲು ಚಿಂತನೆ ನಡೆಸಲಾಗಿದೆ. ಈ ಸಿನಿಮಾದಲ್ಲಿ ಹೃತಿಕ್ ರೋಷನ್ ರಾಮನಾಗುತ್ತಾರಂತೆ. ಅಲ್ಲದೆ, ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಸಹ ನಟಿಸಲಿದ್ದಾರೆ ಎಂದು ಹೇಳಲಾಗಿದೆ.
ಈ ಪಾತ್ರಕ್ಕಾಗಿ ಬಾಹುಬಲಿ ಸಿನಿಮಾದಲ್ಲಿ ಅಮರೇಂದ್ರ ಬಾಹುಬಲಿಯಾಗಿ ಮಿಂಚಿದ ಪ್ರಭಾಸ್ ಅವರನ್ನು ನೇಮಿಸಿಕೊಳ್ಳಲು ಚಿತ್ರ ನಿರ್ಮಾಪಕರು ಯೋಚಿಸಿದ್ದಾರೆ ಎನ್ನಲಾಗಿದೆ. ಆದರೆ, ಈ ವಿಷಯವನ್ನು ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಬಾಲಿವುಡ್ ಸೆಲೆಬ್ರಿಟಿ ನಿರ್ಮಾಪಕ ನಮಿತಾ ಮಲ್ಹೋತ್ರಾ ಕೂಡ ಈ ಚಿತ್ರದ ನಿರ್ಮಾಣದ ಉಸ್ತುವಾರಿ ವಹಿಸಲಿದ್ದಾರೆ ಎನ್ನಲಾಗಿದೆ.
ಪ್ರಭಾಸ್ ಬಾಹುಬಲಿ, ಸಾಹೋ ಸಿನಿಮಾಗಳಲ್ಲಿ ನಟಿಸಿದ್ದು, ಈಗ ದೇಶಾದ್ಯಂತ ದೊಡ್ಡ ಸ್ಟಾರ್ ಆಗಿ ಉದಯಿಸಿದ್ದಾರೆ. ರಾವಣನ ಪಾತ್ರಕ್ಕಾಗಿ ರೆಬೆಲ್ ಸ್ಟಾರ್ ಅನ್ನು ಆಯ್ಕೆ ಮಾಡಲು ಅದು ಒಂದು ಕಾರಣವಾಗಿದೆ ಎಂದು ಹೇಳಲಾಗಿದೆ.