ಕರ್ನಾಟಕ

karnataka

By

Published : Jul 16, 2020, 5:27 PM IST

ETV Bharat / sitara

ಪವರ್ ಸ್ಟಾರ್ ಪುನೀತ್​ ಸಿನಿಮಾ ಜೀವನದ​​​​​​ ದಿ ಬೆಸ್ಟ್ ಸಿನಿಮಾಗಳು ಇವು

ಬಾಲನಟನಾಗಿ ಕರಿಯರ್ ಆರಂಭಿಸಿದ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಾಯಕ ನಟನಾಗಿ 29 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವುಗಳಲ್ಲಿ ಕೆಲವೊಂದು ಬೆಸ್ಟ್ ಸಿನಿಮಾಗಳು ಇಂದಿಗೂ ಅಭಿಮಾನಿಗಳ ಮೋಸ್ಟ್ ಫೇವರೆಟ್ ಆಗಿದೆ.

Power star puneet rajkumar best movies
ಪುನೀತ್​ ರಾಜ್​ಕುಮಾರ್ ವೃತ್ತಿ ಬದುಕಿನ ಬೆಸ್ಟ್ ಸಿನಿಮಾಗಳು

ಕನ್ನಡ ಚಿತ್ರರಂಗದಲ್ಲಿ ಹೈ ಪ್ರೊಫೈಲ್ ಹೀರೋ ಎಂದು ಕರೆಸಿಕೊಂಡಿರುವ ನಟ ಪುನೀತ್ ರಾಜ್ ಕುಮಾರ್ ಎರಡು ತಿಂಗಳ ಮಗುವಾಗಿದ್ದಾಗಲೇ ಬೆಳ್ಳಿ ತೆರೆ ಮೇಲೆ ಮಿಂಚಿದ ಏಕೈಕ ನಟ. ಆಗಲೇ ಪುನೀತ್​​​​ಗೆ ಸಾಕಷ್ಟು ಅಭಿಮಾನಿಗಳಿದ್ದರು.

ಈ 'ಬೆಟ್ಟದ ಹೂವು' ಕನ್ನಡ ಚಿತ್ರರಂಗದಲ್ಲಿ ನಾಲ್ಕು ದಶಕಗಳನ್ನು ಪೂರೈಸಿದೆ. ಬಾಲ್ಯದಲ್ಲೇ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿರುವ ಪುನೀತ್ ನಂತರ ಹೀರೋ ಆಗಿ 29 ಸಿನಿಮಾಗಳಲ್ಲಿ ಮಿಂಚಿದ್ದಾರೆ. ಸದ್ಯಕ್ಕೆ ಅವರ 'ಯುವರತ್ನ' ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಪವರ್​ ಸ್ಟಾರ್ ಅಭಿನಯದ ಎಲ್ಲಾ ಸಿನಿಮಾಗಳೂ ಅಭಿಮಾನಿಗಳಿಗೆ ಇಷ್ಟ. ಅವುಗಳಲ್ಲಿ ದಿ ಬೆಸ್ಟ್ ಎನಿಸಿಕೊಂಡ ಸಿನಿಮಾಗಳ ಬಗ್ಗೆ ಒಂದಷ್ಟು ಮಾಹಿತಿ.

ಪುನೀತ್​ ರಾಜ್​ಕುಮಾರ್ ವೃತ್ತಿ ಬದುಕಿನ ಬೆಸ್ಟ್ ಸಿನಿಮಾಗಳು

ಅಪ್ಪು

'ಅಪ್ಪು' ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ 2002ರಲ್ಲಿ ಪುನೀತ್ ರಾಜ್​​​​​​​​​​​​​​​ಕುಮಾರ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಬಾಲ್ಯದಲ್ಲೇ ಉತ್ತಮ ನಟನೆಗಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಪಡೆದ ಪವರ್ ಸ್ಟಾರ್,​​​​ ನಾಯಕನಾಗಿ ನಟಿಸಿದ ಚೊಚ್ಚಲ ಸಿನಿಮಾದಲ್ಲೇ ಸೆಂಚುರಿ ಬಾರಿಸಿ ಕೋಟ್ಯಂತರ ಅಭಿಮಾನಿಗಳ ಪ್ರೀತಿಯ ಅಪ್ಪು ಆಗಿದ್ದಾರೆ. ವಜ್ರೇಶ್ವರಿ ಕಂಬೈನ್ಸ್ ಬ್ಯಾನರ್​ ಅಡಿಯಲ್ಲಿ ನಿರ್ಮಾಣ ಆಗಿದ್ದ 'ಅಪ್ಪು' ಚಿತ್ರದಲ್ಲಿ ಕ್ರೇಜಿ ಕ್ವೀನ್ ರಕ್ಷಿತಾ ಪುನೀತ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರವನ್ನು ನಿರ್ದೇಶಿಸಿರುವುದು ಟಾಲಿವುಡ್ ನಿರ್ದೇಶಕ ಪುರಿ ಜಗನ್ನಾಥ್, ಅಂದಿನ ದಿನಗಳಲ್ಲೇ 3 ಕೋಟಿ ಬಜೆಟ್​​​​​​​​​​​​​​​​​ನಲ್ಲಿ ನಿರ್ಮಾಣ ಆಗಿದ್ದ ಅಪ್ಪು ಸಿನಿಮಾ, 7 ಕೋಟಿ ಕಲೆಕ್ಷನ್ ಮಾಡಿದೆ.

ಪುನೀತ್​ ರಾಜ್​ಕುಮಾರ್ ವೃತ್ತಿ ಬದುಕಿನ ಬೆಸ್ಟ್ ಸಿನಿಮಾಗಳು

ಅಭಿ

ಅಪ್ಪು ಚಿತ್ರದ ನಂತರ 2003ರಲ್ಲಿ ಸೆಂಚುರಿ ಬಾರಿಸಿದ ಪುನೀತ್ ಅಭಿನಯದ ಚಿತ್ರ 'ಅಭಿ'. ಇದೂ ಕೂಡಾ ವಜ್ರೇಶ್ವರಿ ಕಂಬೈನ್ಸ್ ಅಡಿ ತಯಾರಾದ ಚಿತ್ರ. ಹಿಂದೂ ಯುವಕ, ಮುಸ್ಲಿಂ ಯುವತಿ ಪ್ರೇಮಕಥೆ ಹೊಂದಿರುವ ಸಿನಿಮಾವನ್ನು 3 ಕೋಟಿ ರೂಪಾಯಿ ಬಜೆಟ್​​​ನಲ್ಲಿ ನಿರ್ಮಾಣ ಮಾಡಲಾಗಿತ್ತು. ಪುನೀತ್ ಹಾಗೂ ರಮ್ಯಾ ಜೋಡಿ ಅಭಿಮಾನಿಗಳಿಗೆ ಇಷ್ಟವಾಗಿ 7 ಕೋಟಿ ರೂಪಾಯಿ ಲಾಭ ಮಾಡಿತ್ತು.

ಪುನೀತ್​ ರಾಜ್​ಕುಮಾರ್ ವೃತ್ತಿ ಬದುಕಿನ ಬೆಸ್ಟ್ ಸಿನಿಮಾಗಳು

ಮೌರ್ಯ

ಅಮ್ಮನ ಪ್ರೀತಿ, ಬಾಕ್ಸಿಂಗ್ ಆಟ ಎರಡನ್ನೂ ಒಳಗೊಂಡ 'ಮೌರ್ಯ' ಸಿನಿಮಾ ಕೂಡಾ ಅಪ್ಪು ಕರಿಯರ್​​ನಲ್ಲಿ ಬೆಸ್ಟ್ ಸಿನಿಮಾ. ಈ ಚಿತ್ರದಲ್ಲಿ ಅಪ್ಪು ಜೊತೆ ಮಲಯಾಳಂ ಬೆಡಗಿ ಮೀರಾ ಜಾಸ್ಮಿನ್ ರೊಮ್ಯಾನ್ಸ್ ಮಾಡಿದ್ದರು. ಎಸ್​. ನಾರಾಯಣ್ ನಿರ್ದೇಶನದ ಮೌರ್ಯ ಸಿನಿಮಾ 4 ಕೋಟಿ ಬಜೆಟ್​​​ನಲ್ಲಿ ನಿರ್ಮಾಪಕ ರಾಕ್​​​ಲೈನ್​​ ವೆಂಕಟೇಶ್ ನಿರ್ಮಾಣ ಮಾಡಿದ್ರು. 2004ರಲ್ಲಿ ತೆರೆ ಕಂಡಿದ್ದ ಮೌರ್ಯ ಸಿನಿಮಾ ಬಾಕ್ಸ್ ಆಫೀಸ್​​​​​​​ನಲ್ಲಿ 8 ಕೋಟಿ ಕಲೆಕ್ಷನ್ ಮಾಡಿತ್ತಂತೆ.

ಪುನೀತ್​ ರಾಜ್​ಕುಮಾರ್ ವೃತ್ತಿ ಬದುಕಿನ ಬೆಸ್ಟ್ ಸಿನಿಮಾಗಳು

ಆಕಾಶ್​​​

ಪ್ರೀತಿ ಜೊತೆಗೆ ಸಮಾಜಕ್ಕೆ ಒಂದು ಸಂದೇಶ ನೀಡಿದ್ದ ಸಿನಿಮಾ 'ಆಕಾಶ್'. ನಿರ್ದೇಶಕ ಮಹೇಶ್ ಬಾಬು ಚೊಚ್ಚಲ ನಿರ್ದೇಶನದಲ್ಲಿ ಸಕ್ಸಸ್ ಕಂಡ ಚಿತ್ರ. ಅಚ್ಚರಿ ವಿಷಯ ಅಂದ್ರೆ ರಾಜ್​​​​​​​ಕುಮಾರ್​​​​​​​​​​​​​ ಬ್ಯಾನರ್​​​​​​​​​​ನಲ್ಲಿ ನಿರ್ಮಾಣವಾದ ಸಿನಿಮಾಗಳಲ್ಲಿ ಮೊದಲ ಬಾರಿ ವಿದೇಶದಲ್ಲಿ ಶೂಟಿಂಗ್ ಆದ ಸಿನಿಮಾ ಆಕಾಶ್ ಎನ್ನುವುದು. ಇದು ಕೂಡಾ ಪುನೀತ್ ಅವರಿಗೆ ದೊಡ್ಡ ಮಟ್ಟದ ಬ್ರೇಕ್ ಕೊಟ್ಟ ಚಿತ್ರ. ಆ ದಿನಗಳಲ್ಲಿ ಪಾರ್ವತಮ್ಮ ರಾಜ್​​​​​​​​​​​​​​​​​​ಕುಮಾರ್ 5 ಕೋಟಿ ಬಜೆಟ್​​​​​​​​ನಲ್ಲಿ ಈ ಸಿನಿಮಾ ಮಾಡಿದ್ರಂತೆ. ಈ ಸಿನಿಮಾ ಕಲೆಕ್ಷನ್ ಮಾಡಿದ್ದು ಬರೋಬ್ಬರಿ 12 ಕೋಟಿ.

ಪುನೀತ್​ ರಾಜ್​ಕುಮಾರ್ ವೃತ್ತಿ ಬದುಕಿನ ಬೆಸ್ಟ್ ಸಿನಿಮಾಗಳು

ಅರಸು

ಆಕಾಶ್​​​​ನಂತ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದ ನಿರ್ದೇಶಕ ಮಹೇಶ್ ಬಾಬು, ಮತ್ತೆ ಪವರ್ ಸ್ಟಾರ್​ಗೆ ಆ್ಯಕ್ಷನ್ ಕಟ್ ಹೇಳಿದ ಸಿನಿಮಾ 'ಅರಸು'. 2007ರಲ್ಲಿ ತೆರೆ ಕಂಡ ಅರಸು ಸಿನಿಮಾ, ಪುನೀತ್ ರಾಜ್ ಕುಮಾರ್ ಕೆರಿಯರ್​​​​​​ನಲ್ಲಿ ಆಲ್ ಟೈಮ್ ರೆಕಾರ್ಡ್ ಸಿನಿಮಾವಾಗಿದೆ. ಎನ್​​ಆರ್​ಐ ವ್ಯಕ್ತಿ, ಸಾಮಾನ್ಯ ವ್ಯಕ್ತಿಯಾಗಿ ಜೀವನ ನಡೆಸಿ ಕಷ್ಟ ಸುಖಗಳನ್ನು ಅರಿತುಕೊಳ್ಳುವ ಪಾತ್ರದಲ್ಲಿ ಪುನೀತ್, ಅದ್ಭುತವಾಗಿ ನಟಿಸಿದ್ರು. ಹಿಟ್ ಜೋಡಿಗಳಾಗಿದ್ದ ರಮ್ಯಾ ಹಾಗೂ ಮೀರಾ ಜಾಸ್ಮಿನ್ ಈ ಚಿತ್ರದಲ್ಲಿ ಪುನೀತ್ ಜೊತೆ ನಟಿಸಿದ್ರು. ಅಣ್ಣಾವ್ರ ಬ್ಯಾನರ್​​ನಲ್ಲಿ 7 ಕೋಟಿ ಬಜೆಟ್​​​​ನಲ್ಲಿ ಅರಸು ಸಿನಿಮಾ ನಿರ್ಮಾಣ ಮಾಡಲಾಗಿತ್ತು. ಆದರೆ ಈ ಸಿನಿಮಾ ಅಂದಿನ ದಿನಗಳಲ್ಲಿ 13 ಕೋಟಿ ಕಲೆಕ್ಷನ್ ಮಾಡಿತ್ತು ಅನ್ನೋದು ಪವರ್ ಸ್ಟಾರ್ ಆಪ್ತರ ಮಾತು.

ಪುನೀತ್​ ರಾಜ್​ಕುಮಾರ್ ವೃತ್ತಿ ಬದುಕಿನ ಬೆಸ್ಟ್ ಸಿನಿಮಾಗಳು

ಮಿಲನ

ಇನ್ನು ಪುನೀತ್ ರಾಜ್​​​​​​​​​ಕುಮಾರ್ ಸಿನಿಮಾ ಜರ್ನಿಯಲ್ಲಿ ಮೆಗಾ ಹಿಟ್ ಎಂದು ಕರೆಸಿಕೊಂಡ ಸಿನಿಮಾ ಮಿಲನ. ಪುನೀತ್ ಈ ಹಿಂದಿನ ಸಿನಿಮಾಗಳಿಗಿಂತ ಮತ್ತಷ್ಟು ಸ್ಟೈಲಿಷ್ ಆಗಿ ರೇಡಿಯೋ ಜಾಕಿಯಾಗಿ ಬೆಳ್ಳಿ ತೆರೆ ಮೇಲೆ ಮೋಡಿ ಮಾಡಿದ್ರು. ಪ್ರಕಾಶ್ ನಿರ್ದೇಶನ ಮಾಡಿದ್ದ ಮಿಲನ ಬರೋಬ್ಬರಿ ಒಂದು ವರ್ಷ ಪ್ರದರ್ಶನಗೊಂಡಿತ್ತು. 8 ಕೋಟಿ ಬಜೆಟ್​​​​​ನಲ್ಲಿ ತಯಾರದ ಮಿಲನ ಕಲೆಕ್ಷನ್ ಮಾಡಿದ್ದು 16 ಕೋಟಿ ರೂಪಾಯಿ. ಪವರ್ ಸ್ಟಾರ್ ಮತ್ತು ಪಾರ್ವತಿ ಮೆನನ್ ಜೋಡಿ ಫ್ಯಾಮಿಲಿ ಆಡಿಯನ್ಸ್​​ಗೆ ಇಷ್ಟ ಆಗಿತ್ತು.

ಪುನೀತ್​ ರಾಜ್​ಕುಮಾರ್ ವೃತ್ತಿ ಬದುಕಿನ ಬೆಸ್ಟ್ ಸಿನಿಮಾಗಳು

ರಾಮ್​​​​​​

2009ರಲ್ಲಿ ಪುನೀತ್ ರಾಜ್ ಕುಮಾರ್ ಸೂಪರ್ ಹಿಟ್ ಕೊಟ್ಟ ಸಿನಿಮಾ 'ರಾಮ್'. ಫ್ಯಾಮಿಲಿ ಕಥೆ ಆಧರಿಸಿ ಬಂದ ಈ ಚಿತ್ರದಲ್ಲಿ, ಪುನೀತ್ ರಾಜ್​​​​ಕುಮಾರ್ ಹಾಗೂ ಪ್ರಿಯಾಮಣಿ ಜೋಡಿ ಪ್ರೇಕ್ಷಕರಿಗೆ ಸಖತ್ ಇಷ್ಟ ಆಗಿತ್ತು. ನಿರ್ಮಾಪಕ ಆದಿತ್ಯ ಬಾಬು ಆ ಕಾಲದಲ್ಲಿ 9 ಕೋಟಿ ಖರ್ಚು ಮಾಡಿ ಈ ಸಿನಿಮಾ ಮಾಡಿದ್ರು. ನಿರ್ದೇಶಕ ಕೆ. ಮಾದೇಶ ನಿರ್ದೇಶನದ ರಾಮ್ ಸಿನಿಮಾ ಕೂಡಾ ಗಲ್ಲಾ ಪೆಟ್ಟಿಗೆಯಲ್ಲಿ 18 ಕೋಟಿ ಕಲೆಕ್ಷನ್ ಮಾಡಿತ್ತು.

ಪುನೀತ್​ ರಾಜ್​ಕುಮಾರ್ ವೃತ್ತಿ ಬದುಕಿನ ಬೆಸ್ಟ್ ಸಿನಿಮಾಗಳು

ಪೃಥ್ವಿ

ಲವರ್ ಬಾಯ್ ಹಾಗೂ ಫ್ಯಾಮಿಲಿ ಹೀರೋ ಆಗಿ ಕಾಣಿಸಿಕೊಂಡಿದ್ದ, ಪವರ್​​ ಸ್ಟಾರ್ ಮೊದಲ ಬಾರಿ ಐಪಿಎಸ್ ಅಧಿಕಾರಿಯಾಗಿ ಕಾಣಿಸಿಕೊಂಡ ಸಿನಿಮಾ ಪೃಥ್ವಿ. ಗಣಿಗಾರಿಕೆ ಬಗ್ಗೆ ಕಥೆ ಆಧರಿಸಿ ಬಂದ ಈ ಸಿನಿಮಾವನ್ನು ನಿರ್ಮಾಪಕ ಎನ್​.ಎಸ್​. ರಾಜಕುಮಾರ್ 10 ಕೋಟಿ ಬಜೆಟ್​​​ನಲ್ಲಿ ನಿರ್ಮಾಣ ಮಾಡಿದ್ದರು. ಆ ಕಾಲದಲ್ಲೇ ಪೃಥ್ವಿ ಸಿನಿಮಾ ಡಬ್ಬಲ್ ಕಲೆಕ್ಷನ್ ಮಾಡಿತ್ತು ಅನ್ನೋದು ಗಾಂಧಿನಗರದ ಸಿನಿಮಾ ಪಂಡಿತರ ಮಾತು.

ಪುನೀತ್​ ರಾಜ್​ಕುಮಾರ್ ವೃತ್ತಿ ಬದುಕಿನ ಬೆಸ್ಟ್ ಸಿನಿಮಾಗಳು

ಜಾಕಿ

ಪೃಥ್ವಿ ಸಿನಿಮಾ ನಂತ್ರ ಪುನೀತ್ ರಾಜ್​​​​​​​​​​​ಕುಮಾರ್ ಮತ್ತೊಂದು ಬ್ಲಾಕ್ ಬ್ಲಸ್ಟರ್ ಸಿನಿಮಾ ನೀಡಿದರು. ಅದೇ ದುನಿಯಾ ಸೂರಿ ನಿರ್ದೇಶನದ 'ಜಾಕಿ'. ಮಾಸ್ ಎಲಿಮೆಂಟ್ಸ್ ಜೊತೆ ಹೆಣ್ಣು ಮಕ್ಕಳ ಮಾರಾಟದ ಕಥೆ ಆಧರಿಸಿ ಬಂದ ಜಾಕಿ ಸಿನಿಮಾದಲ್ಲಿ, ಪವರ್ ಸ್ಟಾರ್ ಪಕ್ಕಾ ಲೋಕಲ್ ಕ್ಯಾರೆಕ್ಟರ್ ಮಾಡಿದ್ದರು. ದುನಿಯಾ ಸೂರಿ ನಿರ್ದೇಶನದ ಈ ಚಿತ್ರವನ್ನು 10 ಕೋಟಿ ಬಜೆಟ್​​​​​​​​​​​​ನಲ್ಲಿ ಪಾರ್ವತಮ್ಮ ರಾಜ್​​​​ಕುಮಾರ್ ನಿರ್ಮಾಣ ಮಾಡಿದ್ರು. ಕಲೆಕ್ಷನ್ ಮಾಡಿದ್ದು 20 ಕೋಟಿಗೆ ಹೆಚ್ಚು ಅಂತಾ ಒಮ್ಮೆ ರಾಘವೇಂದ್ರ ರಾಜ್​​​​​ಕುಮಾರ್ ಹೇಳಿಕೊಂಡಿದ್ದರು. ಈ ಚಿತ್ರದಲ್ಲಿ ಪುನೀತ್ ಜೊತೆ ಭಾವನಾ ಜೋಡಿ ಸೂಪರ್ ಆಗಿತ್ತು.

ಪುನೀತ್​ ರಾಜ್​ಕುಮಾರ್ ವೃತ್ತಿ ಬದುಕಿನ ಬೆಸ್ಟ್ ಸಿನಿಮಾಗಳು

ರಾಜಕುಮಾರ

ಪವರ್ ಸ್ಟಾರ್ ಇಷ್ಟು ಸಿನಿಮಾಗಳ ದಾಖಲೆಯನ್ನು, ತಾವೇ ಮುರಿದ ಸಿನಿಮಾ 'ರಾಜಕುಮಾರ'. ಒಬ್ಬ ಅನಾಥ ಹುಡುಗ ಶ್ರೀಮಂತನ ಮಗನಾಗಿ ನಂತರ ತಂದೆಗೆ ಅಂಟಿರುವ ಆರೋಪವನ್ನು ಅದು ಸುಳ್ಳು ಎಂದು ನಿರೂಪಿಸುವ ಪಾತ್ರ. ಡಾ ರಾಜ್​​​​​​​​ಕುಮಾರ್ ಸ್ಫೂರ್ತಿ ಹೊಂದಿದ್ದ ರಾಜಕುಮಾರ ಚಿತ್ರ, ಪವರ್ ಸ್ಟಾರ್ ಸಿನಿಮಾ ಕೆರಿಯರ್​​​​​​​​​​​​​​​​ನಲ್ಲಿ ಆಲ್ ಟೈಮ್ ರೆಕಾರ್ಡ್ ಸಿನಿಮಾವಾಗಿದೆ. ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ 25 ಕೋಟಿ ಬಜೆಟ್​​​ನಲ್ಲಿ ನಿರ್ಮಾಣ ಮಾಡಲಾಗಿತ್ತು. ಈ ಚಿತ್ರ ಬಾಕ್ಸ್ ಆಫೀಸ್​​​​ನಲ್ಲಿ ಲೂಟಿ ಮಾಡಿದ್ದು ಬರೋಬ್ಬರಿ 50 ಕೋಟಿ ರೂಪಾಯಿಗೂ ಹೆಚ್ಚು ಅನ್ನೋದು ಇಡೀ ಚಿತ್ರರಂಗಕ್ಕೆ ಗೊತ್ತಿದೆ.

ಇದಿಷ್ಟೂ ಪವರ್ ಸ್ಟಾರ್ ಪುನೀತ್ ರಾಜ್​​​​​​​​​​​ಕುಮಾರ್ ದಿ ಬೆಸ್ಟ್ ಸಿನಿಮಾಗಳ ಇಂಟ್ರಸ್ಟ್ರಿಂಗ್ ಕಹಾನಿ.

ABOUT THE AUTHOR

...view details